* ಬ್ಯಾಗ್ ಬಗ್ಗೆ ವಿಚಾರಿಸಲು ಕರೆ ಮಾಡಿದರೂ ಸ್ಪಂದಿಸದ ಇಂಡಿಗೋ
* ವೆಬ್ ಹ್ಯಾಕ್ ಮಾಡಿ ಬ್ಯಾಗ್ ಮರಳಿ ಪಡೆದ ಟೆಕ್ಕಿ
* ಡೇಟಾ ಗೌಪ್ಯತೆಗೆ ಸಂಸ್ಥೆ ಬದ್ಧ: ಇಂಡಿಗೋ ಸ್ಪಷ್ಟನೆ
ಬೆಂಗಳೂರು(ಏ.01): ಪ್ರಯಾಣದ ವೇಳೆ ಅದಲು ಬದಲಾಗಿದ್ದ ಬ್ಯಾಗನ್ನು ಹಿಂಪಡೆದುಕೊಳ್ಳಲು ಪ್ರಯಾಣಿಕರೊಬ್ಬರು(Passenger) ಇಂಡಿಗೋ ವೆಬ್‌ಸೈಟನ್ನೇ(Indigo Website) ಹ್ಯಾಕ್(Hack) ಮಾಡಿರುವ ಘಟನೆ ನಡೆದಿದೆ.
ಹೌದು, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್(Software Engineer) ಆಗಿರುವ ಕುಮಾರ್ ಎಂಬವರು ಭಾನುವಾರ ಪಟನಾದಿಂದ(Patna) ಬೆಂಗಳೂರಿಗೆ(Bengaluru) ಇಂಡಿಗೋ ವಿಮಾನದಲ್ಲಿ(Flight) ಪ್ರಯಾಣಿಸಿದ್ದರು. ಮನೆಗೆ ತೆರಳಿದ ನಂತರ ಬ್ಯಾಗ್ ಅದಲು ಬದಲಾಗಿದೆ. ಎರಡೂ ಬ್ಯಾಗುಗಳೂ ಒಂದೇ ತರ ಇದ್ದಿದ್ದುದ್ದರಿಂದ ಈ ಅಚಾತುರ‍್ಯ ನಡೆದಿದೆ ಎಂಬುದು ಗಮನಕ್ಕೆ ಬಂದಿದೆ. ತಕ್ಷಣ ಇಂಡಿಗೋ ಕಸ್ಟಮರ್ ಕೇರ್ ಸಂಪರ್ಕಿಸಿ ಹಲವು ಬಾರಿ ಕರೆ ಮಾಡಿ, ಉದ್ದುದ್ದ ಸರತಿಯಲ್ಲಿ ನಿಂತು ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪ್ರಯಾಣಿಕರ ಮಾಹಿತಿ ಒದಗಿಸಿ ಎಂದರೂ ವಿಮಾನಯಾನ ಸಂಸ್ಥೆ ಗೌಪ್ಯತೆ ಕಾರಣದಿಂದ ಒದಗಿಸಿಲ್ಲ.
Team India ನಾಯಕ ರೋಹಿತ್ ಶರ್ಮಾ ಟ್ವಿಟರ್ ಖಾತೆ ಹ್ಯಾಕ್? ಕಾಲೆಳೆದ ಚಹಲ್..!
ಇದರಿಂದ ನಿರಾಶರಾದ ಕುಮಾರ್ ಸ್ವತಃ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹ್ಯಾಕ್ ಮಾಡಿ, ಸಹ ಪ್ರಯಾಣಿಕರ ಪಿಎನ್‌ಆರ್ ನಂಬರ್ ಪತ್ತೆ ಹಚ್ಚಿ, ವಿಳಾಸ ಪಡೆದು ಬ್ಯಾಗ್(Bag) ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕುಮಾರ್ ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಕಂಪ್ಯೂಟರ್‌ನ ಎಫ್12 ಬಟನ್ ಒತ್ತಿದೆ. ಕೂಡಲೇ ವೆಬ್‌ಸೈಟಿನ ಡೆವಲಪರ್ ಕನ್ಸೋಲ್ ತೆರೆಯಿತು. ಬಳಿಕ ಚೆಕ್-ಇನ್, ಪ್ರಯಾಣಿಕರು ವಿಳಾಸ, ಫೋನ್ ನಂಬರ್, ಪಿಎನ್‌ಆರ್ ನಂಬರ್(PNR Number) ಸೇರಿದಂತೆ ಅನೇಕ ಮಾಹಿತಿಗಳು ಲಭ್ಯವಾಯಿತು’ ಎಂದು ತಿಳಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಡಿಗೋ, ‘ಡೇಟಾ ಗೌಪ್ಯತೆಗೆ(Data Privacy) ಸಂಸ್ಥೆಯು ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ತಿಳಿಸಿದೆ.
ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದ ಚುನಾವಣಾ ಆಯುಕ್ತ
ನವದೆಹಲಿ: ಉತ್ತರಪ್ರದೇಶದಲ್ಲಿ ಇವಿಎಂ ತಿರುಚಲಾಗಿದೆ ಎಂದು ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಭಾರತದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Chief Election Commissioner Sushil Chandra) ಅವರು, ಯಾರಿಂದಲೂ ವಿದ್ಯುದ್ಮಾನ ಮತಯಂತ್ರ(ಇವಿಎಂ)ವನ್ನು (EVM) ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
‘ಮತಕೇಂದ್ರದ ಬಳಿ ನಡೆಯುವ ವಿದ್ಯಮಾನಗಳು ಬಿಗಿ ಭದ್ರತೆ ಮಧ್ಯೆ ಸುರಕ್ಷಿತವಾಗಿ, ಪಾರದರ್ಶಕತೆಯಿಂದ ಎಲ್ಲಾ ರಾಜಕೀಯ ಪಕ್ಷಗಳ ಮುಂದೆಯೇ ನಡೆಯುತ್ತದೆ’ ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ (Akhilesh Yadav ) ಮಾಡಿದ್ದ ಇವಿಎಂ ತಿರುಚಿದ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಇದು ಕೇವಲ ಮತದಾರರನ್ನು ದಾರಿ ತಪ್ಪಿಸುವ ಪ್ರಯತ್ನ, ವಾರಾಣಸಿಯಲ್ಲಿ (Varanasi) ಇವಿಎಂಗಳು ತರಬೇತಿ ಉದ್ದೇಶಕ್ಕಾಗಿ ಹೊರಗಿವೆ. ಮತದಾನಕ್ಕೆ ಬಳಸುವ ಇವಿಎಂ ಸುರಕ್ಷಿತವಾದ್ದು’ ಎಂದು ಒತ್ತಿ ಹೇಳಿದ್ದರು.
BJP ಅಧ್ಯಕ್ಷ ಜೆ.ಪಿ ನಡ್ಡಾ ಟ್ವೀಟರ್ ಹ್ಯಾಕ್: ಉಕ್ರೇನ್ ಬಿಕ್ಕಟ್ಟು-ಕ್ರಿಪ್ಟೋಕರೆನ್ಸಿ ಬಗ್ಗೆ ಟ್ವೀಟ್
‘ಇವಿಎಂ ಸಂಪೂರ್ಣ ಸುರಕ್ಷಿತ ಯಂತ್ರ, ಅದನ್ನು ಹ್ಯಾಕ್ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದರು. ಇವಿಎಂ ಬಗ್ಗೆ ಪ್ರತಿಯೊಬ್ಬ ಭಾರತೀಯ ನಾಗರಿಕ ಹೆಮ್ಮೆ ಪಡಬೇಕು’ ಎಂದಿದ್ದರು.
ಯುಪಿಯಲ್ಲಿ ಇವಿಎಂ ಅಕ್ರಮ: 3 ಚುನಾವಣಾಧಿಕಾರಿಗಳ ವಜಾ
ಲಖನೌ: ಇವಿಎಂ ಅಕ್ರಮ ಹಿನ್ನೆಲೆಯಲ್ಲಿ ವಾರಾಣಸಿಯ ಇವಿಎಂಗಳ ನೋಡಲ್ ಅಧಿಕಾರಿ, ಸೋನ್‌ಭದ್ರ ಜಿಲ್ಲೆಯ ಚುನಾವಣಾಧಿಕಾರಿ ಮತ್ತು ಬರೇಲಿ ಜಿಲ್ಲೆಯ ಹೆಚ್ಚುವರಿ ಅಧಿಕಾರಿ ಸೇರಿದಂತೆ ಮೂವರನ್ನು ಬುಧವಾರ ಚುನಾವಣಾ ಆಯೋಗ ಉತ್ತರಪ್ರದೇಶದ ಚುನಾವಣಾ ಕರ್ತವ್ಯದಿಂದ ವಜಾಗೊಳಿಸಿದೆ. ಸಮಾಜವಾದಿ ಪಕ್ಷ ವಾರಾಣಸಿಯಿಂದ ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಮಂಗಳವಾರ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಶಿಷ್ಟಾಚಾರ ಉಲ್ಲಂಘನೆ ಕಾರಣಕ್ಕೆ ಮತ ಎಣಿಕೆ ಹಿಂದಿನ ದಿನ ಈ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಹಿಂಪಡೆಯಲಾಗಿದೆ. ಬುಧವಾರದ ಬದಲು ಮಂಗಳವಾರವೇ ಇವಿಎಂ ಸ್ಥಳಾಂತರಿದ ಆರೋಪ ಇವರ ಮೇಲಿತ್ತು.