ಡಾಬಸ್ ಪೇಟೆಯಲ್ಲಿ ವಾಯುವಿಹಾರಕ್ಕೆ ತೆರಳಿದ ಜನರಿಗೆ ಸಿಕ್ಕಿತು ನವಜಾತ ಗಂಡು ಶಿಶು!

By Gowthami K  |  First Published Sep 4, 2022, 7:35 PM IST

 ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ವೀರಸಾಗರ ರಸ್ತೆಯ ಬಳಿ ವಾಯುವಿಹಾರಕ್ಕೆ ತೆರಳಿದ ಜನರಿಗೆ ನವಜಾತ ಗಂಡು ಶಿಶು ಪತ್ತೆಯಾಗಿದೆ.  ಡಾಬಾಸ್ ಪೇಟೆ  ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ನೀಡಲಾಗಿದೆ.


ವರದಿ: ಟಿ.ಮಂಜುನಾಥ ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್

ನೆಲಮಂಗಲ (ಸೆ.4): ಅಮ್ಮನ ಮಡಿಲಲ್ಲಿ, ಅಪ್ಪನ ನೆರಳಲ್ಲಿ ನೆಮ್ಮದಿಯಿಂದ ನಿದ್ರಿಸಬೇಕಿದ್ದ ಮುಗ್ಧ ಕಂದ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಕ್ಕಳಿಲ್ಲ ಎಂದು ಎಷ್ಟೋ ಜನ ದೇವರ ಮೊರೆ ಹೋಗುವುದನ್ನು ನೋಡಿದ್ದೇವೆ ಹರಕೆ ಹೊರುವುದನ್ನು ನೋಡಿದ್ದೇವೆ. ಆದರೆ ದೇವರು ಎಂತಹ ಕ್ರೂರಿ ಎಂದರೆ ಬೇಡುವ ಭಕ್ತರಿಗೆ ಸಂತಾನ ಭಾಗ್ಯ ಕರುಣಿಸುವುದಿಲ್ಲ. ಯಾಕೀ ಮಾತನ್ನು ಹೇಳುತ್ತಿದ್ದೇವೆ ಎಂದರೆ  ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ವೀರಸಾಗರ ರಸ್ತೆಯ ಬಳಿ ವಾಯುವಿಹಾರಕ್ಕೆ ತೆರಳಿದ ಜನರಿಗೆ ನವಜಾತ ಗಂಡು ಶಿಶು ಪತ್ತೆಯಾಗಿದೆ. ಇನ್ನೂ ಕಣ್ಣೇ ಬಿಡದ ಪುಟ್ಟ ಕಂದನನ್ನ ರಸ್ತೆ ಬದಿಯೇ ನಿರ್ದಯಿ ತಾಯಿಯೊರ್ವಳು ಬಿಸಾಡಿ ಹೋಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ, ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆಗೆ ಸಮೀಪದ ವೀರಸಾಗರ ರಸ್ತೆಯ ಪಕ್ಕದಲ್ಲೇ ಪತ್ತೆಯಾಗಿದೆ, ಇಷ್ಟೊಂದು ಸುಂದರವಾಗಿರುವ ಗಂಡು ಮಗುವನ್ನ ಎಸೆದಿರುವ ಆ ಮಹಿಳೆ ಇನ್ನೇಷ್ಟು ನಿಷ್ಕರುಣಿ ಇರಬಹುದು,  ಅದೃಷ್ಟವಶಾತ್ ವಾಯು ವಿಹಾರಕ್ಕೆ ತೆರಳಿದ್ದವರಿಗೆ ಕ್ಷೀಣಿಸಿದ ಮಗುವಿನ ದ್ವನಿ ಕೇಳಿಸಿದಕ್ಕೆ ಮಗು ಸುರಕ್ಷಿತವಾಯ್ತು ಆ ಸುಂದರಾಗಿರುವ ಪುಟ್ಟ ಕಂದ. 

Latest Videos

undefined

 ಆಗಷ್ಟೇ ಜನಿಸಿದ್ದ ಪುಟ್ಟ ಕಂದನನ್ನ ಶುಚಿಗೊಳಿಸಿ ವೀರಸಾಗರ ರಸ್ತೆಯ ಪೊದೆಯೊಳಗೆ ಬ್ಯಾಗ್ ನೊಳಗೆ ಬಟ್ಟೆ ಸುತ್ತಿ ಮಗುವನ್ನಿರಿಸಿ ಹೋಗಿದ್ದಳು ಆ ಮಹಾತಾಯಿ, ವಾಕಿಂಗ್ ಬಂದಿದ್ದ ಇಬ್ಬರಿಗೆ ಕ್ಷೀಣಿಸಿದ ದ್ವನಿಯೊಂದು ಪೊದೆಯೊಳಗಿಂದ ಬಂದಿತ್ತು, ಒಮ್ಮೆ ನಾಯಿ ಮರಿ ರೀತಿಯ ದ್ವನಿಯಾಗಿತ್ತೇಂದು ಪ್ರತ್ಯೇಕ್ಷದರ್ಶಿಗಳು ಹೇಳ್ತಾರೆ ಮತ್ತೊಮ್ಮೆ ಮಗುವಿನ ರೀತಿ ಕೇಳಿಸಿದಕ್ಕೆ ಪೊದೆಯೊಳಗೆ ಒಳಗೆ ಹೊಕ್ಕಾಗ ಶಾಕ್ ಕಾದಿತ್ತು ಆ ಇಬ್ಬರಿಗೆ ಅದು ಮಗುವಿನದೇ ದ್ವನಿಯಾಗಿತ್ತು. 

ಭಾರತೀಯ ತಿನಿಸಿನ ಮೇಲೆ ವ್ಯಾಮೋಹ: ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ಐರ್ಲೆಂಡ್‌ ದಂಪತಿ

ಸ್ವಲ್ಪ ಪಕ್ಕದಲ್ಲೇ ನಾಯಿ‌ ಮರಿಗಳು ಕೂಡ ಇದ್ದವಂತೆ ಅದೃಷ್ಟವಶಾತ್ ಯಾವುದೇ ಪ್ರಾಣಿಗಳ ಕಣ್ಣಿಗೆ ಬೀಳದೆ ಜನ ಕಣ್ಣಿಗೆ ಬಿದ್ದಿದ್ದು ಮಗುವಿನ ಅದೃಷ್ಟವಾಗಿತ್ತು, ಮಗುವನ್ನು ನೋಡಿದವರ ತಕ್ಷಣವೇ ಡಾಬಾಸ್ ಪೇಟೆ  ಆಸ್ಪತ್ರೆಗೆ ಕರೆತಂದು ತಕ್ಷಣವೇ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಬಗ್ಗೆ ಪ್ರತ್ಯೇಕ್ಷದರ್ಶಿ ವಿವರಿಸಿದರು.

ನವಜಾತ ಶಿಶು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್

ಒಟ್ಟಿನಲ್ಲಿ ತನ್ನದಲ್ಲದ ತಪ್ಪಿನಿಂದ ಪ್ರಪಂಚ ಕಾಣದ ಕಂದ ಬೀದಿಗೆ ಬರುವಂತಾಯ್ತು, ಇನ್ನೂ ಈ ಕಂದನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ಕೊಟ್ಟು ಇದೀಗ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ , ಹಿಂದಿನ ಕಾಲದಲ್ಲಿ ಮಕ್ಕಳಿರಲವ್ವ ಮನೆತುಂಬಾ ಎನ್ನುತ್ತಾ ಹತ್ತುಕ್ಕೂ ಹೆಚ್ಚು ಮಕ್ಕಳನ್ನು ಹೆತ್ತು ಸಾಕಲಾರದೆ ಪರಿತಪಿಸುತ್ತಿದ್ದರು. ಆದರೆ ಮಗುವನ್ನು ಈ ರೀತಿ ಬಿಸಾಕುತಿರಲಿಲ್ಲ   ಆದರೆ ಈಗ ಮಕ್ಕಳನ್ನು ಕಸದ ರೂಪದಲ್ಲಿ ಕಾಣುತ್ತಿರುವುದು  ನಿಜಕ್ಕೂ ಬೇಸರದ ಸಂಗತಿ.

click me!