ಮಠದ ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ಸರಕಾರ ಮತ್ತು ಪೊಲೀಸ್ ಇಲಾಖೆ ಈ ವಿಚಾರವನ್ನು ಬಹಳ ಲಘುವಾಗಿ ತೆಗೆದುಕೊಂಡಿದೆ ಎಂದು ಮೈಸೂರಿನಲ್ಲಿ ಎಂ ಎಲ್ ಸಿ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು (ಸೆ.4): ಚಿತ್ರದುರ್ಗ ಮಠದ ಮುರುಘಾ ಶ್ರೀಗಳ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಮತ್ತು ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಎಂ ಎಲ್ ಸಿ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಸರಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರು ಪೋಕ್ಸೋ ಕಾಯ್ದೆಯನ್ನೇ ಗಾಳಿಗೆ ತೂರಿದ್ದಾರೆ. ಎಸ್ ಪಿ ಅವರನ್ನ ಅಮಾನತು ಮಾಡಬೇಕು. ಯಾವಾಗ ಕೋರ್ಟ್ ಪೊಲೀಸರಿಗೆ ಚಳಿ ಬಿಡಿಸ್ತೋ ಆಗ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆ. ಸರ್ಕಾರ ಈ ವಿಚಾರವನ್ನು ಬಹಳ ಲಘುವಾಗಿ ತೆಗೆದುಕೊಂಡಿದೆ. ಅಹಿಂದ ವರ್ಗದವರು, ಸ್ವಾಮಿಗಳು ಏನ್ ಮಾಡ್ತಿದ್ದಿರಾ. ಗೃಹ ಇಲಾಖೆ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಮಠದಲ್ಲಿ ಇರುವ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಆರೋಪಿಗಳನ್ನು ಇನ್ನು ಬಂಧನ ಮಾಡಿಲ್ಲ. ಇನ್ನೂ ಅವರೆಲ್ಲಾ ಓಡಾಡಿಕೊಂಡು ಇದ್ದಾರೆ. ಸಾಮಾಜಿಕ ಕಾರ್ಯ ಕಾರ್ಯಕರ್ತರು ಜಾಸ್ತಿ ಇಲ್ಲ ಎಂದ ವಿಶ್ವನಾಥ್ ಸ್ಟ್ಯಾನ್ಲಿ ಹಾಗೂ ಪರಶು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪೊಲೀಸ್ ಇಲಾಖೆ ತೀರ್ವ ತರವಾಗಿ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಚಿತ್ರದುರ್ಗ ಎಸ್ಪಿ ಅವರನ್ನ ಅಮಾನತು ಮಾಡಬೇಕು. ಅವರ ಜಾಗಕ್ಕೆ ಬೇರೆಯವರನ್ನು ಹಾಕಬೇಕು. ಮಂತ್ರಿಗಳು, ಮಾಜಿ ಮಂತ್ರಿಗಳಿಗೆ ಬುದ್ದಿ ಇದೆಯೋ ಇಲ್ಲವೋ. ಕಾನೂನು ಬಗ್ಗೆ ತಿಳುವಳಿಕೆ ಇಲ್ಲವಾ? ನೀವು ಯಾರ ಪರವಾಗಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ಅವರ ಬಗ್ಗೆ ಮಾತನಾಡುವವರು ಮೊದಲು ಬಾಯಿ ಮುಚ್ಚಿ. ಪ್ರಸಿದ್ಧವಾದ ಮಠ ಈ ಮಾಜಿ ಸ್ವಾಮಿಯಿಂದ ಹಾಳಾಗಿದೆ. ಈ ಮಠಕ್ಕೆ ಸಾಂಸಾರಿಕರೇ ಬಂದು ನೋಡಿಕೊಳ್ಳಲಿ. ನಮ್ಮಲ್ಲಿ ಬಹಳ ಜನ ಪೀಠಾಧಿಪತಿ ಇದ್ದಾರೆ ಆದ್ರೆ ಬ್ರಹ್ಮಚಾರಿಗಳು ಇಲ್ಲ. ಸರ್ಕಾರಗಳು ಲಕ್ಷಾಂತರ ಹಣ ನೀಡಿದ್ದು ಈ ಸುಖಕ್ಕ? ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕರ್ನಾಟಕಕ್ಕೆ ಈ ಮಾಜಿ ಸ್ವಾಮಿಯಿಂದ ಅಂಟಿರುವ ಕಳಂಕವನ್ನ ತೊಳೆಯ ಬೇಕಿದೆ. ಸರ್ಕಾರ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿ ಎಂ ಎಲ್ ಸಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಹೊಸಬರ ಎಂಟ್ರಿ: ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸ್ಫೋಟಕ ತಿರುವು
ಸ್ವಾಮಿಗಳಿಂದ ನಾಡಿಗೆ ಕಳಂಕ ಬಂದಿದೆ. ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಅವರನ್ನ ಯಾಕೆ ಕಾವಿಯಲ್ಲಿ ಕರೆದುಕೊಂಡು ಹೋಗ್ತಾರೆ. ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಇದು ಕಾನೂನಿನಲ್ಲಿ ಇದ್ಯಾ? ಈ ಪ್ರಕಣದಲ್ಲಿ ಸರ್ಕಾರವೇ ಒಂದು ಸಾಕ್ಷಿ ನಾಶಕ್ಕೆ ಸಹಕಾರ ನೀಡಿದಂತೆ ಇದೆ. ಈ ಪ್ರಕರಣದಲ್ಲಿ ಮಕ್ಕಳ ಚಿಕ್ಕಪ್ಪ, ದೊಡ್ಡಪ್ಪ ಯಾರು ತಲೆ ಹಾಕಬಾರದು. ಮಕ್ಕಳು, ಕೋರ್ಟ್ ಮಾತ್ರ ಮುಖ್ಯ. ಸಡ್ಯಂತ್ರ, ಗಿಡ್ಯಂತ್ರ ಏನು ಇಲ್ಲ. ಏನೇ ಇದ್ರು ಕೋರ್ಟ್ ಬಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.
ಮುರುಘಾ ಶ್ರೀ ಕೇಸ್: ಪ್ರಮುಖ ಪಾತ್ರವಹಿಸಿದ ಒಡನಾಡಿ ಸಂಸ್ಥೆಗೆ ಬೆದರಿಕೆ ಕರೆ, ಸಿಬ್ಬಂದಿ ಪೊಲೀಸ್ ಮೊರೆ
ಸ್ವಾಮಿಗಳು ಮೌನವಾಗಿದ್ದಾರೆ, ಹೀಗಾಗಿ ಮಂಪರು ಪರೀಕ್ಷೆ ನಡೆಯಲಿ. ಜಗದ್ಗುರು ಯಾರು ಇಲ್ಲ. ಎಲ್ಲಾ ಜಾತಿ ಗುರುಗಳೇ ಇರುವುದು. ಜಾತಿ, ಧರ್ಮ, ದುಡ್ಡು ಯಾವುದು ದೊಡ್ಡದಲ್ಲ. ಎಲ್ಲಕ್ಕಿಂತ ಕಾನೂನು ದೊಡ್ಡದು. ಸಾಕ್ಷಿ ನಾಶವಾಗಿದೆ, ಕುಟುಂಬಕ್ಕೆ ಮಕ್ಕಳಿಗೆ ನ್ಯಾಯ ಸಿಗಬೇಕು. ಕರ್ನಾಟಕ ಜನ ನೋಡ್ತಿದೆ. ಒಡನಾಡಿ ಸಂಸ್ಥೆ ಈಗ ಧ್ವನಿ ಎತ್ತಿದೆ. ಅವರಿಗೆ ಜನರು ಬೆಂಬಲ ನೀಡಬೇಕು. ಎಂದು ಮೈಸೂರಿನಲ್ಲಿ ಎಂ ಎಲ್ ಸಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ,