Bengaluru News: ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿದ್ದ ನೇಪಾಳಿ ದಂಪತಿ ಬಂಧನ

By BK Ashwin  |  First Published Feb 15, 2023, 4:59 PM IST

ಜಯನಗರದ ಐದನೇಯ ಬ್ಲಾಕ್‌ನಲ್ಲಿ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಬಿಕಾಸ್ ದಂಪತಿ ಮಾಲೀಕರ ವಿಶ್ವಾಸಗಳಿಸಿದ್ದರು. ಬಳಿಕ ಮನೆಯಲ್ಲಿ ಮಾಲೀಕರು ಇಲ್ಲದ ವೇಳೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ.


ಬೆಂಗಳೂರು (ಫೆಬ್ರವರಿ 15, 2023): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿದ್ದ ನೇಪಾಳಿ ದಂಪತಿ ಬಂಧನವಾಗಿದ್ದಾರೆ. ನಗರದ ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಪಾಳಿ ದಂಪತಿಯಾದ ಬಿಕಾಸ್ ಹಾಗೂ ಆತನ ಪತ್ನಿ ಸುಕ್ಷ್ಮಿತಾ ರನ್ನು ಬಂಧಿಸಲಾಗಿದೆ. 

ಜಯನಗರದ ಐದನೇಯ ಬ್ಲಾಕ್‌ನಲ್ಲಿ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಬಿಕಾಸ್ ದಂಪತಿ ಮಾಲೀಕರ ವಿಶ್ವಾಸಗಳಿಸಿದ್ದರು. ಬಳಿಕ ಮನೆಯಲ್ಲಿ ಮಾಲೀಕರು ಇಲ್ಲದ ವೇಳೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನ ದೋಚಿ ನೇಪಾಳಿ ಮೂಲದ ದಂಪತಿ ಎಸ್ಕೇಪ್‌ ಆಗಿದ್ದಾರೆ. 

Tap to resize

Latest Videos

ಇದನ್ನು ಓದಿ: ಬೆಂಗಳೂರು: ಮನೆ ಬೀಗ ಮುರಿದು ₹11.75 ಲಕ್ಷ ಬೆಲೆಯ ಚಿನ್ನ, .5 ಲಕ್ಷ ಹಣ ಕಳ್ಳತನ

ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಜಯನಗರ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 21 ಲಕ್ಷ ಮೌಲ್ಯದ 192 ಗ್ರಾಂ ತೂಕದ ಚಿನ್ನಾಭರಣ ಹಾಗೂ 168 ಗ್ರಾಂ ಬೆಳ್ಳಿ ಹಾಗೂ 18 ಬ್ರ್ಯಾಂಡೆಡ್‌ ವಾಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ವರದಿಯಾಗಿದೆ. ಈ ಮಧ್ಯೆ, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹೇಮಂತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದೂ ತಿಳಿದುಬಂದಿದೆ.

ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ನಡೆದಿದ್ದ ಮನೆಗಳ್ಳತನ 
ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಲಾಕರ್‌ನಲ್ಲಿದ್ದ 5 ಲಕ್ಷ ರೂ. ನಗದು ಸೇರಿದಂತೆ 11.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಅಶೋಕ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Crime News: ದೇವಸ್ಥಾನದಲ್ಲಿ ಕದ್ದು ಪರಾರಿಯಾಗಲು ಯತ್ನ; ಅನ್ಯಕೋಮಿನ ಕಳ್ಳರಿಗೆ ಜನರಿಂದ ಬಿತ್ತು ಗೂಸಾ

ಬೆಂಗಳೂರಿನ ಶಾಂತಿನಗರದ ಸ್ವಸ್ತಿಕ್‌ ಕ್ರಾಸ್‌ನಲ್ಲಿ ಶಿಕ್ಷಕಿ ಅನುಪಮಾ ಪೈ (46) ಅವರ ತವರು ಮನೆಯಲ್ಲಿ ಫೆಬ್ರವರಿ 7ರಂದು ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ದೂರುದಾರರಾದ ಅನುಪಮಾ ಅವರು ಫೆಬ್ರವರಿ 7ರಂದು ಬೆಳಗ್ಗೆ 7ಕ್ಕೆ ತವರು ಮನೆಗೆ ಬಂದಿದ್ದರು. ಅಂದು ಸಂಜೆ 4ಕ್ಕೆ ಕಾರ್ಯ ನಿಮಿತ್ತ ಜಯನಗರಕ್ಕೆ ತೆರಳಿದ್ದರು. ಎಂದಿನಂತೆ ಅನುಪಮಾ ಅವರ ವೃದ್ಧ ತಂದೆ-ತಾಯಿ ಸಂಜೆ 5ಕ್ಕೆ ಲಾಲ್‌ಬಾಗ್‌ ಉದ್ಯಾನಕ್ಕೆ ವಾಯು ವಿಹಾರಕ್ಕೆ ತೆರಳಿದ್ದರು. ವಾಯು ವಿಹಾರ ಮುಗಿಸಿ ಸಂಜೆ 6.40ರ ಸುಮಾರಿಗೆ ಮನೆಗೆ ವಾಪಾಸಾದಾಗ ಮನೆಗಳವು ಪ್ರಕರಣ ಬೆಳಕಿಗೆ ಬಂದಿತ್ತು.

ದುಷ್ಕರ್ಮಿಗಳು ಮನೆಯ ಮುಖ್ಯದ್ವಾರದ ಬೀಗ ಒಡೆದು ಮನೆ ಪ್ರವೇಶಿಸಿದ್ದರು. ಬಳಿಕ ಬೆಡ್‌ರೂಮ್‌ಗೆ ನುಗ್ಗಿ ಬೀರುವಿನ ಲಾಕರ್‌ ತೆರೆದು 5 ಲಕ್ಷ ರೂ. ನಗದು ಸೇರಿದಂತೆ ಸುಮಾರು 150 ಗ್ರಾಂ ತೂಕದ ಚಿನ್ನಾಭರಣ, ಡೆಬಿಡ್‌ ಕಾರ್ಡ್‌ಗಳು ಸೇರಿದಂತೆ ವಿವಿಧ ದಾಖಲೆ ಕದ್ದು ಪರಾರಿಯಾಗಿದ್ದರು. 

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಒಂದೇ ರಾತ್ರಿಗೆ 5 ಹಳ್ಳಿಯಲ್ಲಿ ಕಳ್ಳತನ: 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ

ದುಷ್ಕರ್ಮಿಗಳು ಕಳ್ಳತನಕ್ಕೂ ಮುನ್ನ ಮನೆಯ ಸಿಸಿಟಿವಿ ಕ್ಯಾಮರಾಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಅನುಪಮಾ ಅವರ ತಂದೆಗೆ ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ಆರೈಕೆಗೆ ಬರುತ್ತಿದ್ದ ಶಂಕರ್‌ ಎಂಬ ವ್ಯಕ್ತಿ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಶಂಕೆಯನ್ನು ಮನೆಯವರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!