Bengaluru Crime: ಗೂಗಲ್‌ ನೋಡಿ ಡ್ರಗ್ಸ್‌ ದಂಧೆ ಶುರು ಮಾಡಿದ ಸೆಕ್ಯೂರಿಟಿ

Published : Apr 11, 2022, 04:33 AM IST
Bengaluru Crime: ಗೂಗಲ್‌ ನೋಡಿ ಡ್ರಗ್ಸ್‌ ದಂಧೆ ಶುರು ಮಾಡಿದ ಸೆಕ್ಯೂರಿಟಿ

ಸಾರಾಂಶ

*  ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಆಗಿದ್ದ ನೇಪಾಳಿ *  ಆನ್‌ಲೈನ್‌ನಲ್ಲಿ ಡ್ರಗ್ಸ್‌ ಖರೀದಿಸಿ ನಗರದಲ್ಲಿ ಮಾರಾಟ *  ಎಂಡಿಎಂಎ, ಕ್ರಿಸ್ಟೆಲ್‌, ಚರಸ್‌ ವಶ

ಬೆಂಗಳೂರು(ಏ.11):  ಗೂಗಲ್‌ನಲ್ಲಿ(Google) ಮಾದಕ ವಸ್ತುಗಳ ಬಗ್ಗೆ ತಿಳಿದುಕೊಂಡು ಬಳಿಕ ಪೆಡ್ಲರ್‌ ಮೂಲಕ ಖರೀದಿಸಿ ಮಾರಾಟ ಮಾಡುತ್ತಿದ್ದ ನೇಪಾಳ(Nepal) ಮೂಲದ ವ್ಯಕ್ತಿಯನ್ನು ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಲೋಕೇಂದ್ರನಾಥ್‌(30) ಬಂಧಿತ(Arrest). ಈತನಿಂದ ಮೂರು ಲಕ್ಷ ರುಪಾಯಿ ಮೌಲ್ಯದ 10 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 80 ಗ್ರಾಂ ಚರಸ್‌ ಹಾಗೂ ಒಂದು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು(Accused) ನಗರದಲ್ಲಿ ಅಪಾರ್ಚ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಗೂಗಲ್‌ನಲ್ಲಿ ಮಾದಕವಸ್ತುಗಳ ಬಗ್ಗೆ ತಿಳಿದುಕೊಂಡು ಬಳಿಕ ಪೆಡ್ಲರ್‌ಗಳ ಸಂಪರ್ಕಿಸಿ ಕಡಿಮೆ ದರಕ್ಕೆ ಮಾದಕ ವಸ್ತು ಖರೀದಿಸುತ್ತಿದ್ದ. ಬಳಿಕ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿದಂತೆ ಪರಿಚಿತ ಗಿರಾಕಿಗಳಿಗೆ ಗ್ರಾಂಗೆ .5 ಸಾವಿರದಿಂದ .8 ಸಾವಿರದ ವರೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಗಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gadag: ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

ಡ್ರಗ್ಸ್‌  ಮಾರಲು ಯತ್ನಿಸಿದ್ದ ರೌಡಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ರೌಡಿ ಶೀಟರ್‌(Rowdy Sheeter) ಸೇರಿ ಇಬ್ಬರನ್ನು ಶ್ರೀರಾಂಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕೆ.ಪಿ.ಅಗ್ರಹಾರದ ನಾರಾಯಣ (45) ಮತ್ತು ಶ್ರೀರಾಂಪುರದ ಈಶ್ವರ್‌ (34) ಬಂಧಿತರು. ಆರೋಪಿಗಳಿಂದ 22 ಕೆ.ಜಿ. ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಏ.8ರಂದು ಮಧ್ಯಾಹ್ನ ಇಬ್ಬರು ಗಾಂಜಾ ಮಾರಾಟಕ್ಕೆ ಸಂಜಯಗಾಂಧಿ ನಗರದ ಕಡೆಗೆ ಬರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣದ ಡ್ರಗ್ಸ್‌ ಪೆಡ್ಲರ್‌ನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ಬಳಿಕ ಲಗೇಜ್‌ ಮಾದರಿಯಲ್ಲಿ ಖಾಸಗಿ ಬಸ್‌ ಮೂಲಕ ನಗರಕ್ಕೆ ತಂದು ಗಿರಾಕಿಗಳನ್ನು ಹುಡುಕಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿ ನಾರಾಯಣ ಶ್ರೀರಾಂಪುರ ಠಾಣೆ ರೌಡಿ ಶೀಟರ್‌ ಆಗಿದ್ದು, ಈತನ ವಿರುದ್ಧ 4 ಎನ್‌ಡಿಪಿಎಸ್‌ ಪ್ರಕರಣ, ನಂದಿನಿ ಲೇಔಟ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿವೆ. ಕೊಲೆ ಯತ್ನ ಪ್ರಕರಣದಲ್ಲಿ ಎಂಟು ತಿಂಗಳ ಹಿಂದೆಯಷ್ಟೇ ಜೈಲು ಪಾಲಾಗಿದ್ದ ನಾರಾಯಣ ಒಂದೂವರೆ ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಇದೀಗ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಗಿದ್ದು 2 ಲಕ್ಷ ಕದಿಯಲು, ಸಿಕ್ಕಿದ್ದು 2 ಕೋಟಿ: ಹಣ ಸಿಕ್ಕ ಖುಷಿಯಲ್ಲಿ ಅಲ್ಲೇ ಎಣ್ಣೆ ಪಾರ್ಟಿ..!

Drug Bust: ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಗೋವಿಂದಪುರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರಾಜಧಾನಿಗೆ ಸಗಟು ರೂಪದಲ್ಲಿ ಕೇಜಿಗಟ್ಟಲೇ ಡ್ರಗ್ಸ್‌(Drugs) ಪೂರೈಸುತ್ತಿದ್ದ ಆರು ಮಂದಿ ಅಂತಾರಾಜ್ಯ ಪೆಡ್ಲರ್‌ಗಳನ್ನು ಪ್ರತ್ಯೇಕವಾಗಿ ಸೆರೆಹಿಡಿದು 38 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಬೃಹತ್‌ ಮೌಲ್ಯದ ಡ್ರಗ್‌ ಜಾಲದ ವಿರುದ್ಧ ಬೃಹತ್‌ ಕಾರ್ಯಾಚರಣೆ ನಡೆಸುವ ಮೂಲಕ ಗೋವಿಂದಪುರ ಠಾಣೆ ಪೊಲೀಸರು(Police) ಇತಿಹಾಸ ಬರೆದಿದ್ದರು. 

ಮುಂಬೈ(Mumbai) ಮೂಲದ ರಜನಿಬಾನು ಗುಪ್ತಾ, ತಮಿಳುನಾಡಿನ ಚೆನ್ನೈ ನಗರದ ಆಂಡ್ರೋ ಫಿಲಿಫ್ಸ್‌, ರಾಜೇಶ್‌, ಒಡಿಶಾ ಮೂಲದ ಸಮರಕರ್‌, ರಮೇಶ್‌ ಕುಮುಂದಿ ಹಾಗೂ ಮುಗುಲು ಶಿಷಾ ಬಂಧಿತರಾಗಿದ್ದು(Arrest), ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಅಂಕಿತ್‌ ಶರ್ಮಾ ಸೇರಿದಂತೆ ಇನ್ನುಳಿದವರ ಪತ್ತೆಗೆ ತನಿಖೆ ನಡೆದಿದೆ. ಈ ಎರಡು ತಂಡಗಳಿಂದ .1.45 ಕೋಟಿ ಮೌಲ್ಯದ 290 ಕೇಜಿ ಗಾಂಜಾ, 6.5 ಕೇಜಿ ಎಂಡಿಎಂಎ, 300 ಗ್ರಾಂ ಟ್ರೊಮೊಡೆಲ್‌, 75 ಗ್ರಾಂ ಕೊಕೇನ್‌ ಹಾಗೂ .35 ಕೋಟಿ ಮೌಲ್ಯದ ಮೆಥಾಕ್ಯುಲೊನ್‌ ಸೇರಿದಂತೆ ಒಟ್ಟು .37 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿಯಾಗಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು