ವರದಿ: ಭರತ್‌ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರ ಕನ್ನಡ (ಎ.10) : ಅವರಿಬ್ಬರು ಮದುವೆಯಾಗದಿದ್ರೂ ಪತಿ-ಪತ್ನಿಯರಂತೆ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದ ಜೋಡಿ. ಒಬ್ಬಂಟಿಯಾಗಿದ್ದ ಆತನಿಗೆ ಆಕೆ ಜೀವನ ಸಂಗಾತಿಯಂತಿದ್ದು, ಆತನ ಬೇಕು ಬೇಡಗಳನ್ನು ಪೂರೈಸುತ್ತಿದ್ದಳು. ಆದರೆ, ಅವರಿಗಿಬ್ಬರಿಗಿದ್ದ ಕುಡಿಯದ ಚಟ ಆ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಅವರು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಅಷ್ಟಕ್ಕೂ ಅಲ್ಲಿ ನಡೆದ ಅನಾಹುತ ಏನು? ಮುಂದೆ ಓದಿ
ಆತ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿಯಾಗಿದ್ದು, ಸಿದ್ಧಿ ಜನಾಂಗಕ್ಕೆ ಸೇರಿದ್ದಾತ. ಹೆಸರು ಹನುಮಂತ ಮನುವೆಲ್ ಸಿದ್ಧಿ (45). ಕೂಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದ ಆತ ಸಾಕಷ್ಟು ಗಟ್ಟಿಮುಟ್ಟಾಗಿದ್ದ. ಒಂದು ಕ್ವಾರ್ಟರ್ ಹಾಕಿ ಕೆಲಸಕ್ಕಿಳಿದನೆಂದರೆ ಜೆಸಿಬಿಗೂ ಸಾಧ್ಯವಾಗದ ಕೆಲಸವನ್ನು ಈತನೊಬ್ಬನೇ ಮಾಡಿ ಮುಗಿಸುವಂತಹ ರಾಕ್ಷಸ. ಸಾಕಷ್ಟು ವರ್ಷಗಳಿಂದ ಕಾರವಾರದಲ್ಲೇ ನೆಲೆಸಿದ್ದ ಆತ, ಕಾರವಾರದ ಕಳಸವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ತಾನಾಯ್ತು, ತನ್ನ ಕೆಲಸವಾಯ್ತು, ತನ್ನ ಕುಡಿತವಾಯ್ತು ಅಷ್ಟರಲ್ಲೇ ಆತ ಜೀವನ ಸಾಗಿಸುತ್ತಿದ್ದ. ರೂಪದಲ್ಲಿ ಹಾಗೂ ಶಕ್ತಿಯಲ್ಲಿ ಕರಿಕಲ್ಲಿನಂತೆ ಇದ್ದ ಆತನಿಗೆ ಆಕೆ ಅದೆಲ್ಲಿ ಸಿಕ್ಕಳೋ ಏನೋ ಕಳೆದ 6 ತಿಂಗಳಿಂದ ಆಕೆಯನ್ನೂ ತನ್ನ ಬಾಡಿಗೆ ರೂಮಿಗೆ ಕರೆಯಿಸಿಕೊಂಡು ಲಿವಿಂಗ್ ಟುಗೆದರ್ ರೀತಿಯಲ್ಲಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದ.
ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ ಮಾಡಿಸಿ Vinay Kumar Sorake
ಅಂದಹಾಗೆ, ಆಕೆಯ ಹೆಸರು ಶಾಂತಾ ಬಾಬು ಗೌಡ(43), ಗಜೇಂದ್ರಗಡದ ನಿವಾಸಿ. ಕಾರವಾರದ ಶೇಜವಾಡ, ಮಖೇರಿಯಲ್ಲಿ ನೆಲೆಸಿದ್ದಳು. ಈತ ದೊರೆತ ಬಳಿಕವಂತೂ ಈತನ ಜತೆಗೇ ಆಕೆ ದಿನದೂಡುತ್ತಿದ್ದಳು. ಈತ ಕೂಲಿ ಕೆಲಸ ಮಾಡಿಕೊಂಡು ಬಂದರೆ, ಆಕೆ ಮನೆಯಲ್ಲಿ ಇರುತ್ತಿದ್ದಳು. ಈತನಿಗೂ ಕುಡಿತದ ಚಟ, ಆಕೆಗೂ ಕುಡಿತದ ಚಟ. ದಿನರಾತ್ರಿ ನಶೆಯಲ್ಲೇ ಇರುತ್ತಿದ್ದ ಅವರು, ರಾತ್ರಿಯಾದರಂತೂ ಧಮ್ ಮಾರೋ ಧಮ್ ಅಂತಾ ಮಜಾ ಉಡಾಯಿಸುತ್ತಿದ್ದರು. ಇಷ್ಟೆಲ್ಲಾ ಇದ್ದರೂ ತನ್ನ ಪ್ರೇಮಿಯಿಂದಲೇ ತನಗೆ ಸಾವು ಬರುತ್ತದೆ ಎಂದು ಆಕೆ, ತನ್ನ ಪ್ರಿಯತಮೆಯನ್ನು ತಾನೇ ಕೊಲ್ಲುತ್ತೇನೆಂದು ಈತ ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಇಬ್ಬರ ನಡುವೆ ನಡೆದ ಗಲಾಟೆಯ ಕಾರಣ ಆತ ದೂಡಿದ್ದು, ಕೆಳಗೆ ಉರುಳಿದ ಆಕೆ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾಳೆ.
ಎಪ್ರಿಲ್ 7ರಂದು ಬೆಳಗ್ಗಿನ ಜಾವ ಸುಮಾರು 4.30ರಿಂದ 7.30ರ ನಡುವೆ ಹನುಮಂತ ಮನುವೆಲ್ ಸಿದ್ದಿ ಹಾಗೂ ಶಾಂತಾ ಬಾಬು ಗೌಡ ಗಲಾಟೆ ನಡೆದಿದ್ದು, ಬೆತ್ತಲಾಗಿದ್ದ ಆಕೆ ತನ್ನ ಪ್ರೇಮಿ ಹನುಮಂತನ ಶರ್ಟ್ ಹಿಡಿದು ಸಾರಾಯಿ ತಂದು ಕೊಡುವಂತೆ ಒತ್ತಾಯಿಸಿದ್ದಳು. ಇದರಿಂದ ಕೋಪಗೊಂಡ ಹನುಮಂತ "ಸಾಯಿ ನೀನು, ಎಂದು ಕುತ್ತಿಗೆ ಹಿಡಿದು ಜೋರಾಗಿ ದೂಡಿದ್ದನು". ಮೊದಲೇ ನಶೆಯಲ್ಲಿದ್ದ ಆಕೆ ರಾಕ್ಷಸ ಬಲ ಈ ಹನುಮಂತ ಸಿದ್ಧಿ ದೂಡಿದ ಏಟಿಗೆ ನಿಯಂತ್ರಣ ತಪ್ಪಿ ಮನೆ ಬಾಗಿಲ ಮೆಟ್ಟಿಲಿಗೆ ಬಿದ್ದಳು. ಆಕೆಯ ತಲೆ ಹಿಂಬದಿಗೆ ಮೆಟ್ಟಿಲ ಭಾಗ ಜೋರಾಗಿ ತಾಗಿ ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿತ್ತು. ಇದರಿಂದಾಗಿ ಮೂಗಿನಿಂದ ರಕ್ತ ಹರಿದಿದ್ದು, ಸ್ಥಳದಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ZERODHA BMI CHALLENGE ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!
ಆಕೆಗೆ ಏನಾಯ್ತು ಎಂದು ಅರಿವಿಗೆ ಬಾರದೆ ಹೆದರಿಕೊಂಡ ಹನುಮಂತ, ಸಾಕಷ್ಟು ಹೊತ್ತಿನ ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ. ಕೂಡಲೇ ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್ ಸಿಬ್ಬಂದಿ ಮಂಜುನಾಥ್, ಬೆತ್ತಲಾಗಿ ಬಿದ್ದಿದ್ದ ಮಹಿಳೆಯನ್ನು ಪರಿಶೀಲಿಸಿದಾಗ ಆಕೆ ಮೃತ ಪಟ್ಟಿರುವುದು ತಿಳಿದುಬಂದಿತ್ತು. ತಡಮಾಡದೇ ತಕ್ಷಣ ಕಾರವಾರ ನಗರ ಠಾಣೆಗೆ ದೂರು ನೀಡಿದ ಆ್ಯಂಬುಲೆನ್ಸ್ ಸಿಬ್ಬಂದಿ ಸ್ಥಿತಿಯನ್ನು ವಿವರಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅರ್ಧಂಬರ್ಧ ಹೇಳಿಕೆ ನೀಡಿದ ಹನುಮಂತ, ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿಸಿದಾಗ ನೈಜ ವಿಚಾರ ಬಾಯ್ಬಿಟ್ಟಿದ್ದ. ಮೃತಳ ಕುಟುಂಬಕ್ಕೆ ಮಾಹಿತಿ ನೀಡಿ, ಬಳಿಕ ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿತ್ತು. ನಂತರ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಒಟ್ಟಿನಲ್ಲಿ ಪ್ರೀತಿಯ ನಶೆಯೊಂದಿಗೆ ಕುಡಿತದ ನಶೆಯಲ್ಲಿ ಬಿದ್ದಿದ್ದ ಜೋಡಿ ಹಕ್ಕಿಗಳ ಜೀವನ ಸ್ಯಾಡ್ ಎಂಡಿಂಗ್‌ನಲ್ಲಿ ಕೊನೆಗೊಂಡಿದೆ. ಈ ಪ್ರೇಮಿಗಳಿಗೆ ಮುಳುವಾದ ಸಾರಾಯಿ ಆಕೆಯ ಜೀವನವನ್ನೇ ಕೊನೆಗೊಳಿಸಿದರೆ, ಈತನನ್ನು ಜೈಲು ಸೇರುವಂತೆ ಮಾಡಿದೆ. ಅತಿಯಾದರೆ, ಅಮೃತವೂ ವಿಷ ಅನ್ನೋದು ಇದಕ್ಕೆ ನೋಡಿ.