Road Accident: ಅಮೃತಾ ಕೈಯಿಂದ ಇಬ್ಬರು ಮಕ್ಕಳನ್ನು ಕಸಿದುಕೊಂಡ  ಕ್ರೂರ ವಿಧಿ

By Suvarna News  |  First Published Jan 14, 2022, 12:26 AM IST

* ಅತಿ ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ
* ರಿಯಾಲಿಟಿ ಶೋ ಕಂದನ ಬಲಿಪಡೆದ ಯಮರೂಪಿ ಟಿಪ್ಪರ್
* ಮೊದಲನೇ ಮಗುವನ್ನು ಕಳೆದುಕೊಂಡಿದ್ದ ತಾಯಿ ಅಮೃತಾ
* ವಿಧೀಯ ಕ್ರೂರ ಆಟಕ್ಕೆ  ಕೊನೆ ಎಂದು?


ಬೆಂಗಳೂರು(ಜ. 14)  ದುರಂತಗಳು  (Tragedy) ನಡೆದುಹೋಗುತ್ತವೆ. ಆದರೆ ಅದರ ಪರಿಣಾಮ... ಕುಟುಂಬ ಅನುಭವಿಸುವ ನೋವು ಯಾರಿಗೂ ಬೇಡ.  ಭೀಕರ ರಸ್ತೆ (Road Accident) ಅಪಘಾತದಲ್ಲಿ ಪುಟ್ಟ ಬಾಲಕಿ ಅಗಲಿದ್ದಾರೆ. ಅವರ ಅಗಲಿಕೆ   ಉಂಟುಮಾಡುವ ನೋವು  ಮರೆಯಾಗುವುದೇ ಇಲ್ಲ. ಅದರಲ್ಲಿಯೂ ಚಿಕ್ಕ ಮಕ್ಕಳು ಕುಟುಂಬ ಅಗಲಿದೆರೆ..

ಭೀಕರ ದುರಂತದಲ್ಲಿ ರಿಯಾಲಿಟಿ ಶೋದಲ್ಲಿ (Reality Show) ಕಾಣಿಸಿಕೊಳ್ಳುತ್ತಿದ್ದ ಪುಟಾಣಿ  ದಾರುಣ ಸಾವು ಕಂಡಿದ್ದಾಳೆ. ಅತಿ ವೇಗದಿಂದ ಬಂದು ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾಗಿದೆ  ತಾಯಿ ಜೊತೆ ಸ್ಕೂಟರ್ ನ ಹಿಂಬದಿ  ಕುಳಿತಿದ್ದ ಆರು ವರ್ಷದ ಬಾಲಕಿ ಸಮನ್ವಿ(6) ಸಾವು ಕಂಡಿದ್ದಾಳೆ. ವಾಹನ ಚಾಲನೆ ಮಾಡುತ್ತಿದ್ದ ತಾಯಿಗೆ ಸಹ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Tap to resize

Latest Videos

Road Accident: ತಾಯಿ-ಮಗಳು ಸಮನ್ವಿ ಮೇಲೆ  ಟಿಪ್ಪರ್ ಅಪ್ಪಳಿಸಿದ ಘೋರ ದೃಶ್ಯ

ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ವಶಕ್ಕೆ ಪಡೆದ ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು. ಕೇಸು ದಾಖಲಿಸಿಕೊಂಡಿದ್ದಾರೆ. ಶಾಪಿಂಗ್ ಮುಗಿಸಿಕೊಂಡು ಮಗುವನ್ನ ಬೈಕ್ ಹಿಂಬದಿ ಕುರಿಸಿಕೊಂಡು ತಾಯಿ
ಹೋಗುತ್ತಿದ್ದರು ಕನಕಪುರ ರಸ್ತೆಯಲ್ಲಿರುವ ಮನೆಗೆ ಹೋಗ್ತಿದ್ದ ತಾಯಿ, ಮಗಳಿಗೆ ಯಮನಾಗಿ ಟಿಪ್ಪರ್  ಬಂದಿದೆ. ಈ ವೇಳೆ ಹಿಂಬದಿಯಿಂದ ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿದ್ದು ವೇಳೆ ಸಮನ್ವಿ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು ಕಂಡಿದ್ದಾಳೆ.

ಆದರೆ ಅಮ್ಮನ ಬದುಕಿನಲ್ಲಿ ಇದು ಎರಡನೇ ಪ್ರಹಾರ. ವಿಧಿಯಾಟ ಮಾತ್ರ ಘೋರ. ತಾಯಿ ಅಮೃತಾ ಮೊದಲ ಮಗುವನ್ನು ಕಳೆದುಕೊಂಡಿದ್ದರು. ಈಗ ಎರಡನೇ ಮಗು ಸಮನ್ವಿ ಅಪಘಾತದಲ್ಲಿ ಅಸುನೀಗಿದ್ದಾರೆ. 

ಕಿರುತೆರೆ ಕಲಾವಿದೆ ಅಮೃತ ನಾಯ್ಡು ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಮೊಮ್ಮಗಳು. ಅಮೃತ ತಾಯಿ ಸಹ ಶೋಭಾ ಗುರುರಾಜುಲು ನಾಯ್ಡು ಹರಿಕಥಾ ವಿದ್ವಾಂಸರು.

ಮೊದಲ ಮಗಿವಿನ ವಿಚಾರವನ್ನು ಅಮೃತಾ ರಿಯಾಲಿಟಿ ಶೋನಲ್ಲಿ  ಹೇಳಿಕೊಂಡಿದ್ದರು. ಮೊದಲ ಮಗು ಅಪೌಷ್ಟಿಕತೆಯಿಂದ ಬಳಲುತ್ತಿತ್ತು. ಮಗುವನ್ನು ಉಳಿಸಿಕೊಳ್ಳಲು ತಾಯಿ ಹರಸಾಹಸ ಮಾಡಿದ್ದರು.  ಹಲವು ದಿನ
ಚಿಕಿತ್ಸೆ ನೀಡದ್ದರೂ ಮಗು ಸಾವು ಕಂಡಿತ್ತು. ಎರಡನೇ ಮಗು ಸಮನ್ವಿ ಜನಿಸಿದ ನಂತರ ತಾಯಿ ಈ ಮಗುವಿನಲ್ಲಿಯೇ ಎಲ್ಲವನ್ನು ನೋಡುತ್ತಿದ್ದರು.  ಆದರೆ ವಿಧಿ ಈಗ ಮತ್ತೆ ಒಂದು ಕ್ರೂರ ಆಘಾತ ನೀಡಿದೆ. 

ಟೆಕ್ಕಿಗಳ ಸಾವು;  ನೈಸ್ ರಸ್ತೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಟೆಕ್ಕಿಗಳು ಸಾವು ಕಂಡಿದ್ದರು.  ಕುಮಾರಸ್ವಾಮಿ ಲೇಔಟ್‌ ಅಪಾರ್ಟ್‌ಮೆಂಟ್‌ ಬಳಿ  ಕಳೆದ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು (Death) ದುರ್ಮರಣಕ್ಕೀಡಾಗಿದ್ದರು. 

ಬನ್ನೇರುಘಟ್ಟ ಕಡೆಯಿಂದ ತುಮಕೂರು ಕಡೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾನ್ನಪ್ಪಿರುವುದು ಖಚಿತವಾಗಿದೆ. ಘೋರ ಅಪಘಾತದ ಪರಿಣಾಮ  ನೈಸ್‌ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಬಳ್ಳಾರಿ ಜಿಲ್ಲೆಯ ಘೋರ ಅಪಘಾತ:  ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್‌ ಟ್ರಾಲಿಗೆ ಬೈಕ್‌ ಡಿಕ್ಕಿ(Collision) ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ(Death) ಬಳ್ಳಾರಿಯಿಂದ ವರದಿಯಾಗಿತ್ತು. ತಾಲೂಕಿನ ಬಾದನಹಟ್ಟಿ ಗ್ರಾಮದ ಸಪ್ತಗಿರಿ ಕ್ಯಾಂಪ್‌ ಬಳಿ ಈ ಘಟನೆ ಜರುಗಿದೆ. ಮೃತಪಟ್ಟವರನ್ನು ಬಾದನಹಟ್ಟಿ ಗ್ರಾಮ ನಿವಾಸಿಗಳಾದ ಗೊಲ್ಲರ ಗೋಪಾಲ(28), ಕರಿ ಬ್ಯಾಡರ ಕರಿಬಸಪ್ಪ(32), ಕರಿಬ್ಯಾಡರ ದೊಡ್ಡಬಸಪ್ಪ(30) ಎಂದು ಗುರುತಿಸಲಾಗಿತ್ತು. ಸಿದ್ದಮ್ಮನಹಳ್ಳಿ ರಸ್ತೆ ಪಕ್ಕದಲ್ಲಿರುವ ತಮ್ಮ ಜಮೀನಿನಿಂದ ಗ್ರಾಮಕ್ಕೆ ವಾಪಾಸ್‌ ಮರಳುವಾಗ ಈ ಘಟನೆ ಜರುಗಿತ್ತು

click me!