Loan App Crime: ಲೋನ್‌ ಆ್ಯಪ್‌ ಕಿರುಕುಳಕ್ಕೆ ಮಂಗ್ಳೂರಲ್ಲಿ ಮೊದಲ ಬಲಿ

By Kannadaprabha NewsFirst Published Jan 13, 2022, 6:36 AM IST
Highlights

*   ಸಾಲ ಪಡೆದಿದ್ದ ಯುವಕ ಆತ್ಮಹತ್ಯೆ, ತನಿಖೆಗೆ ತಂಡ
*   ರ‍್ಯಾಪಿಡ್ ಆ್ಯಪ್‌ ಮೂಲಕ 30 ಸಾವಿರ ರು. ಆನ್‌ಲೈನ್‌ ಸಾಲ ಪಡೆದಿದ್ದ ಸುಶಾಂತ್‌
*   ಲೋನ್‌ ಆ್ಯಪ್‌ಗಳಿಗೆ ಆರ್‌ಬಿಐ ಮಾನ್ಯತೆ ಇಲ್ಲ 

ಮಂಗಳೂರು(ಜ.13):  ಕಿನ್ನಿಗೋಳಿಯ ಪಕ್ಷಿಕೆರೆ ನಿವಾಸಿ ಸುಶಾಂತ್‌(26)ಆತ್ಮಹತ್ಯೆಗೆ(Suicide) ಲೋನ್‌ ಆ್ಯಪ್‌ ಸಂಸ್ಥೆಯ ಕಿರುಕುಳವೇ(Harassment) ಕಾರಣ ಎಂದು ಪೊಲೀಸರ(Police) ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 

ಸುಶಾಂತ್‌ ರ‍್ಯಾಪಿಡ್ ಆ್ಯಪ್‌(Rapid App) ಮೂಲಕ 30 ಸಾವಿರ ರು. ಆನ್‌ಲೈನ್‌ ಸಾಲ(Online Loan) ಪಡೆದಿದ್ದರು. ಬಳಿಕ ಅದನ್ನು ಪಾವತಿಸಲಾಗದಿದ್ದಾಗ ಆ್ಯಪ್‌ ಕಂಪನಿ ಕಿರುಕುಳ ನೀಡಿತ್ತು. ಸುಶಾಂತ್‌ ಮೊಬೈಲ್‌ನ ಎಲ್ಲ ಕಾಂಟ್ಯಾಕ್ಟ್‌ಗಳ ಮಾಹಿತಿ ಪಡೆದು ಎಲ್ಲರಿಗೂ ಸಂದೇಶ ಕಳುಹಿಸುವ ಬೆದರಿಕೆಯನ್ನು ಕಂಪನಿ ಒಡ್ಡಿತ್ತು. ಇದರಿಂದ ನೊಂದು ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಡೆತ್‌ನೋಟ್‌ನಲ್ಲಿ(Deathnote) ಆನ್‌ಲೈನ್‌ ಸಾಲದ ಬಗ್ಗೆ ಬರೆದಿದ್ದು, ಲೋನ್‌ ಆ್ಯಪ್‌ನವರು ಕಿರುಕುಳ ನೀಡುತ್ತಿರುವ ಬಗ್ಗೆ ಬರೆದಿದ್ದರು. ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಲೋನ್‌ ಆ್ಯಪ್‌(Loan App) ಬಳಕೆಯಿಂದ ಮಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಥಮ ಕೇಸ್‌ ಇದಾಗಿದೆ. ಇದರ ಹಿಂದೆ ವಂಚಕ ತಂಡ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌(Shashikumar) ತಿಳಿಸಿದ್ದಾರೆ.

ಆ್ಯಪ್‌ ಲೋನ್‌: ಬೆಂಗ್ಳೂರಿನ ಮೂವರ ಬಂಧನ!

ಭಾರತದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಲೋನ್‌ ಆ್ಯಪ್‌ಗಳು ಇದ್ದು, ಇವುಗಳಿಗೆ ಆರ್‌ಬಿಐ(RBI) ಮಾನ್ಯತೆ ಇಲ್ಲ. ಇವುಗಳು ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದ್ದು, ಆಗ ಅನೇಕ ಅನುಮತಿ ಕೇಳುತ್ತಾರೆ. ಉದಾಹರಣೆಗೆ ಕಾಂಟಾಕ್ಟ್, ವಿಡಿಯೋ ಮೋಟೋ ಕ್ಯಾಮಾರಾ ಇತ್ಯಾದಿಗಳಿಗೆ ಅನುಮತಿ ಕೇಳುತ್ತಾರೆ. ಎಲ್ಲದಕ್ಕೂ ಎಸ್‌ ಎಸ್‌ ಹಾಕಿ ಇನ್‌ಸ್ಟಾಲ್‌ ಮಾಡಿದ ನಂತರ ಸಣ್ಣ ಪ್ರಮಾಣದ ಸಾಲ ಅಂದರೆ 3,000 ರು. ಅಥವಾ 5,000 ರು. ಹಣ ನೀಡುತ್ತಾರೆ. ನಂತರ ಸಾಲವನ್ನು ಹಿಂತಿರುಗಿಸುವಾಗ ಶೇ.30ರಿಂದ 60 ಬಡ್ಡಿ ವಿಧಿಸಿ ಸಾಲ ಚುಕ್ತಾ ಮಾಡಲು ಹೇಳುತ್ತಾರೆ. ಒಂದು ವೇಳೆ ಸಾಲ ಹಿಂದಿರುಗಿಸದೇ ಇದ್ದಲ್ಲಿ ಕ್ರೆಡಿಟ್‌ ರೇಟ್‌ ಕಡಿಮೆಯಾಗುತ್ತದೆ ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಅಶ್ಲೀಲ ಚಿತ್ರಗಳನ್ನು ಕಾಂಟ್ಯಾಕ್ಟ್‌ಗಳಲ್ಲಿ ಇರುವವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. ಅಲ್ಲದೆ 420 ಕೇಸು ದಾಖಲಿಸುವುದಾಗಿಯೂ ಹೇಳುತ್ತಾರೆ. ಕೆಲವೊಮ್ಮೆ ನಕಲಿ ಎಫ್‌ಐಆರ್‌ ಕಳುಹಿಸುತ್ತಾರೆ. ಸಾರ್ವಜನಿಕರು ಇಂತಹ ಲೋನ್‌ ಆ್ಯಪ್‌ ಡೌನ್‌ಲೋಡ್‌ ಮಾಡಬಾರದು. ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಮತ್ತೆ ಬೆಂಗ್ಳೂರಲ್ಲಿ ‘ಚೀನಾ ಸಾಲ’ ಹಾವಳಿ ಆರಂಭ..!

ಮೊಬೈಲ್‌ ಆ್ಯಪ್‌ನಲ್ಲಿ(Mobile App) ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿ ಮೇಲೆ ಕಳೆದ ವರ್ಷದ ನ.16ರಂದು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಮತ್ತೊಂದಿಷ್ಟು ಆಪ್‌ಗಳಿಗೆ ಈಗ ಕೇಂದ್ರ ಸರ್ಕಾರದ ಲಗಾಮು

ಮುನೇನಕೊಳಲು ಸಿಲ್ವರ್‌ ಸ್ಟ್ರಿಂಗ್‌ ಲೇಔಟ್‌ನ ‘ಲೈಕೋರೈಸ್‌ ಟೆಕ್ನಾಲಜಿ ಪ್ರೈ.ಲಿ.’ನ ಮಾನವ ಸಂಪನ್ಮೂಲ ಅಧಿಕಾರಿ ಕಾಮರಾಜ್‌ ಮೋರೆ (25) ಮತ್ತು ಟೀಂ ಲೀಡರ್‌ ದರ್ಶನ್‌ ಚವ್ಹಾಣ (21) ಬಂಧಿತರು. ಈ ದಂಧೆಯ ರೂವಾರಿ ಚೀನಾ(China) ಮೂಲದವನಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ದಾಳಿ ವೇಳೆ 83 ಕಂಪ್ಯೂಟರ್‌ ಮತ್ತು ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಏನಿದು ದಂಧೆ

ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಚೀನಾ ಮೂಲದ ವ್ಯಕ್ತಿಗಳು ಕ್ಯಾಷ್‌ ಮಾಸ್ಟರ್‌, ಕ್ರೈಝಿ ರುಪೀಸ್‌ ಸೇರಿದಂತೆ ಹಲವು ಸಾಲದ ಆ್ಯಪ್‌(Loan App) ಅಭಿವೃದ್ಧಿಪಡಿಸಿದ್ದರು. ಬಳಿಕ ಉದ್ಯೋಗದ(Job) ಆಸೆ ತೋರಿಸಿ ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಂದ ದಾಖಲೆಗಳನ್ನು ಪಡೆದು ಪ್ರತಿಯೊಬ್ಬರ ಹೆಸರಿನಲ್ಲಿ ಐದಾರು ಕಂಪನಿಯಂತೆ ಒಟ್ಟು 52 ನಕಲಿ ಕಂಪನಿಗಳನ್ನು ನೋಂದಣಿ(Registration) ಮಾಡಿಸಿದ್ದರು. ಲೈಕೋರೈಸ್‌ ಟೆಕ್ನಾಲೋಜಿ ಪ್ರೈ.ಲಿ. ಹೆಸರಿನಲ್ಲಿ ಮುನೇನಕೊಳಲು ಸಿಲ್ವರ್‌ ಸ್ಟ್ರಿಂಗ್‌ ಲೇಔಟ್‌ನಲ್ಲಿ ಕಚೇರಿ ತೆರೆದು ಕಾಲ್‌ ಸೆಂಟರ್‌ ತೆರೆದಿದ್ದರು. ಈ ಕಂಪನಿ ಹೆಸರಿನಲ್ಲಿ ಯೆಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟೆಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಐಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದರು. ಈ ಕಂಪನಿಯ ನಿರ್ವಹಣೆ ಜವಾಬ್ದಾರಿಯನ್ನು ಬಂಧಿತ ಆರೋಪಗಳಿಗೆ ವಹಿಸಿದ್ದರು.

 

click me!