ಹೊಸಪೇಟೆ ನಗರದ 6ನೇ ವಾರ್ಡ್ ನಿವಾಸಿ ಡಿ. ಪೋಲಯ್ಯ ಎಂಬವರು ನೀಡಿದ ದೂರಿನನ್ವಯ ಸಚಿವ ಆನಂದ್ ಸಿಂಗ್, ವಕೀಲ ಮರಿಯಪ್ಪ, ಹನುಮಂತಪ್ಪ ಮತ್ತು ಹುಲುಗಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲು
ಹೊಸಪೇಟೆ(ಸೆ.02): ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಕುಟುಂಬಯೊಂದು ವಿಜಯನಗರ ಎಸ್ಪಿ ಕಚೇರಿಯ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಸೇರಿ ನಾಲ್ವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ. ನಗರದ 6ನೇ ವಾರ್ಡ್ ನಿವಾಸಿ ಡಿ. ಪೋಲಯ್ಯ ಎಂಬವರು ನೀಡಿದ ದೂರಿನನ್ವಯ ಸಚಿವ ಆನಂದ್ ಸಿಂಗ್, ವಕೀಲ ಮರಿಯಪ್ಪ, ಹನುಮಂತಪ್ಪ ಮತ್ತು ಹುಲುಗಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸಪೇಟೆ ನಗರದ 6ನೇ ವಾರ್ಡ್ ನಿವಾಸಿ ಡಿ. ಪೋಲಯ್ಯ ಸೇರಿ ಕುಟುಂಬದ ಆರು ಜನ ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ತಡೆದು, ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ರಾತ್ರಿ ಪೋಲಯ್ಯ ದೂರು ನೀಡಿದ ಹಿನ್ನೆಲೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂಬರ್-110/22ರಲ್ಲಿ) ಸಚಿವ ಆನಂದ ಸಿಂಗ್, ವಕೀಲ ಮರಿಯಪ್ಪ, ಹನುಮಂತಪ್ಪ, ಹುಲುಗಪ್ಪ ಎಂಬವರ ವಿರುದ್ಧ ಸೆಕ್ಷನ್ 504, 506 ಡಿ/ತಿ 34 ಐಪಿಸಿ 3(2)(ಗಿಚಿ) ಎಸ್ಸಿ, ಎಸ್ಟಿಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ವಿಜಯನಗರ ಎಸ್ಪಿ ಕಚೇರಿ ಮೂಲಗಳು ತಿಳಿಸಿವೆ.
Crime News: ಗರ್ಭಿಣಿ ಹಸುವಿನ ಮೇಲೆ ಕಾಮುಕನಿಂದ ಅತ್ಯಾಚಾರ; ಗೋವು ಸಾವು
ಘಟನೆ ವಿವರ:
ಪೋಲಯ್ಯ ಕುಟುಂಬ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ 6ನೇ ವಾರ್ಡ್‌ನ ಸುಣ್ಣದ ಭಟ್ಟಿಪ್ರದೇಶದಲ್ಲಿ ವಾಸ ಇದೆ. ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಸಚಿವ ಆನಂದ ಸಿಂಗ್ ಅವರು ಪೋಲಯ್ಯ ಅವರ ವಾಸದ ಮನೆ ಕಟ್ಟಿರುವ ಜಾಗ ಸರ್ಕಾರದ್ದು, ಅಕ್ರಮವಾಗಿ ಮನೆ ಕಟ್ಟಲಾಗಿದೆ. ಈ ಜಾಗವನ್ನು ನಗರಸಭೆ ವಶಕ್ಕೆ ಪಡೆಯಲಿದೆ. ಹಾಗಾಗಿ, ಎಲ್ಲರೂ ಮನೆ ಖಾಲಿ ಮಾಡುವಂತೆ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಪೋಲಯ್ಯ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಆತ್ಮಹತ್ಯೆಗೆ ಯತ್ನಿಸಿದ ಪೋಲಯ್ಯ ಸೇರಿ ಆರು ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರು ತಿಂಗಳ ಹಿಂದೆ ಆನಂದ ಸಿಂಗ್ ಅವ್ಯವಹಾರದ ಬಗ್ಗೆ ನಾನು ದಾಖಲಾತಿ ಬಿಡುಗಡೆ ಮಾಡಿದ್ದೆ, ಅಂದಿನಿಂದ ಧಮಕಿ ಹಾಕುತ್ತಾ, ಕಿರುಕುಳ ಕೊಡ್ತಿದ್ದಾರೆ. ಸಚಿವರ ವಿರುದ್ಧ ಧ್ವನಿ ಎತ್ತಿದವರ ಧ್ವನಿ ಅಡಗಿಸಲಾಗುತ್ತಿದೆ. ನನ್ನ ಆಸ್ತಿ ಸರ್ಕಾರಕ್ಕೆ ಕೊಟ್ಟು ನಮ್ಮ ಕುಟುಂಬದವರನ್ನು ಬೀದಿಗೆ ತಳ್ಳಬೇಕು ಎಂಬುದು ಅವರ ಉದ್ದೇಶ.
ಪ್ರಿಯತಮೆಗೆ ಬೇರೊಬ್ಬನ ಜೊತೆ ಮದುವೆ ನಿಗದಿ: ಪ್ರಿಯಕರನ ಬಾಡಿಗೆ ಮನೆ ಧ್ವಂಸ ಮಾಡಿದ ಸಂಬಂಧಿಕರು
ಪೋಲಪ್ಪ, ದೂರುದಾರ
ನಾನು ಯಾವುದೇ ರೀತಿಯಲ್ಲಿ ಜೀವ ಬೆದರಿಕೆ ಹಾಕಿಲ್ಲ. ಈ ಮಾತುಗಳೆಲ್ಲವೂ ಸತ್ಯಕ್ಕೆ ದೂರವಾದುದು. ಅವರು ಕೊಟ್ಟದೂರಿನ ಮೇಲೆ ನನ್ನ ವಿರುದ್ಧ ಎಫ್‌ಐಆರ್ ಆಗಿದೆ. ಕಾನೂನು ಪ್ರಕಾರ ತನಿಖೆಯಾಗಲಿ, ಸಂಬಂಧಪಟ್ಟಇಲಾಖೆ ಇದೆ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲಿ, ತನಿಖೆಯಲ್ಲಿ ಸತ್ಯಾಂಶ ತಿಳಿಯಲಿ. ನಾನು ಯಾವುದೇ ರೀತಿಯ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿಲ್ಲ. ಜಾತಿ ನಿಂದನೆಯನ್ನೂ ಮಾಡಿಲ್ಲ ಅಂತ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಪೋಲಪ್ಪ ದೂರಿನ ಮೇಲೆ ಸಚಿವ ಆನಂದ ಸಿಂಗ್, ಇತರ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಪೋಲಪ್ಪ ಕುಟುಂಬದ ಒಟ್ಟು ಆರು ಜನರ ಮೇಲೆ ಆತ್ಮಹತ್ಯೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಅಂತ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಹೇಳಿದ್ದಾರೆ.