5 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರ್‌ನ ಹೊಸ್ಕೆರೆ ಸೈಟ್‌ನ ಮಹಿಳೆಯ ಶವ ಕಣ್‌ಕುಟ್ಲುವಿನ ಬಳಿ ಮಹಿಳೆಯ ಶವದ ಅವಶೇಷ ಪತ್ತೆಯಾಗಿದೆ. ಆಕೆಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.23): ಐದು ತಿಂಗಳ ಹಿಂದೆ ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಹೂತು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ವಾಸಂತಿ (42) ಕೊಲೆಯಾಗಿರುವ ಮಹಿಳೆ. ಏಪ್ರಿಲ್ 29ರ ಬೆಳಿಗ್ಗೆ, ಶೃಂಗೇರಿ ತಾಲ್ಲೂಕಿನ ತ್ಯಾವಣ ಸಮೀಪದ ವಾಸಂತಿ ಮನೆ ಬಿಟ್ಟು ನಾಪತ್ತೆ ಆಗಿದ್ದರು. ಆ ಬಳಿಕ ಪುತ್ರ ನವೀನ್ ಇಲ್ಲೇ ಎಲ್ಲಾದರೂ ಸಂಬಂಧಿಗಳ ಮನೆಗೆ ಹೋಗಿರಬಹುದು ಎಂದು ಹುಡುಕಾಡಿದ್ದಾರೆ. ಹತ್ತು ದಿನಗಳ ಬಳಿಕವೂ ಕಾಣೆಯಾದ ತನ್ನ ತಾಯಿಯ ಕುರಿತಂತೆ ಸುಳಿವು ಸಿಗದ ಹಿನ್ನಲೆ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
undefined
ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು :
5 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರ್‌ನ ಹೊಸ್ಕೆರೆ ಸೈಟ್‌ನ ಮಹಿಳೆಯ ಶವ ಕಣ್‌ಕುಟ್ಲುವಿನ ಬಳಿ ಮಹಿಳೆಯ ಶವದ ಅವಶೇಷ ಪತ್ತೆಯಾಗಿದೆ. ಆಕೆಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆ ತಾಲ್ಲೂಕಿನ ನೆಮ್ಮಾರ್‌ನ ಹೊಸ್ಕೆರೆ ಸೈಟ್‌ನ ವಾಸಂತಿ 45 ವರ್ಷ ಎಂದು ಗುರುತಿಸಲಾಗಿದೆ. ಕಳಸ ಮೂಲದ ಬೀದಿಮನೆಯ ಪ್ರಕಾಶ್ ಬಂಧಿತ ಆರೋಪಿ ಆಗಿದ್ದಾನೆ. ಕಳಸ ಮೂಲದ ಪ್ರಕಾಶ್ (29) ತ್ಯಾವಣದ ಪ್ಲಾಂಟೇಶನ್ ಒಂದರಲ್ಲಿ ಕೆಲಸಕ್ಕೆ ಒಂದು ವರ್ಷದಿಂದ ಹೊಸ್ಕೆರೆ ಸೈಟ್‌ನ ವಾಸಂತಿಯೊಂದಿಗೆ ಅನೈತಿಕ ಸಂಬಂಧ ಇತ್ತು. ಕಳೆದ ಎಪ್ರೀಲ್ 4 ರಂದು ವಾಸಂತಿಯ ಮಗ ನವೀನ್ ನನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಸಿದ್ದರು. ಪೊಲೀಸರು ತನಿಖೆ ಕೈಗೊಂಡು ಹಲವಾರು ಸಾಕ್ಷ್ಯಧಾರಗಳನ್ನು ಪರೀಶಿಲಿಸಿ ಮತ್ತು ಸಾರ್ವಜನಿಕರನ್ನು ವಿಚಾರಿಸಿದಾಗ ಅವರಿಬ್ಬರು ದೂರವಾಣಿಯಲ್ಲಿ ಸಂಪರ್ಕದಲ್ಲಿರುವುದು ತನಿಖೆಯಲ್ಲಿ ಖಚಿತವಾಯಿತು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನೇ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿಕೊಟ್ಟ ತಹಶೀಲ್ದಾರ್
ಫೋನ್ ಕಾಲ್ ನಿಂದ ಸಿಕ್ಕಾಕ್ಕೊಂಡ
ಪ್ರಕಾಶ್‌ನನ್ನು ತನಿಖಾಧಿಕಾರಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕಾಶನು ವಿವಾಹಿತನಾಗಿದ್ದರಿಂದ ಮಾ.29ರಂದು ಕಣ್‌ಕುಟ್ಲುವಿನಲ್ಲಿ ವಾಸಂತಿ ಮತ್ತು ಪ್ರಕಾಶ್ ಒಂದೆಡೆ ಸೇರಿದಾಗ ಪ್ರಕಾಶನ ದಾಂಪತ್ಯದ ವಿಷಯ ವಾಸಂತಿಗೆ ತಿಳಿದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಪ್ರಕಾಶ್ ವಾಸಂತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ವಾಸಂತಿ ಸ್ಥಳದಲ್ಲಿ ಸಾವನ್ನಪ್ಪಿದ್ದು ಅಲ್ಲೆ ಇರುವ ಗಿಡದ ಕೆಳಗೆ ಮಣ್ಣಿನಲ್ಲಿ ಹೂತಿದ್ದು, ಏನು ಗೋತ್ತಿಲ್ಲದಂತೆ ತಿರುಗಾಡುತ್ತೀದ್ದನು. ಪೊಲೀಸರು ಇಬ್ಬರ ಮೋಬೈಲ್ ಕರೆಗಳ ವಿವರವನ್ನು ಪರೀಶೀಲಿಸಿ ಪ್ರಕಾಶನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ತಹಶೀಲ್ದಾರ್ ಪಿ.ಗೌರಮ್ಮ ಭೇಟಿ ನೀಡಿ ಪರೀಸಿಲಿಸಿದರು. ತನಿಖಾಧಿಕಾರಿಯಾಗಿ ಸಬ್‌ಇನ್‌ಸ್ಪೆಕ್ಟರ್ ಭರ್ಮಪ್ಪ ಬೆಳಗಲಿ ಪ್ರಕರಣವನ್ನು ಬೆನ್ನು ಹತ್ತಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಲಾಯದ ವಿಜ್ಞಾನಿಗಳು ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.