ಮಂಡ್ಯದಲ್ಲಿ ಹಾಡುಹಗಲೇ ಮಹಿಳೆಯ ಕೊಲೆಗೆ ಯತ್ನ!

Published : Jun 13, 2022, 04:02 PM ISTUpdated : Jun 13, 2022, 04:04 PM IST
ಮಂಡ್ಯದಲ್ಲಿ ಹಾಡುಹಗಲೇ ಮಹಿಳೆಯ ಕೊಲೆಗೆ ಯತ್ನ!

ಸಾರಾಂಶ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಕೊಲೆ ಯತ್ನ ನಡೆಸಲಾಗಿದೆ. ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಕೊಲೆಗೆ ಯತ್ನ ನಡೆಸಲಾಗಿದೆ ಎಂದು ಹೇಳಲಾಗಿದೆ.

ಮಂಡ್ಯ (ಜೂನ್ 13): ಹಾಡುಹಗಲಲ್ಲೇ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನಲ್ಲಿ ಮಹಿಳೆಯ ಮೇಲೆ ಕೊಲೆ ಯತ್ನ (murder attempt) ನಡೆಸಲಾಗಿದೆ. ತಾಲೂಕಿನ ಗೆಳತಿ ಗುಡ್ಡಕ್ಕೆ (Gelathi Gudda) ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

 ನಾಗಮಂಗಲ ತಾಲೂಕಿನ ಗೆಳತಿ ಗುಡ್ಡದ ಕಡೆಗೆ ಹೋಗುವ ರಸ್ತೆಯಲ್ಲಿ 40 ವರ್ಷದ ಪ್ರಭಾ (Prabha) ಎನ್ನುವ ಮಹಿಳೆಯ ಮೇಲೆ ಕೊಲೆ ಯತ್ನ ಮಾಡಲಾಗಿದೆ. ಮೊದಲು ಮಚ್ಚಿನಿಂದ ಹಲ್ಲೆ ನಡೆಸಿದ ವ್ಯಕ್ತಿ ಬಳಿಕ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾನೆ. ಬೆಂಗಳೂರಿನ ಗೊಲ್ಲರಹಟ್ಟಿಯ(Gollarahatti) ನಿವಾಸಿ ಬಸವರಾಜು (Basavaraju) ಎನ್ನುವ ವ್ಯಕ್ತಿ ಪ್ರಭಾರನ್ನು ಕೊಲ್ಲಲು ಯತ್ನಿಸಿದ್ದಾನೆ.

ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಕೃತ್ಯ: ಪ್ರಭಾ ಅವರ ಪತಿ ಪಾಪಣ್ಣ ಮೂರು ವರ್ಷದ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಪ್ರಭಾ ಅವರಿಗೆ ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು ಅವರ ಪರಿಚಯವಾಗಿತ್ತು. ಮೊದಲು ಆತ್ಮೀಯತೆಯಲ್ಲಿದ್ದ ಸ್ನೇಹ ಬಳಿಕ ಅಕ್ರಮ ಸಂಬಂಧಕ್ಕೆ ತಿರುಗಿತ್ತು.

ಶುಕ್ರವಾರ ಪ್ರಭಾ ಅವರನ್ನು ಬಸವರಾಜು ಮಲೆ ಮಹದೇಶ್ವರ ಬೆಟ್ಟಕ್ಕೆ ಕಳರೆದುಕೊಂಡು ಹೋಗಿದ್ದುರ. ಬಳಿಕ ಮೈಸೂರಿನ ಲಾಡ್ಜ್ ವೊಂದರಲ್ಲಿ ಬಸವರಾಜು ಹಾಗೂ ಪ್ರಭಾ ಎರಡು ದಿನ ಉಳಿದುಕೊಂಡಿದ್ದರು. ಬಳಿಕ ಮೈಸೂರಿನಿಂದ ಹೊರಟು ನಾಗಮಂಗಲ ಬಳಿಕ ಸೂಳೆ ಕೆರೆಯನ್ನು ನೋಡಲು ಹೊರಟ್ಟಿದ್ದರು.

ಸೂಳೆಕೆರೆಗೆ ಹೋಗುವ ಮಾರ್ಗಮಧ್ಯದಲ್ಲಿ ಸಿಗುವ ಗೆಳತಿ ಗುಡ್ಡದಲ್ಲಿ ಪ್ರಭಾ ಅವರ ಕೊಲೆಗೆ ಬಸವರಾಜು ಯತ್ನಿಸಿದ್ದಾರೆ. ಜೊತೆಯಲ್ಲಿಯೇ ಬರುವ ವೇಳೆಯಲ್ಲೇ ಮಚ್ಚು ತೆಗೆದುಕೊಂಡು ಬಂದಿದ್ದ ಬಸವರಾಜು ಮೊದಲು ಮಚ್ಚಿನಿಂದ ಪ್ರಭಾ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬಸವರಾಜು ಬೆಂಕಿ ಹಚ್ಚಿದ್ದ.

ಬೆಂಕಿ ಹಚ್ಚಿದ ಬೆನ್ನಲ್ಲಿಯೇ ಬಸವರಾಜು ಸ್ಥಳದಿಂದ ಪರಾರಿಯಾಗಿದ್ದ. ಅದರೆ, ಪ್ರಭಾ ಕಿರುಚುತ್ತಲೇ ರಸ್ತೆಗೆ ಓಡು ಬಂದಿದ್ದರು, ಈ ವೇಳೆ ಸ್ಥಳದಲ್ಲಿದ್ದ ಜನರು ಆಕೆಯನ್ನು ಕಾಪಾಡಿದ್ದಾರೆ. ಶೇ. 40 ರಷ್ಟು ಸುಟ್ಟ ಗಾಯಗಳಾಗಿರುವ ಪ್ರಭಾ ಅವರಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ಕುರಿತಾಗಿ ನಾಗಮಂಗಲ ಟೌನ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಸವರಾಜನ ಪತ್ತೆಗಾಗಿ ಬಲೆ ಬೀಸಿದೆ.

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ: ಪಾಗಲ್ ಪ್ರೇಮಿಗೆ ಬಿತ್ತು ಧರ್ಮದೇಟು..!

ಇತ್ತೀಚೆಗೆ ಮಂಡ್ಯದಲ್ಲಿಯೇ ನಡೆದ ಪ್ರಕರಣದಲ್ಲಿ ಪ್ರೀತಿಸುತ್ತಿದ್ದ ಹುಡುಗಿ ಪೋಷಕರ ಮಾತು ಕೇಳಿ ತನ್ನಿಂದ ಅಂತರ ಕಾಯ್ದುಕೊಂಡಳು ಎಂಬ ಕಾರಣಕ್ಕೆ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. ವೈ.ಯರಹಳ್ಳಿ ಗ್ರಾಮದ ಸಂಪತ್ ಕುಮಾರ್ (20) ರಿಪಿಸ್ ಪಟ್ಟಿಯಿಂದ ಯುವತಿ ತಲೆಗೆ ಮನಸ್ಸೋ ಇಚ್ಛೆ ಥಳಿಸಿದ್ದು. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಗಿರಿಜಾ (20)(ಹೆಸರು ಬದಲಾಯಿಸಲಾಗಿದೆ) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯವಹಾರಕ್ಕೆ ಅಡ್ಡಿಯಾಗ್ತಿದ್ದ ತಮ್ಮನನ್ನೇ ಕೊಂದ ಅಣ್ಣ: ದೆವ್ವವಾಗಿ ಕಾಡಬಾರದು ಅಂತ ಹಿಮ್ಮಡಿ ಕತ್ತರಿಸಿದ್ದ!

ವೈ.ಯರಹಳ್ಳಿ ಗ್ರಾಮದವರೇ ಆದ ಸಂಪತ್ ಕುಮಾರ್ ಹಾಗೂ ಗಿರಿಜಾ ಕಳೆದ ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದೊಂದು ವರ್ಷದ ಹಿಂದೆ ಪ್ರೀತಿ ವಿಚಾರ ಗಿರಿಜಾ ಪೋಷಕರಿಗೆ ಗೊತ್ತಾಗಿದೆ. ಮಂಡ್ಯದಲ್ಲಿ ಪ್ಯಾರ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಗಿರಿಜಾಗೆ ತಂದೆ ಪರಮೇಶ್ ಬುದ್ದಿವಾದ ಹೇಳಿದ್ದಾರೆ. ಮೊದಲು ಓದು ಮುಗಿಸು ಸಂಪತ್ ಕುಮಾರ್‌ನಿಂದ ದೂರವಿರುವಂತೆ ಎಚ್ಚರಿಸಿದ್ದಾರೆ. ನಂತರ ಪ್ರಿಯಕರನಿಂದ ಅಂತರ ಕಾಯ್ದುಕೊಂಡ ಗಿರಿಜಾ ಆತನ ಪ್ರೀತಿಯನ್ನ ನಿರಾಕರಿಸುತ್ತಾ ಬಂದಿದ್ದಳು. ಆದರೆ ಪ್ರೀತಿಯ ಹುಚ್ಚು ಹಿಡಿಸಿಕೊಂಡಿದ್ದ ಸಂಪತ್ ಕುಮಾರ್ ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು