ಕೋಲಾರ ಜಿಲ್ಲೆಯ ಮುತ್ಯಾಲಾಪೇಟೆಯಲ್ಲಿ ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳು ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಎಸ್ಪಿ ದೇವರಾಜ್ ಚಿಂತನೆ ನಡೆಸಿದ್ದಾರೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಜುಲೈ 25): ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮುತ್ಯಾಲಾಪೇಟೆಯಲ್ಲಿ ಜೂನ್ 7 ರಂದು ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದಿಂದ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಗಳು ಪಡೆದುಕೊಳ್ತಿದೆ. ಜಗನ್ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಬಹುಪಾಲು ಜನರು ರೌಡಿಶೀಟರ್ ಗಳೇ ಆಗಿದ್ರು ಅನ್ನೋ ಮಾಹಿತಿ ತಿಳಿದು ಒಂದು ಕ್ಷಣ ಕೋಲಾರ ಪೊಲೀಸರೇ ಶಾಕ್ ಆಗಿದ್ದಾರೆ. ಜಗನ್ ಮೋಹನ್ ಕೊಲೆ ಕೇಸ್ ಅನ್ನು ಪೊಲೀಸರು ಭೇದಿಸಿದ ಬಳಿಕ ಹಲವಾರು ಶಾಕಿಂಗ್ ಮಾಹಿತಿಗಳು ತಿಳಿದು ಬರ್ತಿದೆ.ಸಾಕಷ್ಟು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿರುವವರೇ ಇದರಲ್ಲಿ ತೊಡಗಿಕೊಂಡಿದ್ದು,ಇವರಿಗೆಲ್ಲ ಪೊಲೀಸ್ ಠಾಣೆಗೆ ಹೋಗಿ ಬರೋದು ಕಾಮನ್ ಆಗಿಬಿಟ್ಟಿದೆ. ಹಾಗಾಗಿ ಇವರಿಗೆಲ್ಲ ಕಾನೂನು ಅಡಿಯಲ್ಲಿ ಬಿಗಿಗೊಳಿಸಬೇಕು ಎಂದು ಕೋಲಾರ ಎಸ್ಪಿ ದೇವರಾಜ್ ತೀರ್ಮಾನಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.ಆರೋಪಿಗಳ ಹಿನ್ನೆಲೆಯೂ ಸಹ ಇದೀಗ ಬೆಚ್ಚಿ ಬೀಳಿಸುತ್ತಿದ್ದು,ಅನಿವಾರ್ಯವಾಗಿ ಎಸ್ಪಿ ದೇವರಾಜ್ ಈ ತೀರ್ಮಾನಕ್ಕೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ.
undefined
ಕೊಲೆ ಮಾಡಿ ಸ್ವಲ್ಪ ದಿನ ಜೈಲಿನಲ್ಲಿ ಇದ್ದು ಹೊರ ಬಂದ ಬಳಿಕ ಮತ್ತದೇ ಚಾಳಿ ಮುಂದುವರೆಸುತ್ತಿದ್ದಾರೆ,ಆಗಾಗಿ ಕೋಲಾರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆರೋಪಿಗಳ ಮೇಲೆ ಕಾನೂನಿನ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಲಗೈ ಬಂಟನಾಗಿದ್ದ ಮೃತ ಜಗನ್ ಮೋಹನ್ ರೆಡ್ಡಿ ಸಹ ಮುಳಬಾಗಿಲು ತಾಲೂಕಿನಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ. ರಾಜಕೀಯದಲ್ಲಿ ಪಳಗಿದ ವ್ಯಕ್ತಿಯನ್ನೇ ಬೆಳಿಗಿನ ಜವ ಮುತ್ಯಾಲಾಪೇಟೆಯ ಗಂಗಮ್ಮ ದೇವಸ್ಥಾನದ ಮುಂಭಾಗ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಇನ್ನೆಷ್ಟು ಖತರ್ನಾಕ್ ಇರಬೇಕು ಅನ್ನೋದು ಪೊಲೀಸರು ಅರಿತು ಐಜಿಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಎಸ್ಪಿ ದೇವರಾಜ್ ಕಾನೂನು ಭ್ರಮಾಸ್ತ್ರಕ್ಕೆ ಬ್ರಹ್ಮಾಸ್ತ್ರಕ್ಕೆ ಮುಂದಾಗಿದ್ದಾರೆ.
ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಕಳೆದ ಹತ್ತು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದವರು ,ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಸಹ ಅದೇ ಚಾಳಿ ಮುಂದುವರೆಸಿದ್ದರು. ಇನ್ನು ಈ ನಟೋರಿಯಸ್ ಗಳ ಮೇಲೆ ಈಗಾಗಲೇ ಹಲವು ಕೊಲೆ ಪ್ರಕರಣ,ಕೊಲೆ ಯತ್ನ ಪ್ರಕರಣಗಳಿವೆ. ಇನ್ನು ಜಗನ್ ಕೊಲೆ ಮಾಡಿರುವ ಆರೋಪಿಗಳ ವಿಚಾರಣೆ ವೇಳೆ ಮತ್ತೊಂದು ಕೊಲೆಯ ಅಸಲಿ ಕಥೆ ತೆರೆದುಕೊಂಡಾಗ,ಒಂದು ಕ್ಷಣ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.ಹೌದು ಪೇಂಟರ್ ರಮೇಶ್ ಎಂಬುವನ ಕೊಲೆ ಪ್ರಕರಣ ಹೊರ ಬರುತ್ತದೆ,ಆ ಕೊಲೆಯ ಆರೋಪಿಗಳು ಇನ್ನು ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಬಾಯಿ ಬಿಟ್ಟಿದ್ದು ಕೆಲವು ಪ್ರಕರಣಗಳನ್ನು ಬೆಳಕಿಗೆ ಬಾರದೆ ಹಾಗೆಯೇ ಮುಚ್ಚಿಹಾಕಿರುವ ಬಗ್ಗೆ ಆರೋಪಿಗಳೇ ಒಪ್ಪಿಕೊಂಡಿದ್ದಾರೆ.
ಕೊಲೆಯಾದವನೇ ಬೇರೊಂದು ಹತ್ಯೆ ಕೇಸಿನ ಆರೋಪಿ, ಪೊಲೀಸ್ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ
ಈಗಾಗಿ ಇದಕೆಲ್ಲಾ ಬ್ರೇಕ್ ಹಾಕಬೇಕು ಎಂದು ನಿರ್ಧರಿಸಿ,ಇವರೇ ಮೇಲೆ ಸಾಮಾನ್ಯವಾಗಿ ಪ್ರಕರಣ ದಾಖಲು ಮಾಡಿದರೆ ಉಪಯೋಗಕ್ಕೆ ಬರೋದಿಲ್ಲ, ಮತ್ತೆ ಇವರು ಜೈಲಿನಿಂದ ಹೊರಬಂದ ಇಂಥದ್ದೇ ಕೃತ್ಯಗಳನ್ನು ಎಸಗುತ್ತಾರೆ ಅನ್ನೋದನ್ನ ಅರಿತು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಜಗನ್ ಮೋಹನ್ ರೆಡ್ಡಿ ಹಾಗೂ ಪೇಂಟರ್ ರಮೇಶ್ ಕೊಲೆ ಪ್ರಕರಣ ಎಲ್ಲಾ ಆರೋಪಿಗಳ ಮೇಲೆ ವಿಶೇಷ ಹಾಗೂ ಕಠಿಣ ಪ್ರಕರಣದಡಿ ಅಂದರೆ ಕೋಕಾ ( ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸಡ್ ಕ್ರೈಂ ಆಕ್ಟ್) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ನಿರ್ಧಾರ ಮಾಡಿದ್ದಾರೆ.
Kolar: ಭ್ರಷ್ಟಾಚಾರ ಬಗ್ಗೆ ಪ್ರಶ್ನಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಬ್ರೋಕರ್‌ಗಳಿಂದ ಹಲ್ಲೆ
ಜಗನ್ ಮೋಹನ್ ರೆಡ್ಡಿ ಹಾಗೂ ಪೇಂಟರ್ ರಮೇಶ್ ಕೊಲೆ ಪ್ರಕರಣ ಪ್ರಮುಖ ಆರೋಪಿಗಳಾದ ಬಾಲಾಜಿ ಸಿಂಗ್, ಧನುಷ್, ಜಗನ್, ಶಿವಪ್ರಸಾಧ್, ಮಹೇಶ್, ಅಭಿನಂಧನ್, ಮನೋಜ್, ನವೀನ್ ಸೇರಿದಂತೆ ಒಟ್ಟು 17 ಜನರ ಮೇಲೆ,ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು DYSP ಮಟ್ಟದ ಅಧಿಕಾರಿಗಳಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ.ಕಾನೂನಿನ ಮೂಲಕ ತಕ್ಕ ಪಾಠ ಕಲಿಸಿ ಇದಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಪಣ ತೊಟ್ಟಿದ್ದಾರೆ.