
ಮುಂಬೈ( ಡಿ. 06) ಇದು ಮುಂಬೈ ಟು ರಾಜಸ್ಥಾನ ಸ್ಟೋರಿ. ತಿರುಚಿದ ಪೋಟೋಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬರಿಂದ 5 ಲಕ್ಷ ರೂ. ವಸೂಲಿಗೆ ಯತ್ನ ಮಾಡಿದ್ದ ಆರೋಪಿ ಬಲೆಗೆ ಬಿದ್ದಿದ್ದಾನೆ.
ಮಹಿಳೆ ಮತ್ತು ಆರೋಪಿ ಹಿಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ರಾಜಸ್ಥಾನ ಮೂಲದ 45 ವರ್ಷದ ವ್ಯಕ್ತಿಯನ್ನು ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಕೆಲವು ವರ್ಷಗಳ ಹಿಂದೆ, ಸಂತ್ರಸ್ತ ಮಹಿಳೆ ಮತ್ತು ಆರೋಫಿ ಬಾಡಿಗೆ ತಾಯಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ಆರೋಪಿಯ ಲಿವ್ ಇನ್ ಪಾರ್ಟನರ್ ಬಾಡಿಗೆ ತಾಯಿ ಆಗಲು ಸಮ್ಮತಿಸುತ್ತಾರಾ? ಎಂದು ಕೇಳಿದ್ದರು. ಆದರೆ ಈದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿ ನಿಂತಿತ್ತು.
ಚಿಕ್ಕಮಗಳೂರಿನ ನೌಟಂಖಿ ರಾಗಿಣಿ.. ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು!
ಕೆಲ ದಿನಗಳು ಕೇದ ಮೇಲೆ ಮಹಿಳೆಗೆ ಆರೋಪಿ ಅವಳದ್ದೇ ಪೋಟೋವನ್ನು ಅಶ್ಲೀಲ ರೀತಿಯಲ್ಲಿ ಸಿದ್ಧಮಾಡಿ ಮೇಲ್ ಮಾಡಲು ಆರಂಭಿಸಿದ್ದಾನೆ. ಹಣ ಕೊಡು ಇಲ್ಲವಾದರೆ ಎಲ್ಲ ಕಡೆ ಶೇರ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಇದೆ ಕಾರಣಕ್ಕೆ ಮಹಿಳೆ ಆತನಿಗೆ ಸುಮಾರು 23 ಸಾವಿರ ರೂ. ನೀಡಿದ್ದಾಳೆ. ಹೆಚ್ಚಿನ ಹಣಕ್ಕೆ ಪೀಡಿಸಿದಾಗ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.
ಮಹಿಳೆ ದೂರು ಆಧರಿಸಿ ರಾಜಸ್ಥಾನದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಬಂಧಿಸಿ ಕರೆತಂದಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ