ಕೀರ್ತನೆ ವೇಳೆ ಜಗಳ; ತಬಲಾ ಹೊಡೆತಕ್ಕೆ ಕೊಲೆಯಾಗಿಹೋದ!

By Suvarna News  |  First Published Dec 6, 2020, 3:09 PM IST

ಕ್ಷುಲ್ಲಕ ಕಾರಣಕ್ಕೆ ಹತ್ಯೆ/ ತಬಲಾದಿಂದ ಹೊಡೆದು ಕೊಲೆ ಮಾಡಿದ/ ಕೀರ್ತನೆ ವಿಚಾರದಲ್ಲಿ ಹುಟ್ಟಿಕೊಂಡ ಜಗಳ/ ಗಂಭೀರಗಾಯಗೊಂಡಿದ್ದ ಕೀರ್ತನೆಕಾರ ಸಾವು


ನವದೆಹಲಿ( ಡಿ. 06) ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ.  ಗುರುನಾನಕರ ಸಂದೇಶ ಸಾರುವ ಗ್ರಂಥಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಆರ್ ಕೆ ಪುರಂ ನಲ್ಲಿ ಘಟನೆ ನಡೆದಿದೆ.

ಕೀರ್ತನೆ ಮಾಡುವಾಗ ಉಂಟಾದ ಸಣ್ಣ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಎಂಥಾ ಪತ್ನಿ.. ಪತಿಗೆ ನಿದ್ದೆ ಮಾತ್ರೆ ಕೊಟ್ಟು ಇನ್ನೊಬ್ಬನ ಜತೆ ಪಲ್ಲಂಗದಾಟ

ಮೃತ ರವೀಂದರ್ ಸಿಂಗ್ ಮತ್ತು ಆರೋಪಿ ದರ್ಶನ್ ಸಿಂಗ್ ಇಬ್ಬರೂ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಶುಕ್ರವಾರ ಬೆಳಿಗ್ಗೆ, ಕೀರ್ತಕನೆ ಮಾಡುವಾಗ ಸಣ್ಣ ವಿಷಯದ ಬಗ್ಗೆ ಜಗಳ ಶುರುವಾಗಿದೆ. ಈ ವೇಳೆ ಸಿಟ್ಟಿಗೆದ್ದ ಆರೋಪಿ ದರ್ಶನ್ ಸಿಂಗ್ ರವೀಂದರ್  ತಲೆಗೆ ತಬಲಾದಿಂದ ಹೊಡೆದಿದ್ದಾನೆ.

ಗಂಭೀರ ಗಾಯಗೊಂಡಿದ್ದ  ರವೀಂದರ್ ಸಿಂಗ್  ಆಸ್ಪತ್ರೆಗೆ ದಾಖಲಿಸಲಾಯಿತಾದರೂ  ಚಿಕಿತ್ಸೆ ಫಲಕಾರಿಯಾಗೆರೆ  ಸಫ್ದರ್ಜಂಗ್ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ. ಇನ್ನೊಂದು ಕಡೆ ಪತ್ನಿಯ ಸ್ಥಿತಿಯೂ ಚಿಂತಾಜನಕವಾಗಿದ್ದು  ಚಿಕಿತ್ಸೆ ನೀಡಲಾಗುತ್ತಿದೆ. 

 

click me!