Cyber Crime: ಆನ್​ಲೈನ್​ನಲ್ಲಿ ಉತ್ತಮ ಹಾಲಿಗಾಗಿ ಹುಡುಕಾಡಿ 18.5 ಲಕ್ಷ ಕಳೆದುಕೊಂಡ ವೃದ್ಧೆ!

Published : Aug 17, 2025, 03:34 PM IST
Milk

ಸಾರಾಂಶ

ಆನ್​ಲೈನ್​ ವಂಚನೆ ಬಗ್ಗೆ ಎಷ್ಟೇ ಮಾಧ್ಯಮಗಳವರು, ಪೊಲೀಸರು ಎಚ್ಚರಿಕೆ ಕೊಡುತ್ತಲಿದ್ದರೂ ಹಲವರಿಗೆ ಇದು ತಿಳಿಯುವುದೇ ಇಲ್ಲ. ಇದೀಗ ಆನ್​ಲೈನ್​ನಲ್ಲಿ ಹಾಲು ತರಿಸಿಕೊಳ್ಳಲು ಹೋಗಿ 71 ವರ್ಷದ ವೃದ್ಧೆಯೊಬ್ಬರು 18.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಆಗಿದ್ದೇನು ನೋಡಿ... 

ಮುಂಬೈನ 71 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಪ್ರಯತ್ನಿಸುವಾಗ ಸೈಬರ್ ಗೂಂಡಾಗಳಿಂದ 18.5 ಲಕ್ಷ ರೂ.ಗಳನ್ನು ವಂಚಿಸಲಾಗಿದೆ. ವಡಾಲಾ ನಿವಾಸಿಯಾಗಿರುವ ಈ ಮಹಿಳೆ ಆಗಸ್ಟ್ ಆರಂಭದಲ್ಲಿ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಹಾಲು ಆರ್ಡರ್ ಮಾಡಲು ಪ್ರಯತ್ನಿಸಿದ್ದರು. ಅವರು ಮಾಡಿದ್ದು ಅಷ್ಟೇ. ಆದರೆ ಮುಂದಾದದ್ದೆಲ್ಲಾ ಅನಾಹುತ. ಸೈಬರ್​ ಕ್ರೈಂಗೆ ಬಲಿಯಾದ ಮಹಿಳೆ, 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಆಗಸ್ಟ್ 4 ರಂದು, ಮಹಿಳೆಗೆ ದೀಪಕ್ ಎಂಬಾತ, ತಾನು ಹಾಲು ಕಂಪನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಕರೆ ಮಾಡಿದ. ಮನೆಗೆ ಹಾಲು ಸರಬರಾಜು ಮಾಡುವುದಾಗಿ ಹೇಳಿದ. ಆನ್​ಲೈನ್​ನಲ್ಲಿ ಹಾಲಿನ ಬಗ್ಗೆ ಮಹಿಳೆ ಸರ್ಚ್​ ಮಾಡುತ್ತಿದ್ದುದು ಈ ಖದೀಮರಿಗೆ ತಿಳಿದಿತ್ತು (ಅದಕ್ಕೇ ಹೇಳುವುದು ನಾವು ಗೂಗಲ್​ನಲ್ಲಿ ಏನೇ ಸರ್ಚ್ ಮಾಡಿದರೂ ಅದರ ಮೇಲೆ ಇಂಥ ಕ್ರಿಮಿನಲ್ಸ್​ ಕಣ್ಣು ನೆಟ್ಟಿರುತ್ತದೆ ಎಂದು!​ ). ಆದ್ದರಿಂದ ಆ ಆಸಾಮಿ ದೀಪಕ್​ ಎಂದು ಪರಿಚಯಿಸಿಕೊಂಡು ವೃದ್ಧೆಯನ್ನು ನಂಬಿಸಿದ.

ಕೊನೆಗೆ ಹಾಲು ಮಾರಾಟ ಸುಲಭವಾಗಲಿದೆ ಎಂದು ಹೇಳಿ, ಆಕೆಯ ನಂಬರ್​ಗೆ ಒಂದು ಲಿಂಕ್​ ಕಳುಹಿಸಿದ. ಇದನದ್ನು ಕ್ಲಿಕ್​ ಮಾಡಿ ಅದರಲ್ಲಿ ಇರುವ ಡಿಟೇಲ್ಸ್​ ಫಿಲ್​​ ಮಾಡಿದರೆ ಮನೆಗೆ ಹಾಲು ಸರಬರಾಜು ಆಗುತ್ತದೆ ಎಂದ. ಅಜ್ಜಿಗೆ ಸಿಕ್ಕಾಪಟ್ಟೆ ಖುಷಿಯಾಗಿ ಹೋಯಿತು. ತಾನು ಅಂದುಕೊಂಡದ್ದು ಇಷ್ಟು ಬೇಗ ಆಗಿಹೋಯಿತಲ್ಲ, ಮನೆಯ ಬಾಗಿಲಿಗೇ ತಂತಾನೇ ಹಾಲು ಬರುತ್ತದೆಯಲ್ಲ ಎಂದು ಖುಷಿಪಟ್ಟುಕೊಂಡಳು.ಆಕೆಯನ್ನು ಇನ್ನಷ್ಟು ನಂಬಿಸಲು ಆ ಖದೀಮ, ಫೋನ್‌ನಲ್ಲಿ ದೀರ್ಘ ಸಂಭಾಷಣೆ ನಡೆಸಿದ.

ವೃದ್ಧೆ ಸಂಪೂರ್ಣ ತನ್ನ ಬುಟ್ಟಿಗೆ ಬಿದ್ದಳು ಎಂದು ತಿಳಿಯುತ್ತದ್ದಂತೆಯೇ ಲಿಂಕ್​ಕಳುಹಿಸಿ. ಅದರಂತೆ ಲಿಂಕ್​ ಓಪನ್​ ಮಾಡಿದ ಮಹಿಳೆ, ಅಲ್ಲಿರುವ ಫಾರ್ಮ್​ ತುಂಬಿದಳು. ನಂತರ ಹಾಲು ಬರಲಿಲ್ಲ. ಅದೇ ಫೋನ್​ಗೆ ಕರೆ ಮಾಡಿದಾಗ ಕರೆಯೂ ಸಿಗಲಿಲ್ಲ. ಕೊನೆಗೆ, ಆಕೆಯ ಫೋನ್​ಗೆ ಒಂದು ಬ್ಯಾಂಕ್​ ಖಾತೆಯಿಂದ 1.7 ಲಕ್ಷ ರೂಪಾಯಿ ಹಾಗೂ ಇತರ ಬ್ಯಾಂಕ್ ಖಾತೆ ಎಲ್ಲವು ಸೇರಿ, 18.5 ಲಕ್ಷ ರೂಪಾಯಿ ವಿತ್​ಡ್ರಾ ಆಗಿರುವುದು ತಿಳಿದಿದೆ. ಅದಾದ ಮೇಲೆ ವೃದ್ಧೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಅವರು ತನಿಖೆ ಮಾಡಿದಾಗ ಹಾಲಿನ ವಿಷಯ ಹೇಳಿದ್ದಾಳೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ