ಹುಬ್ಬಳ್ಳಿ: ಬೇರೊಬ್ಬಳ ಜೊತೆ ಸಂಬಂಧ ಮುಚ್ಚಿಟ್ಟು ಮದುವೆ; ಗಂಡನ ಮೋಸಕ್ಕೆ ಜೀವ ಬಿಟ್ಟ ಗೃಹಿಣಿ!

Published : Aug 17, 2025, 12:40 PM IST
Hubballi Crime

ಸಾರಾಂಶ

ಹುಬ್ಬಳ್ಳಿಯಲ್ಲಿ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ. ಕುಟುಂಬಸ್ಥರಿಂದ ಕೊಲೆಯ ಆರೋಪ. ಪೊಲೀಸರಿಂದ ತನಿಖೆ ಆರಂಭ.

ಹುಬ್ಬಳ್ಳಿ (ಆ.17): ಹುಬ್ಬಳ್ಳಿಯ ನಂದಗೋಕುಲ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ.

ಮೃತ ಗೃಹಿಣಿಯನ್ನ ಜಯಶ್ರೀ ಬಡಿಗೇರ್ (31) ಎಂದು ಗುರುತಿಸಲಾಗಿದೆ. ಆದರೆ ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಜಯಶ್ರೀ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಜಯಶ್ರೀ ಅವರು ಮೇ 21ರಂದು ಶಿವಾನಂದ್ ಬಡಿಗೇರ್ ಎಂಬ ಖಾಸಗಿ ಕಂಪನಿಯ ಉದ್ಯೋಗಿಯನ್ನು ವಿವಾಹವಾಗಿದ್ದರು. ಹದಿಮೂರು ವರ್ಷದ ಪ್ರೀತಿ ಮುಚ್ಚಿಟ್ಟು ಜಯಶ್ರೀ ವಿವಾಹವಾಗಿದ್ದ ಶಿವಾನಂದ್. ಮದುವೆ ನಂತರ ಜಯಶ್ರೀಗೆ ಈ ಬಗ್ಗೆ ಮಾಹಿತಿ ನೀಡಿದ್ದ ಯುವತಿ. ಇದರಿಂದ ಆಘಾತಗೊಂಡರು ಈಗಾಗಲೇ ಮದುವೆಯಾಗಿದ್ದ ಜಯಶ್ರೀ ಎಲ್ಲವನ್ನು ನುಂಗಿಕೊಂಡು ಗಂಡನ ಜೊತೆಗೆ ಇರಲು ಮುಂದಾಗಿದ್ದಳು.

ಈ ವಿಷಯದಿಂದ ದಂಪತಿಗಳ ನಡುವೆ ಆಗಾಗ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಶಿವಾನಂದ್ ತನ್ನ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಜಯಶ್ರೀ ಅವರ ಕುಟುಂಬಸ್ಥರು ದೂರಿದ್ದಾರೆ. ಕಳೆದ ರಾತ್ರಿಯೂ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ರಾತ್ರಿ ಕಳೆದು ಬೆಳಗಾದಾಗ ಜಯಶ್ರೀ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ಇದು ಆತ್ಮ೧ಹತ್ಯೆಯಲ್ಲ, ಶಿವಾನಂದ್ ತಮ್ಮ ಮಗಳನ್ನು ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಜಯಶ್ರೀ ಪೋಷಕರು ಆರೋಪಿಸಿದ್ದಾರೆ.

ಈ ಘಟನೆಯು ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಯಶ್ರೀ ಅವರ ಕುಟುಂಬದ ಆರೋಪಗಳನ್ನು ಆಧರಿಸಿ, ಶಿವಾನಂದ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರು ಶವಪರೀಕ್ಷೆ ವರದಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಘಟನೆಯಿಂದ ನಂದಗೋಕುಲ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ನ್ಯಾಯಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ