Mumbai porn racket: ವೆಬ್‌ ಸೀರಿಸ್‌ ಹೆಸರಲ್ಲಿ ವಿಡಿಯೋ ಮಾಡಿ ವಯಸ್ಕರ ಸೈಟ್‌ಗೆ ಅಪ್ಲೋಡ್‌..!

Published : Dec 07, 2022, 04:05 PM IST
Mumbai porn racket: ವೆಬ್‌ ಸೀರಿಸ್‌ ಹೆಸರಲ್ಲಿ ವಿಡಿಯೋ ಮಾಡಿ ವಯಸ್ಕರ ಸೈಟ್‌ಗೆ ಅಪ್ಲೋಡ್‌..!

ಸಾರಾಂಶ

ವಿದೇಶಿ ಗ್ರಾಹಕರಿಗಾಗಿ ಉದ್ದೇಶಿಸಿರುವ ವೆಬ್ ಸೀರೀಸ್‌ಗಾಗಿ 'ಬೋಲ್ಡ್' ದೃಶ್ಯಗಳನ್ನು ಮಾಡುವ ನೆಪದಲ್ಲಿ ತನಗೆ ವಂಚಿಸಲಾಗಿದೆ ಎಂದು ಮಾಡೆಲ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. 

ವೆಬ್ ಸೀರಿಸ್‌ (Web Series) ನೆಪದಲ್ಲಿ ಅಶ್ಲೀಲ ಚಿತ್ರಗಳನ್ನು (Porn Movies) ನಿರ್ಮಿಸಿ ವಿವಿಧ ವಯಸ್ಕ ಸೈಟ್‌ಗಳಲ್ಲಿ (Adult Sites) ಅಪ್‌ಲೋಡ್ ಮಾಡುತ್ತಿದ್ದ ದಂಧೆಯನ್ನು ಮಹಾರಾಷ್ಟ್ರ ರಾಜಧಾನಿ ಮುಂಬೈನ ಚಾರ್ಕೋಪ್ ಪೊಲೀಸರು (Charkop Police) ಭೇದಿಸಿದ್ದು, ಈ ಸಂಬಂಧ ಮಂಗಳವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. 29 ವರ್ಷದ ಮಾಡೆಲ್‌ (Model) ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಅನಿರುದ್ಧ್ ಪ್ರಸಾದ್ ಜಂಗ್ಡೆಯನ್ನು ಬಂಧಿಸಿದ್ದಾರೆ. ಇನ್ನು, ನಿರ್ಮಾಪಕ ಮತ್ತು ನಿರ್ದೇಶಕಿ ಯಾಸ್ಮಿನ್ ಖಾನ್, ಅಮಿತ್ ಪಾಸ್ವಾನ್ ಮತ್ತು ಆದಿತ್ಯ  ಸೇರಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಚಾರ್ಕೋಪ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರಲ್ಲಿ ವಿದೇಶಿ ವೆಬ್ ಸರಣಿಯ ಹೆಸರಿನಲ್ಲಿ ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸುವ ಗ್ಯಾಂಗ್‌ನ ಶೋಷಣೆಯನ್ನು ಮಾಡೆಲ್‌ ತೆರೆದಿಟ್ಟಿದ್ದಾರೆ. ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡ ನಂತರ ಮಾಡೆಲ್‌ ಈ ದಂಧೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದೇಶಿ ಗ್ರಾಹಕರಿಗಾಗಿ ಉದ್ದೇಶಿಸಿರುವ ವೆಬ್ ಸೀರೀಸ್‌ಗಾಗಿ 'ಬೋಲ್ಡ್' ದೃಶ್ಯಗಳನ್ನು ಮಾಡುವ ನೆಪದಲ್ಲಿ ತನಗೆ ವಂಚಿಸಲಾಗಿದೆ ಎಂದು ಮಾಡೆಲ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. 

ಇದನ್ನು ಓದಿ: ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ

ಅಶ್ಲೀಲ ಚಿತ್ರಗಳ ದಂಧೆಯ ಭಾಗವೆಂದು ಆರೋಪಿಸಿ ಒಂದೂವರೆ ವರ್ಷಗಳ ಹಿಂದೆಯೇ ಆರೋಪಿಗಳ ಪೈಕಿ ಒಬ್ಬರಾದ ಯಾಸ್ಮಿನ್‌ ಅನ್ನು ಬಂಧಿಸಲಾಗಿತ್ತು ಎಂದು ಪೋರ್ನ್ ದಂಧೆ ಬಗ್ಗೆ ಪೊಲೀಸರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮಹಿಳೆ ಯಾಸ್ಮಿನ್ ಅವರನ್ನು ಒಂದೂವರೆ ವರ್ಷಗಳ ಹಿಂದೆ ಮುಂಬೈ ಅಪರಾಧ ಗುಪ್ತಚರ ಘಟಕ (ಸಿಐಯು) ಇದೇ ಪ್ರಕರಣದಲ್ಲಿ ಬಂಧಿಸಿತ್ತು ಎಂದು ಮೂಲಗಳು ತಿಳಿಸಿವೆ.

ಮಾಡೆಲ್ ದೂರಿನ ಪ್ರಕಾರ, ರಾಹುಲ್ ಠಾಕೂರ್ ಎಂಬ ವ್ಯಕ್ತಿ ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಿದರು. ಅಲ್ಲದೆ, ಕೇಶವ್ ಅವರೊಂದಿಗೆ ಸಂಪರ್ಕದಲ್ಲಿರಲು ಹೇಳಿದರು, ಆತ ಮಹಿಳೆಯ ಬಯೋ-ಡೇಟಾ ಮತ್ತು ಫೋಟೋವನ್ನು ತೆಗೆದುಕೊಂಡರು ಹಾಗೂ ನಂತರ ಆಕೆಯನ್ನು ರಾಹುಲ್ ಪಾಂಡೆ ಎಂಬ ವ್ಯಕ್ತಿಗೆ ರೆಫರ್‌ ಮಾಡಲಾಯ್ತು. ಆತ, ಕೆಲವು ಬೋಲ್ದ್‌ ದೃಶ್ಯಗಳನ್ನು ಹೊಂದಿರುವ ವೆಬ್ ಸರಣಿಯಲ್ಲಿನ ಕೆಲಸದ ಬಗ್ಗೆ ಆಕೆಗೆ ತಿಳಿಸಿದರು. ಭಾರತದಲ್ಲಿ ವೆಬ್ ಸರಣಿ ಬಿಡುಗಡೆಯಾಗಬೇಕಿದ್ದ ಕಾರಣ ನಾನು ನಿರಾಕರಿಸಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ ಇಡಿ

ನಂತರ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುತ್ತದೆ, ಭಾರತದಲ್ಲಿ ಬಿಡುಗಡೆಯಾಗಲ್ಲ ಎಂದು ಹೇಳಿದ ನಂತರ ಮಾಡೆಲ್‌ ನಟಿಸಲು ಒಪ್ಪಿಕೊಂಡರು. ಹಾಗೂ, ಒಪ್ಪಿದ ನಂತರ ಅನಿರುದ್ಧನನ್ನು ಭೇಟಿಯಾಗುವಂತೆ ಕೇಳಿಕೊಂಡರು ಎಂದು ಮಾಡೆಲ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹಾಗೂ, ತನ್ನನ್ನು ಮಲಾಡ್ ಪಶ್ಚಿಮ ಭಾಗದ ಭಾಬ್ರೇಕರ್ ನಗರದಲ್ಲಿರುವ ಟವರ್ ಫ್ಲಾಟ್‌ಗೆ ಕರೆದೊಯ್ದು ಅಲ್ಲಿ ಆರೋಪಿ ಯಾಸ್ಮಿನ್, ಅನಿರುದ್ಧ ಮತ್ತು ಆದಿತ್ಯನನ್ನು ಭೇಟಿ ಮಾಡಿದರು ಎಂದೂ ಮಹಿಳೆ ಹೇಳಿದ್ದಾರೆ. ಅಲ್ಲಿ, ಯಾಸ್ಮಿನ್ ತನ್ನನ್ನು ಕ್ಯಾಮರಾಪರ್ಸನ್ ಎಂದು ಪರಿಚಯಿಸಿಕೊಂಡಳು ಮತ್ತು ಅನಿರುದ್ಧ್ ಹಾಗೂ ಆದಿತ್ಯ ನಟರು ಎಂದು ಹೇಳಿಕೊಂಡರು ಎಂದೂ ಮಾಡೆಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ, ತನಗೆ ಬಟ್ಟೆ ಬಿಚ್ಚಿ ಕ್ಯಾಮರಾ ಎದುರಿಸುವಂತೆ ಹೇಳಿದರು. ಆದರೆ ತಾನು ಇದಕ್ಕೆ ನಿರಾಕರಿಸಿದಾಗ 15 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಾಸ್ಮಿನ್‌ ಬೆದರಿಕೆ ಹಾಕಿದ್ದಾಳೆ ಎಂದು ಮಾಡೆಲ್‌ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಶೂಟಿಂಗ್ ಮುಂದುವರಿಸುವಂತೆ ಒತ್ತಾಯಿಸಲಾಯಿತು. ಆದರೆ, ಅಕ್ಟೋಬರ್ 22 ರಂದು, ಸಂಬಂಧಿಯೊಬ್ಬರು ತನ್ನ ವೀಡಿಯೊಗಳನ್ನು ಅಶ್ಲೀಲ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿರುವ ಬಗ್ಗೆ ತಿಳಿಸಿದರು.

ಇದನ್ನೂ ಓದಿ: ಕುಂದ್ರಾಗೆ ಕೋಲ್ಕತಾ ಲಿಂಕ್, ಪೋರ್ನ್ ತಯಾರಿಕೆಯಲ್ಲಿದ್ದ ಮಾಡೆಲ್ ಅರೆಸ್ಟ್!

ಬಳಿಕ ಯಾಸ್ಮಿನ್‌ಗೆ ಕರೆ ಮಾಡಿ ವಿಡಿಯೋಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದರೆ, ಹಣ ನೀಡುವಂತೆ ಆಕೆ ಮಾಡೆಲ್‌ಗೆ ಬೇಡಿಕೆಯಿಟ್ಟಿದ್ದಾಳೆ. ಬಳಿಕ, ಮಾಡೆಲ್‌ ಚಾರ್ಕೋಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೂಪದರ್ಶಿಯ ದೂರಿನ ಮೇರೆಗೆ ಚಾರ್ಕೋಪ್ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!