
ಮುಂಬೈ (ಸೆ.12): ಮಗಳ ಬಾಯ್‌ಫ್ರೆಂಡ್ ಜೊತೆಗೆ ಆಕೆಯ ತಾಯಿ ಲವ್ವಿಡವ್ವಿಯಲ್ಲಿದ್ದ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಈ ಅಕ್ರಮ ಸಂಬಂಧಕ್ಕೆ ತಾಯಿ ತನ್ನ ಮನೆಯಲ್ಲಿದ್ದ ಚಿನ್ನಾಭರಣವನ್ನೇ ಕದಿದಿದ್ದು, ಪೊಲೀಸರ ತನಿಖೆ ವೇಳೆ ಈ ಸತ್ಯ ಬಯಲಾಗಿದೆ. ಮುಂಬೈನ ಗೋರೆಗಾಂವ್‌ನಲ್ಲಿ ರಮೇಶ್ ಧೋಂಡು ಹಲ್ದಿವೆ ಎಂಬುವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ರಮೇಶ್ ಹಾಗೂ ಊರ್ಮಿಳಾ ದಂಪತಿಗೆ ಮದುವೆಯಾಗಿ 18 ವರ್ಷವಾಗಿದೆ. ಒಂದು ದಿನ, ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿವೆ ಎಂದು ಊರ್ಮಿಳಾ ಪತಿಗೆ ತಿಳಿಸಿದರು. ಗಂಡನ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ ಊರ್ಮಿಳಾ, ದಿಂಡೋಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಯಾವುದೇ ಬಾಹ್ಯ ವ್ಯಕ್ತಿಗಳು ಮನೆಯೊಳಗೆ ಬಂದಿರುವ ಸಾಕ್ಷಿಗಳು ಇಲ್ಲದ ಕಾರಣ, ಪೊಲೀಸರು ಕುಟುಂಬದ ಸದಸ್ಯರ ಫೋನ್ ಕರೆಗಳ ವಿವರಗಳನ್ನು ಪರಿಶೀಲಿಸಿದರು. ಈ ತನಿಖೆಯಲ್ಲಿ ಊರ್ಮಿಳಾ ಮತ್ತೊಬ್ಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆತನೊಂದಿಗೆ ಮನೆ ಬಿಟ್ಟು ಹೋಗಲು ಯೋಜನೆ ರೂಪಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸುಮಾರು 100 ಗ್ರಾಂಗೂ ಹೆಚ್ಚು ಚಿನ್ನಾಭರಣಗಳನ್ನು ಕದ್ದಿದ್ದ ಊರ್ಮಿಳಾ, ಅವುಗಳನ್ನು ಮಾರಿ ಬಂದ ಸುಮಾರು 10 ಲಕ್ಷ ರೂಪಾಯಿಗಳನ್ನು ತನ್ನ ಪ್ರಿಯಕರನ ಖಾತೆಗೆ ವರ್ಗಾಯಿಸಿದ್ದರು.
ಆದರೆ, ಕಳ್ಳತನಕ್ಕಿಂತಲೂ ಆಘಾತಕಾರಿಯಾದ ವಿಷಯವೆಂದರೆ, ಊರ್ಮಿಳಾ ಪ್ರೀತಿಸುತ್ತಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ, ಆಕೆಯ 18 ವರ್ಷದ ಮಗಳ ಗೆಳೆಯನೇ ಆಗಿದ್ದ ಎನ್ನುವುದು. ಕಳ್ಳತನದ ಕೇಸ್‌ನಲ್ಲಿ ಗಂಡ ಜೈಲು ಸೇರಿದರೆ, ಮಗಳ ಬಾಯ್‌ಫ್ರೆಂಡ್ ಜೊತೆ ತಾನು ಬೇರೆ ಸಂಸಾರ ಮಾಡಬಹುದು ಎನ್ನುವ ಲೆಕ್ಕಾಚಾರ ಆಕೆಯಲ್ಲಿತ್ತು.
ದಂಪತಿ ಪೊಲೀಸ್ ವಶಕ್ಕೆ
ಸತ್ಯ ಬಯಲಾದ ನಂತರ ಪೊಲೀಸರು ಊರ್ಮಿಳಾಳ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ಊರ್ಮಿಳಾ ತನಗೆ ಕೆಲವು ಕದ್ದ ಆಭರಣಗಳನ್ನು ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ನಂತರ ಊರ್ಮಿಳಾಳನ್ನು ವಿಚಾರಣೆಗೊಳಪಡಿಸಿದಾಗ, ಕಳ್ಳತನ ಹಾಗೂ ಪತಿಯನ್ನು ಬಿಟ್ಟುಹೋಗುವ ತಮ್ಮ ಯೋಜನೆಯನ್ನು ಆಕೆ ಒಪ್ಪಿಕೊಂಡಿದ್ದಾರೆ. ಪೊಲೀಸರು ಕದ್ದ ಆಭರಣಗಳನ್ನು ಆಕೆಯ ಪರಿಚಯದ ಆಭರಣದ ಅಂಗಡಿಯಿಂದ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಊರ್ಮಿಳಾ ಹಾಗೂ ಆಕೆಯ ಮಗಳ ಬಾಯ್‌ಫ್ರೆಂಡ್‌ನನ್ನು ಬಂಧಿಸಲಾಗಿದೆ. ಊರ್ಮಿಳಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆಕೆಯ ಪ್ರಿಯಕರನ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ