ಹರ್ಷದ್‌ ಮೆಹ್ತಾನಂತೆ ವಂಚನೆ: 3 ತಿಂಗಳಲ್ಲಿ 4,672 ಕೋಟಿ ರೂ. ಅಕ್ರಮ ಷೇರು ವಹಿವಾಟು ಮಾಡಿದ ಸ್ಟಾಕ್‌ ಬ್ರೋಕರ್!

By BK Ashwin  |  First Published Jun 22, 2023, 5:40 PM IST

ಮುಂಬೈ ಪೊಲೀಸರು ಸುಮಾರು ಮೂರು ತಿಂಗಳಲ್ಲಿ 4,672 ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳೊಂದಿಗೆ ಅಕ್ರಮ ‘ಡಬ್ಬಾ ವ್ಯಾಪಾರ'ದಲ್ಲಿ ತೊಡಗಿಸಿಕೊಂಡಿದ್ದ 45 ವರ್ಷದ ಷೇರು ದಲ್ಲಾಳಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.


ಮುಂಬೈ (ಜೂನ್ 22, 2023): ಷೇರು ಮಾರುಕಟ್ಟೆ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಇರುವವರಿಗೆ ಹರ್ಷದ್‌ ಮೆಹ್ತಾ ಬಗ್ಗೆ ಗೊತ್ತಿರುತ್ತದೆ. ಈತ ಸ್ಟಾಕ್‌ಮಾರ್ಕೆಟ್‌ನಲ್ಲಿ ದುಡಿದು, ಹೂಡಿಕೆ ಮಾಡಿ ಹಾಗೂ ವಂಚನೆ ಮಾಡಿ ಕೋಟ್ಯಂತರ ರೂ. ಹಣ ಗಳಿಸಿ ಜೈಲು ಕಂಬಿ ಎಣಿಸುತ್ತಾರೆ. ಇವರ ಕತೆ ಆಧಾರಿತ ವೆಬ್‌ ಸೀರಿಸ್‌ ಸಹ ಬಂದಿದೆ. ಈಗ ಅಂತದ್ದೇ ಪ್ರಕಣವೊಂದು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. 

ಮುಂಬೈ ಪೊಲೀಸರು ಸುಮಾರು ಮೂರು ತಿಂಗಳಲ್ಲಿ 4,672 ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳೊಂದಿಗೆ ಅಕ್ರಮ ‘ಡಬ್ಬಾ ವ್ಯಾಪಾರ'ದಲ್ಲಿ ತೊಡಗಿಸಿಕೊಂಡಿದ್ದ 45 ವರ್ಷದ ಷೇರು ದಲ್ಲಾಳಿಯನ್ನು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 'ಡಬ್ಬಾ ಟ್ರೇಡಿಂಗ್' ಎಂಬುದು ಷೇರುಗಳಲ್ಲಿನ ವ್ಯಾಪಾರದ ಕಾನೂನುಬಾಹಿರ ರೂಪವಾಗಿದೆ.  ಅಲ್ಲಿ ಅಂತಹ ಟ್ರೇಡಿಂಗ್‌ ರಿಂಗ್‌ಗಳ ರ್ವಾಹಕರು ಸ್ಟಾಕ್ ಎಕ್ಸ್ಚೇಂಜ್ ಪ್ಲಾಟ್‌ಫಾರ್ಮ್‌ನ ಹೊರಗೆ ಈಕ್ವಿಟಿಗಳಲ್ಲಿ ಟ್ರೇಡ್‌ ಮಾಡಲು ಜನರಿಗೆ ಅವಕಾಶ ನೀಡುತ್ತಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!

ಬಂಧಿತ ಆರೋಪಿಯನ್ನು ಜತಿನ್ ಸುರೇಶ್‌ ಭಾಯ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಮುಂಬೈ ಉಪನಗರ ಕಾಂದಿವಲಿಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನು, ಈ ಆರೋಪಿ ಭದ್ರತಾ ವಹಿವಾಟು ತೆರಿಗೆ, ಬಂಡವಾಳ ಲಾಭ ತೆರಿಗೆ, ರಾಜ್ಯ ಸರ್ಕಾರದ ಮುದ್ರಾಂಕ ಶುಲ್ಕ, ಸೆಬಿ ವಹಿವಾಟು ಶುಲ್ಕ ಮತ್ತು  ಸ್ಟಾಕ್ ಎಕ್ಸ್ಚೇಂಜ್ ವಹಿವಾಟು ಆದಾಯ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸದೆ ಸರ್ಕಾರಕ್ಕೆ 1.95 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದರು.

ಷೇರು ದಲ್ಲಾಳಿಯು ಮಾನ್ಯವಾದ ಪರವಾನಗಿ ಇಲ್ಲದೆ ಷೇರು ವಿನಿಮಯದ ಹೊರಗೆ ಷೇರುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು "ಮಾರ್ಚ್ 23 ರಿಂದ ಜೂನ್ 20, 2023 ರ ನಡುವೆ ಅವರ ವಹಿವಾಟು 4,672 ಕೋಟಿ ರೂ." ಎಂದೂ ಅಧಿಕಾರಿ ಹೇಳಿದ್ದಾರೆ. ಸ್ಟಾಕ್ ಎಕ್ಸ್‌ಚೇಂಜ್‌ನಿಂದ ಯಾವುದೇ ಮಾನ್ಯ ಪರವಾನಗಿ ಇಲ್ಲದೆ, 'ಮೂಡಿ' ಎಂಬ ಅಪ್ಲಿಕೇಶನ್‌ ಸಹಾಯದಿಂದ 'ಡಬ್ಬಾ ಟ್ರೇಡಿಂಗ್' ಮಾಡುತ್ತಿದ್ದ ಷೇರು ಬ್ರೋಕರ್ ಬಗ್ಗೆ ಮುಂಬೈ ಅಪರಾಧ ವಿಭಾಗವು ನಿರ್ದಿಷ್ಟ ಮಾಹಿತಿಯನ್ನು ಹೊಂದಿತ್ತು. ಅದರಂತೆ, ಅಪರಾಧ ವಿಭಾಗದ ತಂಡವು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮತ್ತು ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಕಾಂದಿವಲಿ ಪ್ರದೇಶದ ಮಹಾವೀರ್ ನಗರದಲ್ಲಿರುವ ಷೇರು ದಲ್ಲಾಳಿಗಳ ಕಚೇರಿ ಮೇಲೆ ದಾಳಿ ನಡೆಸಲಾಯ್ತು. ಈ ವೇಳೆ ಆರೋಪಿ ಬಳಿ 50,000 ರೂ. ನಗದು, ಐದು ಮೊಬೈಲ್ ಫೋನ್‌, ಲ್ಯಾಪ್‌ಟಾಪ್, ಟ್ಯಾಬ್, ಪೇಪರ್ ಶ್ರೆಡರ್ ಮತ್ತು ಪೆನ್ ಡ್ರೈವ್ ಜೊತೆಗೆ ಕೆಲವು ಪ್ರಮುಖ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದೂ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಹಾಗೂ, 1.95 ಕೋಟಿ ರೂ.ಗೂ ಹೆಚ್ಚು ತೆರಿಗೆ ಮತ್ತು ಶುಲ್ಕ ಪಾವತಿಸದೆ ಅಕ್ರಮವಾಗಿ ಷೇರು ವಹಿವಾಟು ನಡೆಸುವ ಮೂಲಕ ದಲ್ಲಾಳಿ ಸರ್ಕಾರಕ್ಕೆ ವಂಚಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

ದೂರಿನ ಆಧಾರದ ಮೇಲೆ, ಭಾರತೀಯ ದಂಡಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ), 120 (ಬಿ) (ಅಪರಾಧದ ಪಿತೂರಿ) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗುವುದು) ಮತ್ತು ನಿಬಂಧನೆಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ. ಸೆಕ್ಯುರಿಟೀಸ್ ಕಾಂಟ್ರಾಕ್ಟ್ (ನಿಯಂತ್ರಣ) ಕಾಯ್ದೆ ಹಾಗೂ ಆರೋಪಿಯನ್ನು ಬಂಧಿಸಲಾಗಿದೆ, ಪ್ರಕರಣದ ತನಿಖೆ ಮುಂದುವರಿದಿದೆ ಎಂದೂ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪತಿ, ಮಕ್ಕಳನ್ನು ಬಿಟ್ಟು ಲಿವ್‌ ಇನ್‌ ಸಂಗಾತಿ ಜತೆ ವಾಸಿಸಲು ವಿವಾಹಿತ ಮಹಿಳೆಗೆ ಅನುಮತಿ ನೀಡಿದ ಹೈಕೋರ್ಟ್‌

click me!