Mumbai: ನಿಮ್ಮ ಮನೆಯಲ್ಲಿ ದೆವ್ವ ಇದೆ ಎಂದು ಹೇಳಿ 15 ಲಕ್ಷ ಲೂಟಿ ಮಾಡಿದ ಮನೆಗೆಲಸದಾಕೆ, ಮಹಿಳಾ ಮಾಂತ್ರಿಕ

By BK Ashwin  |  First Published Sep 18, 2022, 12:47 PM IST

ಮುಂಬೈನಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಮನೆ ಗೆಲಸದಾಕೆ ಹಾಗೂ ಮಹಿಳಾ ಮಾಂತ್ರಿಕರೊಬ್ಬರು 15 ಲಕ್ಷ ರೂ. ಗೂ ಹೆಚ್ಚು ಹಣ ವಂಚಿಸಿದ ಘಟನೆ ನಡೆದಿದೆ. ಮನೆ ಗೆಲಸದಾಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಮತ್ತೊಬ್ಬರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. 


ಮನೆಯಲ್ಲಿ ಒಬ್ಬರೇ ಇದ್ದ ಹಿರಿಯ ನಾಗರಿಕರನ್ನು (Senior Citizen) ಮನೆ ಗೆಲಸದಾಕೆ 15 ಲಕ್ಷ ರೂ. ಗೂ ಹೆಚ್ಚು ಹಣ ವಂಚಿಸಿದ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ. ದುಷ್ಟಶಕ್ತಿಯನ್ನು (Bad Spirit) ತೊಲಗಿಸುವ ನೆಪದಲ್ಲಿ ಮನೆ ಮಾಲೀಕರಿಗೆ 15.87 ಲಕ್ಷ ರೂಪಾಯಿ ವಂಚಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾನ್ಪಾಡ (Manpada) ಪೊಲೀಸರು ಗುರುವಾರ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಇನ್ನು, ಆರೋಪಿಯ ಸಹಚರೆ, ಮಹಿಳಾ ಮಾಂತ್ರಿಕಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುಂಬೈನ ಡೊಂಬಿವ್ಲಿ ಪೂರ್ವದಲ್ಲಿ 79 ವರ್ಷದ ವಸಂತ್ ಗಂಗಾರಾಮ್ ಸಮರ್ಥ್ ಅವರು ಹೈ ಪ್ರೊಫೈಲ್‌ ಜೀವನ ನಡೆಸುತ್ತಿದ್ದಾರೆ. ಅವರ ಪತ್ನಿ ಒಂದೆರಡು ವರ್ಷದ ಹಿಂದೆ ನಿಧನರಾಗಿದ್ದರು ಎಂದು ತಿಳಿದುಬಂದಿದ್ದು, ಅವರ ಮಗ ಕೆನಡಾದಲ್ಲಿ ಇದ್ದಾನೆ. ಈ ಹಿನ್ನೆಲೆ ಮನೆಯಲ್ಲಿ ಒಬ್ಬರೇ ಇದ್ದ ವಸಂತ್ ಗಂಗಾರಾಮ್ ಸಮರ್ಥ್ ಅವರು ಮನೆಯ ಕೆಲಸ (Household Work) ಮಾಡಲು ಪ್ರಿಯಾ ಅಲಿಯಾಸ್ ತ್ರಿಶಾಲಾಳನ್ನು ನೇಮಿಸಿಕೊಂಡಿದ್ದರು.

ಜುಲೈ 2022 ರಲ್ಲಿ, ಮನೆಗೆಲಸದಾಕೆ ಪ್ರಿಯಾ ಮನೆಯ ಮಾಲೀಕರಿಗೆ ನಿಮ್ಮ ಮನೆಯಲ್ಲಿ ಕೆಟ್ಟ ಆತ್ಮವಿದೆ ಅಥವಾ ದೆವ್ವವಿದೆ. ಇದರಿಂದ ನೀವು ಶೀಘ್ರದಲ್ಲೇ ಸಾಯುತ್ತೀರಿ ಎಂದು ಹೇಳಿದ್ದಾಳೆ. ಇದರಿಂದ ಭಯಗೊಂಡ ವಸಂತ್ ಗಂಗಾರಾಮ್ ಸಮರ್ಥ್ ಅವರು ಆತ್ಮ (Spirit) ತೊಡೆದುಹಾಕಲು ಏನು ಮಾಡಬೇಕು ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಿಯಾ, ತನಗೆ ಸಹಾಯ ಮಾಡಬಲ್ಲ ಮಹಿಳಾ ಮಾಂತ್ರಿಕಳೊಬ್ಬಳ (Tantri) ಪರಿಚಯವಿದೆ ಎಂದು ಹೇಳಿರುವ ಬಗ್ಗೆ ಮುಂಬೈನ ಮಾನ್ಪಾಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಗೆ, ಪ್ರಿಯಾ ತನ್ನ ಸ್ನೇಹಿತೆ ಮರಿಯಮ್ ಅಲಿಯಾಸ್ ಸೆಹ್ನಾ ಶೇಖ್ ಅವರನ್ನು ಕರೆದಿದ್ದು, ಆಕೆ ವಸಂತ್ ಗಂಗಾರಾಮ್ ಸಮರ್ಥ್ ಮನೆಯಲ್ಲಿ ಕೆಲವು ಆಚರಣೆಗಳನ್ನು ಮಾಡಿದರು. ಪ್ರಿಯಾ ಆಗಾಗ್ಗೆ ಸಮರ್ಥನಿಗೆ ಆತ್ಮದ ಬಗ್ಗೆ ಹೇಳುತ್ತಿದ್ದಳು ಮತ್ತು ಜುಲೈ ಹಾಗೂ ಸೆಪ್ಟೆಂಬರ್ 13 ರ ನಡುವೆ ಹಲವಾರು ಸಂದರ್ಭಗಳಲ್ಲಿ ಮರಿಯಮ್ ಅವರನ್ನು ಆಹ್ವಾನಿಸಲು ಹಿರಿಯ ನಾಗರಿಕರಿಂದ ಹಣವನ್ನು ತೆಗೆದುಕೊಂಡಳು. ಆದರೆ, ಆಕೆಯ ಬೇಡಿಕೆಗಳು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ವಸಂತ್ ಗಂಗಾರಾಮ್ ಸಮರ್ಥ್ ಅರಿತುಕೊಂಡರು ಎಂದೂ ಹೇಳಲಾಗಿದೆ. 

Tap to resize

Latest Videos

ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು

ನಂತರ, ಅವರು ಮಾನ್ಪಾಡ ಪೊಲೀಸರನ್ನು ಸಂಪರ್ಕಿಸಿ ನಡೆದ ಘಟನೆಗಳ ಬಗ್ಗೆ ತಿಳಿಸಿದರು. ಬಳಿಕ ಹಿರಿಯ ಇನ್ಸ್‌ಪೆಕ್ಟರ್ ಶೇಖರ್ ಬಾಗಡೆ ಅವರು IPC ಯ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 34 (ಸಾಮಾನ್ಯ ಉದ್ದೇಶ) ಹಾಗೂ ಮಹಾರಾಷ್ಟ್ರದ ಮಾನವ ತ್ಯಾಗ ಮತ್ತು ಇತರ ಅಮಾನವೀಯ, ದುಷ್ಟತನದ ತಡೆಗಟ್ಟುವಿಕೆ ಮತ್ತು ನಿರ್ಮೂಲನ ಹಾಗೂ ಅಘೋರಿ ಅಭ್ಯಾಸಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಆಕ್ಟ್, 2013 ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದರು. ನಂತರ ಪೊಲೀಸರು ಪ್ರಿಯಾ ಅಲಿಯಾಸ್ ತ್ರಿಶಾಲಾ ಕುನಾಲ್ ಕೆಲುಸ್ಕರ್ (26) ಎಂಬಾಕೆಯನ್ನು ಡೊಂಬಿವಿಲಿಯ ಖೋನಿ ಗ್ರಾಮದ ನಿವಾಸದಿಂದ ಬಂಧಿಸಿದ್ದಾರೆ. ಅಲ್ಲದೆ, ಮನೆಗೆಲಸದಾಕೆ ಮನೆಯಿಂದ 15.58 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

“ಇಬ್ಬರೂ ಮಹಿಳೆಯರು ಹಿರಿಯ ನಾಗರಿಕನನ್ನು ಕೆಟ್ಟ ಮನೋಭಾವದಿಂದ ಹೆದರಿಸಿ ವಂಚಿಸುತ್ತಿದ್ದರು ಮತ್ತು ಆತ್ಮ ಅವರನ್ನು ಕೊಲ್ಲುತ್ತದೆ ಮತ್ತು ಅದನ್ನು ತೊಡೆದುಹಾಕಲು ಅವರಿಂದ ಅನೇಕ ಆಭರಣಗಳು ಮತ್ತು ಬಹಳಷ್ಟು ಹಣವನ್ನು ತೆಗೆದುಕೊಂಡಿದ್ದರು. ಬಳಿಕ ಅವರು ಅನುಮಾನಗೊಂಡು ನಮಗೆ ಮಾಹಿತಿ ನೀಡಿದರು. ಉಳಿದ ಆರೋಪಿಗಾಗಿ ಶೋಧ ನಡೆಸುತ್ತಿದ್ದೇವೆ. ಮಾಂತ್ರಿಕಳನ್ನು ಬಂಧಿಸಿದ ಬಳಿಕ ಆಕೆ ಬೇರೆಯವರಿಗೆ ಈ ರೀತಿ ವಂಚಿಸಿದ್ದಾರೆಯೇ ಎಂದು ಪತ್ತೆ ಹಚ್ಚುತ್ತೇವೆ ಎಂದು ಎಸ್‌ಐ ಬಗಡೆ ಹೇಳಿದರು.

ತನ್ನ ನೋಡಿ ನಾಯಿ ಬೊಗಳಿತೆಂದು ಗುಂಡು ಹಾರಿಸಿ ಕೊಂದೇ ಬಿಟ್ಟ ಪಾಪಿ ಕೃಷ್ಣಪ್ಪ!

click me!