ಬಾಂಬೆ ಬೆಡಗಿ ಕರಾಮತ್ತಿಗೆ ಕಲಬುರಗಿ ಉದ್ಯಮಿ ಹನಿಟ್ರ್ಯಾಪ್‌..!

By Kannadaprabha News  |  First Published Sep 11, 2024, 7:32 AM IST

ಮುಂಬೈ ಹೋಟೆಲ್‌ ಕೆಲಸದಲ್ಲಿದ್ದ ಯುವತಿಯನ್ನು ಪರಿಚಯಿಸಿಕೊಂಡು ಕಲಬುರಗಿಗೆ ಕರೆತಂದ ಗ್ಯಾಂಗ್ ಆಕೆಯನ್ನೇ ಬಳಸಿ ಜೇನುಬಲೆ ಹೆಣೆದು ಅದರಲ್ಲಿ ಹಣಮಂತ ಉದ್ದಿಮೆದಾರರನ್ನು ಸಿಲುಕಿಸುವ ಖತರ್‌ನಾಕ್‌ ಪ್ಲ್ಯಾನ್‌ ಮಾಡಿದೆ. ನೆರವು ನೀಡೋದಾಗಿ, ನೌಕರಿ ಕೊಡಿಸೋದಾಗಿ ಪುಸಲಾಯಿಸಿ ಯುವತಿಯನ್ನು ಕಲಬುರಗಿಗೆ ಕರೆತಂದವರು ಮೊದಲು ತಮ್ಮ ಕಾಮತೃಷೆಗಾಗಿ ಆಕೆಯನ್ನು ಬಳಸಿಕೊಂಡು ನಂತರ ಹಣವಂತ ಉದ್ಯಮಿಯೊಬ್ಬರನ್ನು ಜೇನುಬಲೆಗೆ ಕೆಡವಲು ಯೋಜನೆ ರೂಪಿಸಿದ್ದಾರೆ.


ಕಲಬುರಗಿ(ಸೆ.11):  ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಆರೋಪಿಗಳು ಮುಂಬೈ ಮೂಲದ ಯುವತಿಯನ್ನ ಬಳಸಿ ಉದ್ಯಮಿಯೊಬ್ಬರನ್ನು ಬಲು ನಾಜೂಕಾಗಿ ಜೇನುಬಲೆಗೆ ಕೆಡವಿದ್ದಾರೆ. ಪ್ರಕರಣದಲ್ಲಿ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿಗಳು ವಿಚಾರಣೆಯಲ್ಲಿ ತಾವು ಹೇಗೆ ಕಾರ್ಯಾಚರಣೆ ನಡೆಸಿದ್ದೇವೆಂಬುದನ್ನು ಬಾಯಿ ಬಿಟ್ಟಿದ್ದಾರೆ.

ದೂರು ನೀಡಿರುವ ಸಂತ್ರಸ್ತ ಮುಂಬೈ ಯುವತಿಯೂ ಪೊಲೀಸರ ಮುಂದೆ ಅದ್ಹೇಗೆ ಉದ್ಯಮಿಯನ್ನು ಜೇನುಬಲೆಗೆ ಕೆಡವಲಾಯ್ತು ಎಂದು ಬಾಯಿ ಬಿಟ್ಟಿರುವ ಹಲವು ಸಂಗತಿಗಳನ್ನು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪೊಲೀಸ್‌ ಅಧಿಕಾರಿ ಕನ್ನಡಪ್ರಭ ಜೊತೆ ಹಂಚಿಕೊಂಡಿದ್ದಾರೆ.

Latest Videos

undefined

ನಿಮಗೆ ಹನಿಟ್ರ್ಯಾಪ್ ಆಗಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ: ಸಚಿವ ಪ್ರಿಯಾಂಕ ಖರ್ಗೆ!

ಖತರ್ನಾಕ್‌ ಪ್ಲ್ಯಾನ್‌:

ಮುಂಬೈ ಹೋಟೆಲ್‌ ಕೆಲಸದಲ್ಲಿದ್ದ ಯುವತಿಯನ್ನು ಪರಿಚಯಿಸಿಕೊಂಡು ಕಲಬುರಗಿಗೆ ಕರೆತಂದ ಗ್ಯಾಂಗ್ ಆಕೆಯನ್ನೇ ಬಳಸಿ ಜೇನುಬಲೆ ಹೆಣೆದು ಅದರಲ್ಲಿ ಹಣಮಂತ ಉದ್ದಿಮೆದಾರರನ್ನು ಸಿಲುಕಿಸುವ ಖತರ್‌ನಾಕ್‌ ಪ್ಲ್ಯಾನ್‌ ಮಾಡಿದೆ. ನೆರವು ನೀಡೋದಾಗಿ, ನೌಕರಿ ಕೊಡಿಸೋದಾಗಿ ಪುಸಲಾಯಿಸಿ ಯುವತಿಯನ್ನು ಕಲಬುರಗಿಗೆ ಕರೆತಂದವರು ಮೊದಲು ತಮ್ಮ ಕಾಮತೃಷೆಗಾಗಿ ಆಕೆಯನ್ನು ಬಳಸಿಕೊಂಡು ನಂತರ ಹಣವಂತ ಉದ್ಯಮಿಯೊಬ್ಬರನ್ನು ಜೇನುಬಲೆಗೆ ಕೆಡವಲು ಯೋಜನೆ ರೂಪಿಸಿದ್ದಾರೆ.

6 ತಿಂಗಳು ಯಾವಾಗ ಎಲ್ಲಿ ಉದ್ಯಮಿ ಓಡಾಡುತ್ತಿರುತ್ತಾರೆಂಬ ಮಾಹಿತಿ ಕಲೆ ಹಾಕಿದ್ದ ತಂಡ ಅದನ್ನೆಲ್ಲ ಯುವತಿಗೆ ಬಿಡಿಸಿ ಹೇಳಿದೆ. ಉದ್ಯಮಿ ಮೊಬೈಲ್ ನಂಬರ್‌ ಯುವತಿಗೆ ನೀಡಿ ಅವರೊಂದಿಗೆ ಸಂಪರ್ಕವಾಗುವಂತೆ ಜಾಲ ರೂಪಿಸಿದ್ದಾರೆ. ಮೊಬೈಲ್‌ ಚಾಟಿಂಗ್‌, ಮೆಸೆಜ್‌ ಶುರುಮಾಡಿ ಯುವತಿ ಉದ್ಯಮಿಗೆ ಗಾಳ ಹಾಕಿದ್ದಾಳೆ. ಉದ್ಯಮಿ ಹೈದ್ರಾಬಾದ್‌ಗೆ ಹೋಗುವ ದಿನವೇ ಯುವತಿಯನ್ನೂ ಅಲ್ಲಿಗೆ ಕಳುಹಿಸಿ ಕರೆ ಮಾಡಿಸಿದ್ದಾರೆ. ಯುವತಿ ತಾನೂ ಕೂಡಾ ಹೈದ್ರಾಬಾದ್‌ನಲ್ಲೇ ಇರೋದಾಗಿ ಹೇಳುತ್ತ ಉದ್ಯಮಿಯನ್ನು ಹೋಟಲ್‌ನಲ್ಲಿ ಭೇಟಿ ಮಾಡಿದ್ದಾಳೆ.

ಬೆಂಗಳೂರು ಮಾಲ್‌ನಲ್ಲಿ ಡೀಲ್‌

ನಂತರ ಉದ್ಯಮಿ ಬೆಂಗಳೂರಿಗೆ ಹೋಗುವಾಗಲೂ ಈ ತಂಡ ಆತನ ಬೆನ್ನು ಬಿದ್ದು ಯುವತಿಯನ್ನೂ ಬೆಂಗಳೂರಿಗೆ ಕರೆತಂದು ಅವರಿಬ್ಬರು ಒರಾಯಿನ್‌ ಮಾಲ್‌ನಲ್ಲಿ ಭೇಟಿ ಆಗುವ ಹಾಗೆ ಮಾಡಿದೆ. ಯುವತಿಯೇ ಉದ್ಯಮಿಗೆ ಕರೆ ಮಾಡಿ ತಾನೂ ಬೆಂಗಳೂರಲ್ಲಿರೋದಾಗಿ ಹೇಳಿ ಒರಾಯಿನ್ ಮಾಲ್‌ಗೆ ಉದ್ಯಮಿಗೆ ಬರಲು ಹೇಳಿದ್ದಾಳೆ. ಈ ಮಾಲ್‌ನಲ್ಲಿ ಉದ್ಯಮಿ ಜೊತೆ ಯುವತಿ ಕುಳಿತಿದ್ದಾಗಲೇ ಅಲ್ಲಿ ಪ್ರತ್ಯಕ್ಷವಾಗೋ ಹನಿಟ್ರ್ಯಾಪ್‌ ತಂಡ, ಇಷ್ಟು ದಿನ ಅದೆಲ್ಲಿ ಹೋಗಿದ್ದೆ? ಎಂದು ಯುವತಿಗೆ ಮರಾಠಿ ಭಾಷೆಯಲ್ಲಿ ಆವಾಜ್‌ ಹಾಕಿದ್ದಾರೆ. ಆಗ ಈ ಯುವತಿ ತಾನು ಉದ್ಯಮಿ ಜೊತೆಗಿರೋದಾಗಿ ಹಳಿ ಅವರನ್ನೇ ಮದುವೆಯಾಗೋದಗಿ ಉಸುರಿದಾಗ ಉದ್ಯಮಿ ಬೆಚ್ಚಿಬಿದ್ದಿದ್ದಾರೆ.

ಅಲ್ಲಿಂದ ಉದ್ಯಮಿ, ಯುವತಿ ಇಬ್ಬರನ್ನೂ ಕಲಬುರಗಿಗೆ ಕರೆತಂದ ಗ್ಯಾಂಗ್‌ ಇಲ್ಲಿ ರಾಜು ಲೇಂಗಟಿ (ಈಗಾಗಲೇ ಪೊಲೀಸ್‌ ವಶದಲ್ಲಿದ್ದಾರೆ) ಕರೆಯಿಸುತ್ತಾರೆ. ಇದು ಮಹಾರಾಷ್ಟ್ರದ ಟೈಗರ್‌ ಗ್ಯಾಂಗ್‌, ಈಕೆ ಈ ಗ್ಯಾಂಗಿನ ಯುವತಿ. ಇವರು ನಿನಗೆ ಕೊಲೆ ಕೂಡಾ ಮಾಡಬಹುದು ಎಂದು ಹೇಳುತ್ತ ಕರ್ನಾಟಕದಲ್ಲಿ ಏನೇ ಕೆಲಸಗಳಿದ್ದರೂ ತನಗೇ ಹೇಳುತ್ತಾರೆಂದು ಉದ್ಯಮಿ ಜೊತೆಗೇ ಡೀಲ್‌ ಕುದುರಿಸಿದ್ದಾನೆ.

ಮೊದಲೇ ಪರೇಶಾನಿಯಲ್ಲಿದ್ದ ಉದ್ಯಮಿ ಜೀವ ಬೆದರಿಕೆಗೆ ಅಂಜಿ ಹಣ ಕಕ್ಕಿದ್ದಾನೆ. ಯುವತಿ ಜೊತೆಗಿನ ಫೋಟೋ- ವಿಡಿಯೋ ಇಟ್ಟುಕೊಂಡು ತಂಡ ಡೀಲ್‌ ಮಾಡಿರುವ ಬಗ್ಗೆ ವಿಚಾರಣೆಯಲ್ಲಿ ಅನೇಕ ಸಂಗತಿಗಳನ್ನು ಆರೋಪಿಗಳಾದ ರಾಜು, ಪ್ರಭು ಬಾಯಿಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಹನಿಟ್ರ್ಯಾಪ್‌, ಬಲಾತ್ಕಾರದ ಪ್ರಕರಣದಿಂದ ಕಲಬುರಗಿಗೆ ಕುಖ್ಯಾತಿ: ಆಂದೋಲಾ ಶ್ರೀ

ಮುಂಬೈ ಯುವತಿ ದೂರು

ಸದ್ಯ ಕಲಬುರಗಿ ಪೊಲೀಸರು ಮುಂಬೈ ಮೂಲದ ಯುವತಿ ನೀಡಿರುವ ಜೇನುಬಲೆ, ರೇಪ್‌ ದೂರಿನ ಮೇರೆಗೆ ಕಲಬುರಗಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ತನಗೆ ಕೇವಲ 70 ಸಾವಿರ ಖರ್ಚಿಗೆ ಕೊಟ್ಟು ಲಕ್ಷಾಂತರ ರುಪಾಯಿ ಹಣ ಗ್ಯಾಂಗಿನ ಸದಸ್ಯರು ಸುಲಿಗೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಯುವತಿ ತಾನು ಈ ಗ್ಯಾಂಗಿನ ಕೈಯಲ್ಲಿ ಸಿಲುಕಿ ಗೋಳಾಡುತ್ತಿರೋದನ್ನೆಲ್ಲ ದೂರಿನಲ್ಲಿ ವಿವರಿಸಿದ್ದಾಳೆ. ತನ್ನ ಫೋಟೋ, ವಿಡಿಯೋ ಇಟ್ಟುಕೊಂಡು ತನ್ನಿಂದಲೂ 10 ಲಕ್ಷ ರು. ಈ ಗ್ಯಾಂಗ್‌ ಬಯಸುತ್ತಿದೆ ಎಂದು ದೂರಿದ್ದಾಳೆ, ಕಲಂ 164 ಅಡಿಯಲ್ಲಿಯೂ ಯುವತಿ ಹೇಳಿಕೆ ನೀಡಿ ಅಲ್ಲಿಯೂ ತಾನು ಅನುಭವಿಸುತ್ತಿರುವ ನೋವು- ಯಾತನೆ ದಾಖಲಿಸಿದ್ದಾಳೆಂದು ತಿಳಿದು ಬಂದಿದೆ.

ಹನಿಟ್ರ್ಯಾಪ್‌ ಪ್ರಕರಣದ ತನಿಖೆ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಮೇಲೆ ನಡೆಸಲಾಗುತ್ತದೆ. ಅಪರಾಧಿ ತಪ್ಪಿಸಿಕೊಳ್ಳದಂತೆ, ನಿರಪರಾಧಿ ಸಿಕ್ಕಿಹಾಕಿಕೊಳ್ಳದಂತೆ ತನಿಖೆ ನಡೆಸುತ್ತೇವೆ. ಸಂತ್ರಸ್ತ ಉದ್ಯಮಿ ಇನ್ನೂ ಪೊಲೀಸರನ್ನ ಸಂಪರ್ಕಿಸಿಲ್ಲ. ಆದಾಗ್ಯೂ ಸಂತ್ರಸ್ತರು ಯಾರಾದರೂ ಇದ್ದರೆ ನೇರವಾಗಿ ನನಮ್ಮನ್ನು ಸಂಪರ್ಕಿಸಲಿ. ನಾವು ಅವರ ಗುರುತು ಗೌಪ್ಯವಾಗಿಟ್ಟು ತನಿಖೆ ಮಾಡುತ್ತೇವೆ ಎಂದು ಕಲಬುರಗಿ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಎಸ್‌ ಢಗೆ ತಿಳಿಸಿದ್ದಾರೆ.  

click me!