4 ಕೆಜಿ ಚಿನ್ನ ಮಾರಾಟಕ್ಕೆ ಯತ್ನ, ಗದಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಬೈ ಮೂಲದ ವ್ಯಾಪಾರಿಗಳು!

Published : Mar 17, 2023, 08:59 PM IST
4 ಕೆಜಿ ಚಿನ್ನ ಮಾರಾಟಕ್ಕೆ ಯತ್ನ, ಗದಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಬೈ ಮೂಲದ ವ್ಯಾಪಾರಿಗಳು!

ಸಾರಾಂಶ

ಗದಗ ನಗರದ ಟಾಂಗಾ ಕೂಟ್ ಬಳಿ ಮಾರಾಟ ಮಾಡಲು ತಂದಿದ್ದ 4 ಕೆಜಿ 46 ಗ್ರಾಂ ಚಿನ್ನವನ್ನ ಗದಗ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಾದ ಅಭಿಷೇಕ್ ಜೈನ್, ಮಹಿಪಾಲ್ ಜೈನ್ ಎಂಬಿಬ್ಬರ ಬಂಧನವಾಗಿದೆ.

ಗದಗ (ಮಾ.17): ಗದಗ ನಗರದ ಟಾಂಗಾ ಕೂಟ್ ಬಳಿ ಮಾರಾಟ ಮಾಡಲು ತಂದಿದ್ದ 4 ಕೆಜಿ 46 ಗ್ರಾಂ ಚಿನ್ನವನ್ನ ಗದಗ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಾದ ಅಭಿಷೇಕ್ ಜೈನ್, ಮಹಿಪಾಲ್ ಜೈನ್, ಸೂಕ್ತ ದಾಖಲೆಗಳಿಲ್ಲದ ಚಿನ್ನದ ಆಭರಣಗಳನ್ನ ಗದಗ ಚಿನ್ನದ ಮಾರ್ಕೆಟ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ್ರು. ವಿಷಯ ತಿಳಿದು ದಾಳಿ ನಡೆಸಿದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಚಿನ್ನಾಭರಣಗಳಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಒಟ್ಟು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದಿಂದ ಕಳ್ಳತನದ ಅಥವಾ ಮೋಸದಿಂದ ತಂದು ಚಿನ್ನವನ್ನ ಬ್ಲಾಕ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಸಿಪಿಐ ಜಯಂತ ಗೌಳಿ, ಎಸ್ ಬಿ ಸಿಂಧೆ ದಾಳಿ ನಡೆಸಿದ್ದು. ಪಿಸಿ ಎಡಿ ಜಮಾದಾರ್, ಪ್ರವೀಣ್ ಕಲ್ಲೂರು, ಉಮೇಶ್ ಸುಣಗಾರ, ಶಂಕರ್ ಮಾವಿನಕಾಯಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಮಹಿಳೆಯರಿಂದ ಸರ ಕಳವು ಮಾಡುತ್ತಿದ್ದ ಇಬ್ಬರ ಬಂಧನ:
ಮಳವಳ್ಳಿ: ವೃದ್ಧೆಯರು ಹಾಗೂ ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಇಬ್ಬರನ್ನು ಬೆಳಕವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಪುರ ತಾಲೂಕಿನ ಚೀರಣಕುಪ್ಪ ಗ್ರಾಮದ ಕೆ.ಎಸ್‌.ಮಂಜುನಾಥ್‌ (29) ಹಾಗೂ ಕೆಬ್ಬಹಳ್ಳಿ ಶಿವರಾಜು (35) ಬಂಧಿತ ಆರೋಪಿಗಳು.

ಅಂಬ್ಯುಲೆನ್ಸ್‌ ನಿರಾಕರಿಸಿದ ಆಸ್ಪತ್ರೆ, ತಂಗಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿದ ಅಣ್ಣ!

ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರು ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದರು. 2022ರ ಡಿಸೆಂಬರ್‌ 14ರಂದು ದೂರು ದಾಖಲಾಗಿತ್ತು. ಎಸ್ಪಿ ಎನ್‌.ಯತೀಶ್‌, ಎಎಸ್ಪಿ ಸಿ.ಇ.ತಿಮ್ಮಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್‌.ನವೀನ್‌ಕುಮಾರ್‌, ಸಿಪಿಐ ಬಿ.ಎಸ್‌.ಶ್ರೀಧರ್‌, ಪಿಎಎಸ್‌ ವಿ.ಸಿ.ಅಶೋಕ್‌, ಸಿಬ್ಬಂದಿ ಜಯಕುಮಾರ್‌, ರಿಯಾಜ್‌ ಪಾಷ, ಎಂ.ಕೆ.ನಾಗೇಂದ್ರ, ಸಿದ್ದರಾಜು, ಮಹಮ್ಮದ್‌ ಫಾರೂಕ್‌, ಕೃಷ್ಣಮೂರ್ತಿ, ರವಿಕಿರಣ್‌, ಲೋಕೇಶ್‌ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತುಂಗಾ ನದಿ ತೀರದಲ್ಲಿ ಬ್ಲಾಸ್ಟ್ ಪ್ರಕರಣ, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಇಬ್ಬರ

ಆರೋಪಿಗಳಿಂದ ಸುಮಾರು 9 ಲಕ್ಷ ರು. ಮೌಲ್ಯದ 174 ಗ್ರಾಂ.ತೂಕದ 8 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಮಂಡ್ಯ, ತುಮಕೂರು, ನಾಗಮಂಗಲ, ಹುಲಿಯೂರು ದುರ್ಗ, ಕುಣಿಗಲ್, ಅಮೃತ್ತೂರ್‌, ತುರುವೆಕೆರೆ, ನಾಗಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಗಳ ಸರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ