ನಿವೃತ್ತಿಗೆ 15 ದಿನ ಬಾಕಿ, ಕಾರು ಡಿಕ್ಕಿಯಾಗಿ ದೆಹಲಿ ಸಬ್ ಇನ್ಸ್‌ಪೆಕ್ಟರ್‌ ನಿಧನ!

By Suvarna NewsFirst Published Jan 14, 2023, 7:14 PM IST
Highlights

ದೆಹಲಿಯಲ್ಲಿ ಇತ್ತೀಚೆಗೆ ಯುವತಿಯನ್ನು ಕಾರು ಎಳೆದೊಯ್ದು ಭೀಕರ ಘಟನೆ ಮಾಸುವ ಮುನ್ನವೇ ಅದೇ ರೀತಿ ಮತ್ತೊಂದು ಘಟನೆ ನಡೆದಿದೆ. ಸಬ್ ಇನ್ಸ್‌ಪೆಕ್ಟರ್‌ಗೆ ಕಾರು ಡಿಕ್ಕಿಯಾಗಿ ಕೆಲ ದೂರ ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ನಿವೃತ್ತಿಗೆ ಕೆಲ ದಿನ ಮೂದಲು ಇನ್ಸ್‌ಪೆಕ್ಟರ್ ನಿಧರಾಗಿದ್ದಾರೆ.

ದೆಹಲಿ(ಜ.14): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಯುವತಿ ಕಾರಿನಡಿ ಸಿಲುಕಿ ಎಳೆದೊಯ್ದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. ಇದೇ ರೀತಿಯ ಮತ್ತೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಸಬ್ ಇನ್ಸ್‌ಪೆಕ್ಟರ್‌ಗೆ ಗುದ್ದಿದ ಕಾರು, ಕೆಲ ದೂರ ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಸಬ್ ಇನ್ಸ್‌ಪೆಕ್ಟರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇನ್ಸ್‌ಪೆಕ್ಟರ್ ಬದುಕುಳಿಯಲಿಲ್ಲ. ದುರಂತ ಅಂದರೆ ನಿವೃತ್ತಿಗೆ ಕೆಲ ದಿನ ಮೂದಲೇ ಈ ಘಟನೆ ನಡೆದು  ಸಬ್ ಇನ್ಸ್‌ಪೆಕ್ಟರ್ ಲಾಥೂರ್ ಸಿಂಗ್ ಮೃತಪಟ್ಟಿದ್ದಾರೆ. 

ಚಾಂದಿನಿ ಮಹಲ್(Delhi Accident) ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲಾಥೂರ್ ಸಿಂಗ್(Lathoor sing accident) ಅವರನ್ನು ತುರ್ತು ಕಾರ್ಯಕ್ಕಾಗಿ ದರ್ಯಾಗಂಜ್ ವಲಕ್ಕೆ ನಿಯೋಜಿಸಲಾಗಿತ್ತು. ಸಮನ್ಸ್ ನೀಡುವ ಸಲುವಾಗಿ ಲಕ್ಷ್ಮೀ ನಗರಕ್ಕೆ ತೆರಳುತ್ತಿದ್ದ ಲಾಥೂರ್ ಸಿಂಗ್‌‌ಗೆ ರಾಜ್‌ಘಾಟ್ ಬಳಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಬಳಿಕ ಕಾರು(Car hit Police) ಲಾಥೂರ್ ಸಿಂಗ್‌ರನ್ನು ಕೆಲ ದೂರ ಎಳೆದೊಯ್ದಿದೆ. ಈ ಭೀಕರ ಅಪಘಾತಕ್ಕೆ ಲಾಥೂರ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ

ತಕ್ಷಣವೇ ಲಾಥೂರ್ ಸಿಂಗ್ ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಆಸ್ಪತ್ರೆ ದಾಖಲಿಸುವ ಮುನ್ನವೇ ಲಾಥೂರ್ ಸಿಂಗ್ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಖಚಿತಪಡಿಸಿದ್ದಾರೆ. ಲಾಥೂರ್ ಸಿಂಗ್ ಜನವರಿ 31ಕ್ಕೆ ನಿವೃತ್ತಿಯಾಗಬೇಕಿತ್ತು. ಇನ್ನು 15 ದಿನ ಮಾತ್ರ ಸರ್ವೀಸ್ ಬಾಕಿ ಇತ್ತು. ಬಳಿಕ ವಿಶ್ರಾಂತಿ ಜೀವನದ ಕನಸು ಕಂಡಿದ್ದ ಲಾಥೂರ್ ಸಿಂಗ್ ದುರಂತ ಅಂತ್ಯಕಂಡಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಗಿದೆ. ಇತ್ತ ಕಾರು ವಶಕ್ಕೆ ಪಡೆಯಲಾಗಿದೆ. ಈತ ಬ್ಯಾಂಕ್ ಉದ್ಯೋಗಿಯಾಗಿದ್ದು, ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಯುವತಿಯ ಕಾರು ಎಳೆದೊಯ್ದ ರೀತಿಯಲ್ಲಿ ಈ ಅಪಘಾತವೂ ನಡೆದಿದೆ. ಆದರೆ ಇಲ್ಲಿ ಕಾರು ಡಿಕ್ಕಿಯಾಗಿ ಕೆಲ ಮೀಟರ್ ದೂರ ಇನ್ಸ್‌ಪೆಕ್ಟರ್‌ನ್ನು ಕಾರು ಎಳೆದೊಯ್ದಿದೆ. ಇದರಿಂದ ಸಬ್ ಇನ್ಸ್‌ಪೆಕ್ಟರ್ ತೀವ್ರವಾಗಿ ಗಾಯಗೊಂಡಿದ್ದರು. 

Delhi Accident: ಫುಟ್‌ಪಾತ್‌ನಲ್ಲಿ ಆಟವಾಡುತ್ತಿದ್ದ 3 ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು: ಚಾಲಕ ಬಂಧನ

ಕಾರಿನಡಿ ಸಿಲುಕಿ ಅಂಜಲಿ ಸಾವು: ದೆಹಲಿಯ 11 ಪೊಲೀಸರು ಅಮಾನತು
ಚಲಿಸುತ್ತಿರುವ ಕಾರಿನಡಿ ಸಿಲುಕಿ ಸುಮಾರು 12 ಕಿ.ಮೀ ಎಳೆದೊಯ್ದ ಅಂಜಲಿ ಸಾವಿನ ಪ್ರಕರಣದಲ್ಲಿ ಶುಕ್ರವಾರ 11 ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ವಿಶೇಷ ಆಯುಕ್ತೆ ಅಂಜಲಿ ಸಿಂಗ್‌ ನೇತೃತ್ವದ ತನಿಖಾ ತಂಡ ವರದಿ ಸಲ್ಲಿಸಿದ ಬೆನ್ನಲ್ಲೇ ಸುಲ್ತಾನ್‌ಪುರಿ ಕಂಝಾವಲಾ ಮಾರ್ಗದಲ್ಲಿ ನಿಯೋಗಗೊಂಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಹೊಸ ವರ್ಷದ ದಿನದಂದು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಅಂಜಲಿ ಸಿಂಗ್‌ ಕಾರ್‌ ನಡಿ ಸಿಲುಕಿ ಸುಮಾರು 12 ಕಿ.ಮೀ ಎಳೆದೊಯ್ಯಲ್ಪಟ್ಟಿದ್ದರು. ಘಟನೆ ವೇಳೆ ಕಾರ್‌ನಲ್ಲಿದ್ದ 5 ಜನ ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
 

click me!