Bengaluru Crime: ಸುಂದರ ಕುಟುಂಬಕ್ಕೆ ಬಡತನದ ಶಾಪ: ಮಗಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

By Sathish Kumar KH  |  First Published Dec 20, 2022, 6:00 PM IST

ವರ್ಷದ ಹಿಂದೆ ಎಲ್ಲ ಕುಟುಂಬದಂತೆ ಸುಂದರವಾಗಿದ್ದ ಕುಟುಂಬ ವಿಧಿಯಾಟಕ್ಕೆ ಬಲಿ
ಒಂದು ವರ್ಷದಲ್ಲಿ ಕುಟುಂಬದ ಗಂಡ, ಮಗ ಮತ್ತು ಮಗಳು ಸಾವು
ಬಡತನದ ಬೇಗೆಯಿಂದ ಬೇಸತ್ತಿದ್ದ ಸುಮಾ ಕೊನೆಗೆ ಮಾಡಿದ್ದು ಸಾವಿನ ನಿರ್ಧಾರ


ಬೆಂಗಳೂರು (ಡಿ.20): ರಾಜ್ಯ ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಮಗಳಿಗೆ ವಿಷವುಣಿಸಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ. ಈಗ ಇದ್ದೊಬ್ಬ ಅಂಗವಿಕಲ ಮಗಳಿಗೆ ವಿಷವುಣಿಸಿ ಸಾಯಿಸಿ ತಾನು ಫ್ಯಾನಿಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುವಾಗ ನೆರೆಹೊರೆಯವರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜೀವನದಲ್ಲಿ ವಿಧಿಯಾಟ ಹೇಗಿರುತ್ತದೆ ಎಂಬುದು ಯಾರೊಬ್ಬರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಬಂದಿದ್ದೆಲ್ಲವನ್ನು ಅನುಭವಿಸಿ ಕಷ್ಟ- ಸುಖವನ್ನು ಸಹಿಸಿಕೊಂಡು ಜೀವನ ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ, ಇಲ್ಲಿ ವಿಧಿಯ ಕ್ರೂರ ಆಟ ಹೇಗಿತ್ತೆಂದರೆ ಕಣ್ಣೀರ ಕಥೆಯನ್ನು ಒಳಗೊಂಡಿರುವ ಸಿನಿಮಾವನ್ನು ಮೀರಿಸುವತಿದೆ. ಮಹಿಳೆ ಅನುಭವಿಸಿದ ಕಷ್ಟಕರ ಜೀವನ ಮತ್ತು ಸಾವಿನ ಕದ ತಟ್ಟಲು ಕಾರಣವೇನೆಂಬ ವಿವರ ಇಲ್ಲಿದೆ ನೋಡಿ..

Tap to resize

Latest Videos

 

Bengaluru Crime: ಸಾಲದ ಸುಳಿಗೆ ಸಿಕ್ಕು ಕಾಂಟ್ರ್ಯಾಕ್ಟರ್ ಕುಟುಂಬದ ಮೂವರು ಆತ್ಮಹತ್ಯೆ

 

ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ಬೆಂಗಳೂರಿನಲ್ಲಿ ದುಡಿದು ತಿನ್ನುತ್ತಾ, ಇಬ್ಬರು ಮಕ್ಕಳನ್ನು ಮಾಡಿಕೊಂಡು ಖುಷಿಯಿಂದ ಜೀವನ ಮಾಡುತ್ತಿದ್ದರು. ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಮಗು ಇವರಿಗಿತ್ತು. ಸುಖ- ಸಂತೋಷದಿಂದಿರಲು ಕುಟುಂಬಕ್ಕೆ ಇಷ್ಟು ಸಾಕು ಎನ್ನುವ ಹಾಗಿತ್ತು. ಆದರೆ, ಅದ್ಯಾವ ಕೆಟ್ಟ ದೃಷ್ಟಿ ಇವರ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಕಳೆದ ಒಂದು ವರ್ಷದ ಹಿಂದೆ ಕುಟುಂಬಕ್ಕೆ ಆಧಾರವಾಗಿದ್ದ ಗಂಡನನ್ನು ಕಳೆದುಕೊಂಡ ಪತ್ನಿಗೆ ಬರಸಿಡಿಲು ಬಡಿದಂತಾಗಿತ್ತು. ಇದಾದ ನಂತರ ಕೆಲವೇ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಭವಿಷ್ಯದಲ್ಲಿ ಆಸರೆಯಾಗಬಹುದೆಂದು ನಿರೀಕ್ಷೆಯಿಂದ ಕಷ್ಟದಲ್ಲಿಯೇ ಜೀವನ ಮುನ್ನಡೆಸುತ್ತಿದ್ದ ತಾಯಿಗೆ ಮತ್ತೊಂದು ಬರಸಿಡಿಲು ಕಾದಿತ್ತು. ಗಂಡನ ಸಾವಿನ ನಂತರ, ಇದ್ದೊಬ್ಬ ಗಂಡು ಮಗುವನ್ನೂ ಕಳೆದುಕೊಂಡಳು. ಈಗ ಭೂಮಿಯೇ ಕುಸಿದು ಹೋದಂತಾಗಿಯಿತು.

ಅಂಗವಿಕಲ ಮಗಳನ್ನು ಬಿಟ್ಟು ಕೆಲಸಕ್ಕೆ ಹೋಗಲಾಗದ ಸ್ಥಿತಿ: ಇನ್ನು ಮನೆಯಲ್ಲಿ ವಿಕಲಚೇತನ ಮಗಳು ಪ್ರಿಯಾಂಕ (10) ಹಾಗೂ ತಾಯಿ ಸುಮಾ ಇಬ್ಬರೂ ವಾಸವಿದ್ದರು. ಈಗಾಗಲೇ ಕುಟುಂಬದ ಆಸರೆಯನ್ನು ಕಳೆದುಕೊಂಡು ಕಷ್ಟದಲ್ಲಿಯೇ ಜೀವನ ಮಾಡುತ್ತಿದ್ದ ಸುಮಾ ಅಂಗವಿಕಲ ಮಗಳನ್ನು ಬಿಟ್ಟು ಕೆಲಸಕ್ಕೆ ಹೋಗಲೂ ಪರದಾಡುವ ಸ್ಥಿತಿಯಿತ್ತು. ಭವಿಷ್ಯದಲ್ಲಿಯೂ ಮಗಳಿಗೆ ಉತ್ತಮ ಜೀವನ ರೂಪಿಸಿಕೊಡಲು ತನ್ನಿಂದ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಳೇನೋ ಅನಿಸುತ್ತಿದೆ. ಹೀಗಾಗಿ, ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ವಿಕಲಚೇತನ ಮಗಳಿಗೆ ವಿಷವುಣಿಸಿ ಸಾಯಿಸಿದ್ದಾಳೆ. ನಂತರ ತಾನೂ ಸಾಯಬೇಕೆಂದು ನಿರ್ಧರಿಸಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಗ ನೆರೆಹೊರೆಯವರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬಡತನದ ಬೇಗೆಯಿಂದ ಬೇಸತ್ತಿದ್ದ ಸುಮಾ: ಇನ್ನು ಕುಟುಂಬದ ನಿರ್ವಹಣೆಗೆ ದುಡಿದು ತಿನ್ನಬೇಕು ಎನ್ನುವ ಛಲವನ್ನು ಹೊಂದಿದ್ದರೂ, ಅಂಗವಿಕಲ ಮಗಳನ್ನು ಬಿಟ್ಟು ಹೋಗಲು ಸಾಧ್ಯ ಇರಲಿಲ್ಲ. ಹೀಗಾಗಿ ಕುಟುಂಬಕ್ಕೆರ ಮಾಡಿಟ್ಟುಕೊಂಡಿದ್ದ ಎಲ್ಲ ಆಧಾರವನ್ನು ಮಾರಿದರೂ ಜೀವನ ನಿರ್ವಹಣೆ ಕಷ್ಟವಾಗುತ್ತಲೇ ಸಾಗಿತು. ಹೀಗಾಗಿ, ಸಾವಿನ ನಿರ್ಧಾರಕ್ಕೆ ಬಂದಿದ್ದಾರೆ ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಆದರೆ, ವಿಧಿಯ ಕ್ರೂರ ಆಟಕ್ಕೆ ಇಡೀ ಕುಟುಂಬವೇ ನಾಶ ಹೊಂದಿರುವುದಂತೂ ಮನವನ್ನು ಕಲಕುವಂತಿದೆ. ಇನ್ನು ತಾಯಿ ಆರೋಗ್ಯವಾದರೂ ಅವರಿಗೆ ಜೈಲು ಶಿಕ್ಷೆ ಮತ್ತು ಮುಂದಿನ ಜೀವನದ ಪರಿಸ್ಥಿತಿ ಏನಾಗುವುದೋ ದೇವರೇ ಬಲ್ಲ..

click me!