Davanagere; ಪತಿಯ ಕಿರುಕುಳಕ್ಕೆ ಬೇಸತ್ತು 11 ತಿಂಗಳ ಮಗು ಸಹಿತ ಅಮ್ಮ ಆತ್ಮಹತ್ಯೆ!

By Suvarna NewsFirst Published Jun 14, 2022, 10:27 PM IST
Highlights

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ  ಪತ್ನಿ  ತನ್ನ 11 ತಿಂಗಳ  ಮಗು ಸಮೇತ ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ (ಜೂನ್ 14): ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ  ಪತ್ನಿ  ತನ್ನ 11 ತಿಂಗಳ  ಮಗು ಸಮೇತ ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ. ಮಗು ಹಾಗು ತಾಯಿ ಒಂದೇ ಕುಣಿಕೆಯಲ್ಲಿ ನೇತಾಡುತ್ತಿದ್ದನ್ನು ಕಂಡ ಜನ ಮಮ್ಮಲ ಮರುಗಿದ್ದಾರೆ. 

ಇಂಜಿನಿಯರ್  ಪತ್ನಿ ಮಗು ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ? 
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ‌ ನಿರ್ವಹಿಸುತ್ತಿದ್ದ ಸಿವಿಲ್ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ಲಿಖಿತಾ ಹಾಗು ಅವರ 11 ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಗಳು. 

ಆತ್ಮಹತ್ಯೆಗೆ ಕಾರಣ ಪತಿಯ ಅನೈತಿಕ ಸಂಬಂಧವಾ? ವರದಕ್ಷಿಣೆ ಕಿರುಕುಳವಾ?
ಒಂದೂವರೆ ವರ್ಷಗಳ ಹಿಂದೆ ಮೃತ ಲಿಖಿತಾ ಅವರನ್ನು ಹಿರಿಯೂರು ತಾಲೂಕಿನ ಬಸಪ್ಪನಮಾಳಿಗೆ ಗ್ರಾಮದ ಡಿ.ಮನೋಜ್‍ಕುಮಾರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.

YADGIR; ಕಾರ ಹುಣ್ಣಿಮೆ ಸಡಗರವೋ ಸಡಗರ!

ಶಿಕ್ಷಕರಾದ ಡಿ.ವಿ.ಅಂಬುಜಾ ಮತ್ತು ಎ.ನಾಗರಾಜ್ ಎಂಬುವರ ಪುತ್ರಿ ಲಿಖಿತಾ (25) ರನ್ನು  ಇಂಜಿನಿಯರ್ ಮನೋಜ್ ಕುಮಾರ್ ಗೆ ಕೊಟ್ಟು ಮದುವೆ ಮಾಡಿದ್ದರು. ಅವರಿಗೆ 11 ತಿಂಗಳ ಹಿಂದೆಷ್ಟೆ ಮಗುವಾಗಿತ್ತು.ಆ ಮಗುವಿಗೆ ಅನ್ವಿತ್ ಎಂದು ನಾಮಕರಣ ಮಾಡಿದ್ದರು. ಲಿಖಿತಾ ತನ್ನ 11 ತಿಂಗಳ  ಮಗುವನ್ನು ಬಿಡದೇ  ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಪತಿ ಡಿ.ಮನೋಜ್‍ಕುಮಾರ್ ಅಕ್ರಮ ಸಂಬಂಧ ಮತ್ತು ವರದಕ್ಷಿಣಿ ಕಿರುಕುಳದಿಂದ ಬೇಸತ್ತು ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಅಂಬುಜಾ ಆರೋಪ ಮಾಡಿದ್ದಾರೆ.   ಮನೋಜ್‍ಕುಮಾರ್ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೇರೆ ಹೆಣ್ಣುಮಕ್ಕಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಇದೇ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಲಿಖಿತಾ ತಂದೆ ನಾಗರಾಜ್ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ವಿಚಾರಣೆ: ಕ್ರಿಮಿನಲ್ ಆಫೆನ್ಸ್ ಮಾಡಿದವರನ್ನು ತನಿಖೆ

ಮದುವೆಯಾದಾಗಿನಿಂದಲೂ ಮಗಳನ್ನು ನೆಮ್ಮದಿಯಿಂದ ಇರಲು ಬಿಡದೆ ನಿತ್ಯ ಕಿರುಕುಳ ನೀಡುತ್ತಿದ್ದ. ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಆರು ಲಕ್ಷ ರೂಪಾಯಿ ವರದಕ್ಷಿಣೆ, ಚಿನ್ನಾಭರಣ ಕೊಟ್ಟು ವಿವಾಹ ಮಾಡಿಕೊಟ್ಟಿದ್ದೆವು. ಆದರೆ ಮದುವೆಯ ನಂತರ ಆತನ ವರ್ತನೆ ಮತ್ತು ಆತ ಹೊಂದಿದ್ದ ಅಕ್ರಮ ಸಂಬಂಧದಿಂದ ಮಗಳು ಬೇಸತ್ತಿದ್ದಳು.

ನಿತ್ಯ ಫೋನ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ತನ್ನ ತಾಯಿಯ ಮಾತು ಕೇಳಿ ಇನ್ನು ಹೆಚ್ಚಿನ ಹಣ, ಒಡವೆಗಳನ್ನು ತರುವಂತೆ ಪೀಡಿಸುತ್ತಿದ್ದ ಹೀಗಾಗಿ ಮನನೊಂದ ಲಿಖಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಲಿಖಿತಾ ಪೋಷಕರು ಆರೋಪಿಸಿದ್ದಾರೆ.

Chikkamagaluru ಸೋಲಾರ್ ವಿದ್ಯುತ್ ಘಟಕ ಆರಂಭಕ್ಕೆ ವಿಘ್ನ

ತಂದೆ ನಾಗರಾಜ್  ತಾಯಿ ಅಂಬುಜಾ ಶಿಕ್ಷಕರಾಗಿದ್ದು ಕೆಲಸಕ್ಕೆ ಹೋದಾಗ ಬಾಗಿಲು ಹಾಕಿಕೊಂಡು ಹತ್ತು ತಿಂಗಳ ಮಗುವನ್ನು ತಬ್ಬಿಕೊಂಡ ತಾಯಿ ಲಿಖಿತಾ ಒಂದೇ ಹಗ್ಗಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿರಾರು ಜನ ಸಾರ್ವಜನಿಕರು ಈ ಹೃದಯ ವಿದ್ರಾವಕ ಘಟನೆಯ ಕಂಡು ಕಣ್ಣೀರು ಸುರಿಸಿದ್ದಾರೆ.

ಸ್ಥಳಕ್ಕೆ ದಾವಣಗೆರೆ ಐಪಿಎಸ್ ಅಧಿಕಾರಿ ಕನ್ನಿಕಾ ಅಗರ್‍ವಾಲ್, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಿಪಿಐ ಮಂಜುನಾಥ್ ಪಂಡಿತ್, ಪಿಎಸ್‍ಐ ಮಹೇಶ್ ಹೊಸಪೇಟ ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಈ ಘಟನೆಯ ನಂತರ ಮೃತ ಲಿಖಿತಾ ಅವರ ಪತಿ ಮನೋಜ್‍ಕುಮಾರ್ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

click me!