ಗಂಡ-ಹೆಂಡತಿ ಮಧ್ಯೆ ಇರದ ಸಾಮರಸ್ಯ| ಕುಟುಂಬದಲ್ಲಿ ಅಶಾಂತಿ- ಕಲಹ| ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೃತ ಸುಚಿತ್ರಾಳ ಪೋಷಕರು| ಈ ಸಂಬಂಧ ಮೃತಳ ಪತಿ ಜಗದೀಶ ಕಾಂಬಳೆ ಬಂಧನ|
ಕಲಬುರಗಿ(ಮಾ.12): ತಾಯಿ ಮತ್ತು ಮಗ ಇಬ್ಬರು ಏಕಕಾಲಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿಯ ಸ್ವಸ್ತೀಕ್ ನಗರದಲ್ಲಿ ಸಂಭವಿಸಿದೆ. ಘಟನೆಯಲ್ಲಿ ದಾರುಣ ಸಾವನ್ನಪ್ಪಿದ ತಾಯಿ- ಮಗನನ್ನು ಸುಚಿತ್ರಾ ಜಗದೀಶ ಕಾಂಬಳೆ (34) ಹಾಗೂ ವಿನೀತ್ ಕಾಂಬಳೆ (9) ಎಂದು ಗುರುತಿಸಲಾಗಿದೆ.
ಸುಚಿತ್ರಾ ಹಾಗೂ ಜಗದೀಶ ಕಾಂಬಳೆ ಮದುವೆಯಾಗಿ 10 ವರ್ಷಗಳಾಗಿದ್ದವು. ಇವರ ದಾಂಪತ್ಯದ ಕುರುಹಾಗಿ 9 ವರ್ಷದ ಮಗನೂ ಇದ್ದ. ಗಂಡ-ಹೆಂಡತಿ ಮಧ್ಯೆ ಸಾಮರಸ್ಯ ಇರಲಿಲ್ಲ, ಕುಟುಂಬದಲ್ಲಿ ಅಶಾಂತಿ- ಕಲಹ ಇತ್ತು ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದ್ದು ಇದೇ ಕಾರಣದಿಂದಲೇ ತಾಯಿ- ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಶಿರಸಿ: ಸಹಪಾಠಿ ಮಾತಿನಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಜಗದೀಶ ಕಾಂಬಳೆ ಇವರು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಕಾಳಗಿ ಶಾಖೆಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಎಂದು ಕೆಲಸದಲ್ಲಿದ್ದಾರೆಂದು ತಿಳಿದು ಬಂದಿದೆ. ಜಗದೀಶ ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ಕಡೆಯವರು ಎಂದು ಗೊತ್ತಾಗಿದೆ. ಘಟನೆಯ ಕುರಿತಂತೆ ಬಲವಾದ ಶಂಕೆ ವ್ಯಕ್ತಪಡಿಸಿರುವ ಸುಚಿತ್ರಾ ಪೋಷಕರು ಇಲ್ಲಿನ ಎಂಬ ನಗರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ಸುಚಿತ್ರಾಳ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಚಂದ್ರಶೇಖರ ತಿಗಡಿ ಮತ್ತು ಸಿಬ್ಬಂದಿ ಸ್ವಸ್ತಿಕ್ ನಗರದ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಗದೀಶ ಕಾಂಬಳೆ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.