ಮಗನ ಅಕಾಲಿಕ ಸಾವಿನಿಂದ ತೀವ್ರವಾಗಿ ಮನನೊಂದು ಮಗನ 9ನೇ ದಿನ ಕ್ರಿಯಾಕ್ರಮ ನೆರವೇರಿಸುವ ವೇಳೆ ಕುಸಿದು ಬಿದ್ದು ತಾಯಿ ಸಾವು. ಕೊಪ್ಪಳದ ಕುಷ್ಟಗಿಯಲ್ಲಿ ನಡೆದ ಮನಕಲುಕುವ ಘಟನೆ.
ಕೊಪ್ಪಳ (ಆ.18): ಪುತ್ರಶೋಕಂ ನಿರಂತರಂ ಎಂಬುದು ಸುಳ್ಳಲ್ಲ. ಮಡಿಲಲ್ಲಿ ಆಡಿ ಬೆಳೆದ ಮಕ್ಕಳ ಸಾವು ಹೆತ್ತ ತಾಯಿಗೆ ನಿರಂತರ ನೋವು. ಮಗನ ಸಾವಿನಿಂದ ಮನನೊಂದ ತಾಯಿಯೊಬ್ಬಳು, ಮಗನ ಸಾವಿನ 9ನೇ ದಿನದ ಕ್ರಿಯಾಕರ್ಮ ನಡೆಸುವ ವೇಳೆ ಕುಸಿದುಬಿದ್ದು ಮೃತಪಟ್ಟಿರುವ ಮನಕಲುಕುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ: ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು
ಕುಷ್ಟಗಿಯ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ವಾಸವಿದ್ದ ಕುಟುಂಬ. ಇತ್ತೀಚೆಗೆ ಮಗ ರವಿಕುಮಾರ್ ಕೆಂಗಾರಿ(28) ಮೃತಪಟ್ಟಿದ್ದ. ಮಗನ ಸಾವಿನಿಂದ ಮಾಬಮ್ಮ ಕೆಂಗಾರಿ(70) ತೀವ್ರ ಆಘಾತಕ್ಕೆ ಒಳಗಾಗಿದ್ದಳು. ಮಗನ ಸಾವಿನ ಬಳಿಕ ಒಂಭತ್ತು ದಿನಗಳ ಕ್ರಿಯಾಕರ್ಮಗಳನ್ನು ನೆರವೇರಿಸಬೇಕಿತ್ತು. ಈ ಹಿನ್ನೆಲೆ ಗಂಗೆ ಪೂಜೆ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಮಾಬಮ್ಮಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ತಾಯಿಯ ಸಾವಿನಿಂದ ಆಘಾತಗೊಂಡ ಮತ್ತೊಬ್ಬ ಪುತ್ರ: ಮಗನ ಸಾವಿನಿಂದ ಮನನೊಂದು ತಾಯಿ ಕೊನೆಯುಸಿರು ಎಳೆಯುತ್ತಿದ್ದಂತೆ ಮಾಬಮ್ಮಳ ಇನ್ನೊಬ್ಬ ಮಗನೂ ತಾಯಿಯ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಗಜೇಂದ್ರಗಡದ ತಹಸೀಲ್ದಾರ್ ರಜನಿಕಾಂತ ಕೆಂಗಾರಿ.
ಗುಳೇದಗುಡ್ಡ: ಪುತ್ರ ನಿಧನವಾದ ಎರಡೇ ಗಂಟೆಯಲ್ಲೇ ತಾಯಿ ಸಾವು
ನಾಲ್ಕು ಜನ ಗಂಡು ಮಕ್ಕಳು ಓರ್ವ ಪುತ್ರಿಯನ್ನು ಹೊಂದಿದ್ದ ಮಾಬಮ್ಮ. ಕೆಲವು ತಿಂಗಳ ಹಿಂದೆ ಅವರ ಇನ್ನೊಬ್ಬ ಪುತ್ರನೂ ಮೃತಪಟ್ಟಿದ್ದ. ಬಳಿಕ ಇನ್ನೊಬ್ಬ ಮಗ ರವಿಕುಮಾರನೂ ವಾರದ ಹಿಂದೆ ಮೃತಪಟ್ಟಿದ್ದ. ಮಕ್ಕಳ ಈ ಸರಣಿ ಸಾವಿನಿಂದ ತೀವ್ರವಾಗಿ ಆಘಾತಕ್ಕೆ ಒಳಗಾಗಿದ್ದ ಮಾಬಮ್ಮ ಮಕ್ಕಳ ಅಕಾಲಿಕ ಸಾವಿನಿಂದ ನೊಂದು ಮೃತಪಟ್ಟಿದ್ದಾಳೆ.