ಭಾಗ್ಯ ಎಂಬಾಕೆಯೇ ನಿರ್ದಯಿ ತಾಯಿ. ಈಕೆ ತನ್ನ ಒಂದು ವರ್ಷ ಆರು ತಿಂಗಳ ಗಂಡುಮಗುವನ್ನು ಬಾಣಗಳ್ಳಿ ಹಾಗೂ ಕೊಂಡಾಪುರ ಗ್ರಾಮದ ನಡುವಿನ ಕಣ್ವ ಹೊಳೆಗೆ ಎಸೆದು ಸಾಯಿಸಿದ್ದಾಳೆ.
ಚನ್ನಪಟ್ಟಣ(ಡಿ.21): ನಿರ್ದಯಿ ತಾಯಿಯೊಬ್ಬಳು ಹೆತ್ತ ಮಗುವನ್ನು ನದಿಗೆ ಎಸೆದು ಸಾಯಿಸಿರುವ ಅಮಾನವೀಯ ಘಟನೆ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭಾಗ್ಯ(22) ಎಂಬಾಕೆಯೇ ನಿರ್ದಯಿ ತಾಯಿ. ಈಕೆ ತನ್ನ ಒಂದು ವರ್ಷ ಆರು ತಿಂಗಳ ಗಂಡುಮಗುವನ್ನು ಬಾಣಗಳ್ಳಿ ಹಾಗೂ ಕೊಂಡಾಪುರ ಗ್ರಾಮದ ನಡುವಿನ ಕಣ್ವ ಹೊಳೆಗೆ ಎಸೆದು ಸಾಯಿಸಿದ್ದಾಳೆ.
ಮಂಗಳವಾರ ಸಂಜೆ ಈಕೆ ಈ ಪೈಶಾಚಿಕ ಕೃತ್ಯ ಎಸಗಿದ್ದು, ಬುಧವಾರ ಬೆಳಗ್ಗೆ ಮಗುವಿನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಕಾಲಿಕೆರೆ ಗ್ರಾಮದ ಭಾಗ್ಯ ಎಂಬಾಕೆಯನ್ನು ಅಂಬಾಡಹಳ್ಳಿಯ ಶ್ರೀನಿವಾಸ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಈಕೆ ಗಂಡನನ್ನು ತೊರೆದು ಮಾದಾಪುರ ಗ್ರಾಮದ ರಾಜು ಜೊತೆ ಎಂ.ಕೆ.ದೊಡ್ಡಿಯಲ್ಲಿ ವಾಸವಾಗಿದ್ದಳು.
ರಾಮನಗರ: ಆಸ್ತಿಗಾಗಿ ಮಗನಿಂದಲೇ ಹೆತ್ತ ತಾಯಿ ಮೇಲೆ ಹಲ್ಲೆ
ಈತನ ಕುಮ್ಮಕ್ಕಿನಿಂದಲೇ ನನ್ನ ಮಗುವನ್ನು ಭಾಗ್ಯ ನದಿಗೆ ಎಸೆದು ಕೊಲೆ ಮಾಡಿದ್ದಾಳೆ ಎಂದು ಮಗುವಿನ ತಂದೆ ಶ್ರೀನಿವಾಸ್ ದೂರು ನೀಡಿದ್ದಾರೆ. ಸದ್ಯ ಭಾಗ್ಯಳನ್ನು ಅಕ್ಕೂರು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.