ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ ಪಂಜಾಬ್ ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್ ಹತ್ಯೆಯಾಗಿದ್ದಾನೆ. ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅಮೃತ್‌ಪಾಲ್ ಸಿಂಗ್ ಮೃತಪಟ್ಟಿದ್ದಾನೆ.
ಅಮೃತಸರ(ಡಿ.20) ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 2022 ಹಾಗೂ 2023ರಲ್ಲಿ ಭಾರಿ ಸದ್ದು ಮಾಡಿದ ಗ್ಯಾಂಗ್‌ಸ್ಟರ್‌ಗಳನ್ನು ಪಂಜಾಬ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಇದೀಗ ಭಾರಿ ಕುಖ್ಯಾತಿ ಪಡೆದಿದ್ದ ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್‌ನನ್ನು ಪಂಜಾಬ್ ಪೊಲೀಸರು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಮೃತ್‌ಪಾಲ್ ಸಿಂಗ್, ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾನೆ. ತಕ್ಷಣವೇ ಪ್ರತಿದಾಳಿ ನಡೆಸಿದ ಪೊಲೀಸರು ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್‌ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಈಗ ಹತ್ಯೆಯಾಗಿರುವ ಅಮೃತ್‌ಪಾಲ್ ಸಿಂಗ್ ಹಾಗೂ ಪಂಜಾಬ್ ಸರ್ಕಾರವನ್ನೇ ನಡುಗಿಸಿ ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಇಬ್ಬರೂ ಬೇರೆ. 22 ವರ್ಷದ ಅಮೃತ್‌ಪಾಲ್ ಸಿಂಗ್ ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್ ಆಗಿ ನೆಟ್‌ವರ್ಕ್ ಬೆಳೆಸಿಕೊಂಡಿದ್ದ. ಅಮೃತಸರದ ಜಂದಿಯಾಲಾ ಬಳಿ ಈ ಗುಂಡಿನ ಚಕಮಕಿ ನಡೆದಿದೆ. ಹೀರೊಯೆನ್ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟದ ಮೂಲಕ ಪಂಜಾಬ್ ಪೊಲೀಸರಿಗೆ ತಲೆನೋವಾಗಿದ್ದ ಅಮೃತಪಾಲ್ ಸಿಂಗ್, ಮೂರು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.
undefined
ಬಲೆಗೆ ಬಿದ್ದ.. ಖಲಿಸ್ತಾನಿ ಖಳನಾಯಕ.. ನಿಗೂಢ ಕಾರ್ಯಾಚರಣೆ ರಹಸ್ಯವೇನು?
ಮಾಹಿತಿ ಪಡೆದ ಪೊಲೀಸರು ಅಮೃತಪಾಲ್ ಸಿಂಗ್ ಸುತ್ತುವರೆದದೆ ಶರಣಾಗುವಂತೆ ಸೂಚನೆ ನೀಡಿದ್ದರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅಮೃತ್‌ಪಾಲ್ ಸಿಂಗ್ ಪಿಸ್ತೂಲ್ ಮೂಲಕ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ತಕ್ಷಣವೇ ಪೊಲೀಸರು ಆತ್ಮ ರಕ್ಷಣಗಾಗಿ ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅಮೃತ್‌ಪಾಲ್ ಸಿಂಗ್ ಕುಸಿದು ಬಿದ್ದಿದ್ದಾನೆ.
ಅಮೃತ್‌ಪಾಲ್‌ನನ್ನು ವಶಕ್ಕೆ ಪಡೆದ ಪೊಲೀಸರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಗ್ಯಾಂಗ್‌ಸ್ಟರ್ ಅಮೃತ್‌ಪಾಲ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನಿಂದ 2 ಕೆಜಿ ಹೆರೊಯಿನ್ ಡ್ರಗ್ಸ್, 2 ಪಿಸ್ತೂಲ್ ಸೇರಿದಂತೆ ಇತರ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈ ಬಿಸಿನೆಸ್ ಬಿಟ್ಟು ಉಗ್ರನಾದ ಅಮೃತ್‌ಪಾಲ್ ಸಿಂಗ್: ಪಂಜಾಬ್ ಬದಲು ಅಸ್ಸಾಂ ಜೈಲಿಗೆ ಹಾಕಿದ್ದೇಕೆ!
ಚೀನಾ ನಿರ್ಮಿತ ಪಿಸ್ತೂಲ್ ಇದಾಗಿದೆ. ಇತ್ತ ಪಾಕಿಸ್ತಾನದ ಮೂಲಕ ಈತ ಡ್ರಗ್ಸ್ ಡೀಲಿಂಗ್ ನಡೆಸುತ್ತಿದ್ದ. ಪಾಕ್‌ನಿಂದ ಅಕ್ರಮವಾಗಿ ಡ್ರಗ್ಸ್ ತರಿಸಿಕೊಂಡು ಪಂಜಾಬ್‌ನಲ್ಲಿ ಮಾರಾಟ ಮಾಡುತ್ತಿದ್ದ. ಇದಕ್ಕಾಗಿ ಹಲವರನ್ನು ನೇಮಿಸಿಕೊಂಡಿದ್ದ. ಈತನ ನೆಟ್‌ವರ್ಕ್ ಬಹುತೇಕ ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದೆ.