
ಬೆಂಗಳೂರು(ಡಿ.21): ಮಾತ್ರೆ ರೂಪದಲ್ಲಿ ಬರೋಬ್ಬರಿ ಸುಮಾರು ₹20 ಕೋಟಿ ಮೌಲ್ಯದ ಮಾದಕ ವಸ್ತು ಕೊಕೇನ್ ನುಂಗಿ ಬಂದಿದ್ದ ವಿದೇಶಿ ಡ್ರಗ್ಸ್ ಪೆಡ್ಲರ್‌ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಇಥಿಯೋಫಿಯಾದ ರಾಜಧಾನಿ ಅಡಿದಸ್ ಅಬಾಬಾ ನಗರದಿಂದ ಇಥಿಯೋಫಿಯಾ ಏರ್‌ಲೈನ್ ವಿಮಾನ ಬುಧವಾರ ದೇವನಹಳ್ಳಿಯ ಕೆಐಎ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ವಿಮಾನದ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ, ಪ್ರಯಾಣಿಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ತಪಾಸಣೆ ಮಾಡಿದಾಗ, ಹೊಟ್ಟೆಯಲ್ಲಿ ಮಾತ್ರೆಗಳು ಇರುವುದು ಕಂಡು ಬಂದಿದೆ.
Bengaluru: ಹೊಸ ವರ್ಷಕ್ಕೆ ಡ್ರಗ್ಸ್ ಸೇಲ್ ಮಾಡಲು ಬಂದ ವಿದೇಶ ಪ್ರಜೆ: ಸೋಪು, ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಣೆ
ಬಳಿಕ 50ಕ್ಕೂ ಅಧಿಕ ಮಾತ್ರೆಗಳನ್ನು ಹೊರಗೆ ತೆಗೆಸಿ ಪರಿಶೀಲಿಸಿದಾಗ ಆ ವ್ಯಕ್ತಿ ಮಾದಕವಸ್ತು ಕೊಕೇನ್ ಅನ್ನು ಮಾತ್ರೆಗಳ ರೂಪದಲ್ಲಿ ನುಂಗಿ ಇಥಿಯೋಫಿಯಾದಿಂದ ಬೆಂಗಳೂರಿಗೆ ಬಂದಿರುವುದು ಕಂಡು ಬಂದಿದೆ. ಮಾತ್ರೆಗಳನ್ನು ತೂಕಕ್ಕೆ ಹಾಕಿದಾಗ 2 ಕೆ.ಜಿ. ತೂಕವಿರುವುದು ಕಂಡು ಬಂದಿದೆ.
ಆರೋಪಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿಯು ಮಾದಕ ವಸ್ತುವನ್ನು ಯಾರಿಗೆ ತಲುಪಿಸಲು ಬಂದಿದ್ದ. ಈ ಡ್ರಗ್ಸ್ ಪೆಡ್ಲಿಂಗ್ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ