ತಾಯಿಯೊಬ್ಬಳು ಎರಡು ವರ್ಷದ ಗಂಡು ಮಗು ಜೊತೆ ಮಲಪ್ರಭಾ ನದಿಗೆ ಹಾರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇನ್ನೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾರಿಯೊಂದು ಕಂದಕಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಬೆಳಗಾವಿ (ಸೆ.17) : ತಾಯಿಯೊಬ್ಬಳು ಎರಡು ವರ್ಷದ ಗಂಡು ಮಗು ಜೊತೆ ಮಲಪ್ರಭಾ ನದಿಗೆ ಹಾರಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವೆಂಕಟೇಶ್ವರ ದೇವಸ್ಥಾನ ಬಳಿ ನಡೆದಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ ಹಳೆ ಸೇತುವೆ ಮೇಲಿಂದ ಮಗು ಜೊತೆ ತಾಯಿ ನದಿಗೆ ಹಾರಿದ್ದಾಳೆ. ನದಿಗೆ ಹಾರಿದಾಕೆಯನ್ನು ಓಬಳಾಪುರ ಗ್ರಾಮದ ರುದ್ರವ್ವ ಬಸವರಾಜ ಬನ್ನೂರ(30) ಎಂದು ಗುರುತಿಸಲಾಗಿದ್ದು, ಈಕೆ ಎರಡು ವರ್ಷದ ಮಗು ಜೊತೆ ನದಿಗೆ ಹಾರಿದ್ದಾಳೆ. ನದಿಯ ದಡದಲ್ಲಿ ಚಪ್ಪಲಿ ಬಿಟ್ಟು ಮಗುವಿನೊಂದಿಗೆ ನದಿಗೆ ಹಾರಿದ್ದರಿಂದ ನದಿ ಪಕ್ಕ ಬಿಟ್ಟ ಮಹಿಳೆಯ ಚಪ್ಪಲಿ ಪತ್ನಿಯದ್ದು ಎಂದು ಪತಿ ಬಸವರಾಜ ಬನ್ನೂರ ಗುರುತಿಸಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ತಾಯಿ ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರವಾರ: ಕಂದಕಕ್ಕೆ ಉರುಳಿದ ಬಿದ್ದ ಗ್ರಾನೈಟ್ ತುಂಬಿದ ಲಾರಿ
ಆಂಧ್ರಪ್ರದೇಶ ಮೂಲದ ಗ್ರಾನೈಟ್ ತುಂಬಿದ ಲಾರಿಯೊಂದು ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಟ್ಟದ ಯೂ-ಟರ್ನ್ ಬಳಿ ಕಂದಕಕ್ಕೆ ಉರುಳಿದ ಬಿದ್ದ ಘಟನೆ ನಡೆದಿದೆ. ಭೀಕರ ಅಪಘಾತದಿಂದ ಲಾರಿಯ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಈ ಲಾರಿಯೂ ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಮಂಗಳೂರು ತೆರಳುತ್ತಿತ್ತು.
ರಸ್ತೆಯಿಂದ ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಲಾರಿ ನುಜ್ಜುಗುಜ್ಜಾಗಿದೆ. ಅತೀ ವೇಗದಿಂದ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿತ್ತು. ಸಿಮೆಂಟ್ ಡಿವೈಡರ್ ಗೆ ಗುದ್ದಿದ ಬಳಿಕ ಮರಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ. ಲಾರಿ ಬ್ರೇಕ್ ಫೈಲ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಯಲ್ಲಾಪುರ ಪೋಲಿಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ಹೈಡ್ರಾಮ ಸೃಷ್ಟಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರ ಸೆರೆ
ಅಪಘಾತದ ಡ್ರಾಮಾ ಮಾಡಿ ವಾಹನ ಸವಾರರ ಜತೆಗೆ ಜಗಳ ತೆಗೆದು ಹಣ ಹಾಗೂ ಮೊಬೈಲ್ ಫೋನ್ ಸುಲಿಗೆ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಸುಲಿಗೆಕೋರರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Bengaluru Crime News: ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ
ಶಿವಾಜಿನಗರದ ನೆಹರುಪುರಂ ನಿವಾಸಿ ಮುಜಾಮಿಲ್ ಹುಸೇನ್ ಅಲಿಯಾಸ್ ಚೋರ್(27) ಮತ್ತು ಜೆ.ಸಿ.ನಗರದ ಮಾರಪ್ಪ ಗಾರ್ಡನ್ ನಿವಾಸಿ ಪೈಜ್ ಹುಸೇನ್(25) ಬಂಧಿತರು. ಆರೋಪಿಗಳಿಂದ .2.50 ಲಕ್ಷ ಮೌಲ್ಯದ 11 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
BENGALURU CRIME NEWS: ಸೀರಿಯಲ್ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್
ಆರೋಪಿಗಳು ನಗರದ ವಿವಿಧೆಡೆ ದ್ವಿಚಕ್ರ ವಾಹನದಲ್ಲಿ ಹೋಗುವವರನ್ನು ಟಾರ್ಗೆಟ್ ಮಾಡಿ, ಇವರೇ ತಮ್ಮ ದ್ವಿಚಕ್ರ ವಾಹನದಲ್ಲಿ ಡಿಕ್ಕಿ ಮಾಡುತ್ತಿದ್ದರು. ಈ ವೇಳೆ ಜಗಳ ತೆಗೆದು ದ್ವಿಚಕ್ರ ವಾಹನ ದುರಸ್ತಿಗೆ ಹಣ ಕೊಡುವಂತೆ ದಬಾಯಿಸಿ ಕೇಳುತ್ತಿದ್ದರು. ಸವಾರ ಹಣ ಕೊಡಲು ನಿರಾಕರಿಸಿದರೆ, ಚಾಕು ತೆಗೆದು ಬೆದರಿಸಿ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು.