Action Against Bengaluru Drug Peddlers: ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಪೊಲೀಸರು ಪೆಡ್ಲೆರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ಸೆ. 17): ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು (CCB Police) ಪೆಡ್ಲೆರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಮಾದಕ ವಸ್ತು ಮಾರಾಟ ಜಾಲವನ್ನ ಹತ್ತಿಕ್ಕಲು ಬೆಂಗಳೂರು ಪೊಲೀಸರು (Bengaluri Police) ಹಗಲಿರುಳು ಶ್ರಮಿಸುತ್ತಿದ್ದಾರೆ. ಡ್ರಗ್ಸ್ ಪೆಡ್ಲಿಂಗ್ (Drug Peddling) ಕೇಸ್ನಲ್ಲಿ ಅರೆಸ್ಟ್ ಆದರೆ ಜೈಲು ಸೇರುವುದರ ಜೊತೆಗೆ ಪೆಡ್ಲೆರ್‌ಗಳ ಆಸ್ತಿನೂ ಸರ್ಕಾರದ ಕೈ ಸೇರಲಿದೆ. ಈ ಮೂಲಕ ಡ್ರಗ್ ಪೆಡ್ಲೆರ್ಗಳಿಗೆ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.
ಡ್ರಗ್ ಪೆಡ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗುವ ಆರೋಪಿಯ ಆಸ್ತಿ-ಪಾಸ್ತಿ ಜಪ್ತಿಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಸೀರಿಯಲ್ ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿದ್ದ ಕಿಂಗ್ಪಿನ್ ಮೃತ್ಯುಂಜಯ ಅಲಿಯಾಸ್ ಎಂ.ಜೆ. ಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿಗೆ ಚೆನ್ನೈನ SOFEMA ಅಥಾರಿಟಿ ಆದೇಶ ಹೊರಡಿಸಿದೆ.
ಆಸ್ತಿ-ಪಾಸ್ತಿ ಮುಟ್ಟುಗೋಲು: ಮೃತ್ಯುಂಜಯ ಅಲಿಯಾಸ್ ಎಂಜೆ 2006ರಿಂದ ಗಾಂಜಾ, ಅಫೀಮು, ಹ್ಯಾಷಿಶ್ ಆಯಿಲ್ ಪೆಡ್ಲಿಂಗ್ ಮಾಡುತ್ತಿದ್ದ. ಕಳೆದ ಜುಲೈನಲ್ಲಿ ಕೆಆರ್ ಪುರಂ ಬಳಿ ಡ್ರಗ್ ಪೆಡ್ಲಿಂಗ್ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕ ನಂತರ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಜೊತೆ 80 ಲಕ್ಷ ಮೌಲ್ಯದ ಮಾದಕ ವಸ್ತುವನ್ನ ವಶಪಡಿಸಿಕೊಂಡಿದ್ದರು.
Narcotics Busted: ರೂ 200 ಕೋಟಿ ಮೌಲ್ಯದ ಡ್ರಗ್ಸ್ ವಶ, ಪಾಕಿಸ್ತಾನದ 6 ಪೆಡ್ಲರ್‌ಗಳ ಬಂಧನ
ಈತನ ವಿರುದ್ಧ ಮಾಲೂರು ಹಾಗೂ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಹಾಗೂ ಪತ್ನಿ ಭಾಗ್ಯಮ್ಮನ ಬ್ಯಾಂಕ್ ಖಾತೆಗೆ 5 ಕೋಟಿ ಹಣ ವರ್ಗಾವಣೆಯಾಗಿದೆ. ಅಲ್ಲದೆ ಆರೋಪಿ ಸರಿಯಾಗಿ ಆದಾಯ ತೆರಿಗೆ ಸಹ ಪಾವತಿ ಮಾಡಿಲ್ಲ.
ಮಾಲೂರಿನ ಮೂರು ಹಳ್ಳಿಗಳಲ್ಲಿ 11 ಗುಂಟೆ, 5 ಗುಂಟೆ,10 ಗುಂಟೆ ಕೃಷಿ ಜಮೀನು ಜಪ್ತಿ ಮಾಡಲು ಹಾಗೂ ಹೊಸಕೋಟೆಯಲ್ಲಿ ಒಂದು ಸೈಟ್ ಸೀಜ್ ಹಾಗೂ ಡ್ರಗ್ಸ್ ಮಾರಿ ಬಂದ ಹಣದಿಂದ ಖರೀದಿಸಿರುವ ಕೃಷಿ ಜಮೀನು ಹಾಗೂ ನಿವೇಶವನ್ನ NDPS ಕಾಯ್ದೆಯಡಿ ಮುಟ್ಟುಗೋಲು ಹಾಕಲು ಆದೇಶ ಹೊರ ಬಿದ್ದಿದೆ.
Bengaluru Crime: ಪೊಲೀಸರ ಭರ್ಜರಿ ಬೇಟೆ: 5 ಕೋಟಿಯ ಗಾಂಜಾ ಜಪ್ತಿ
ಮೃತ್ಯುಂಜಯನಿಗೆ ಸೇರಿದ ಕೃಷಿ ಜಮೀನು ಹಾಗೂ ವಾಣಿಜ್ಯ ನಿವೇಶನದ ಸರ್ಕಾರಿ ಮಾರ್ಗಸೂಚಿ ದರ 41 ಲಕ್ಷ ಆಗಿದ್ದರೆ, ಪ್ರಸ್ತುತ ಮಾರುಕಟ್ಟೆ ದರ 1 ಕೋಟಿ 60 ಲಕ್ಷ ಆಗಿದೆ. ಈ ಪ್ರಕರಣದಲ್ಲಿ 30 ದಿನಗಳ ಕಾಲ ಪರಿಶೀಲನೆ ನಡೆಸಿದ ನಂತರ ಆಸ್ತಿ ಜಪ್ತಿ ಆದೇಶ ನೀಡಲಾಗಿದೆ.