* ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ ನಂ.1ರಲ್ಲಿ ನಡೆದ ಘಟನೆ
* ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲ ನಡೆಸಿದ ಪೊಲೀಸರು
* ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ(ಜೂ.16): ಕಾರ ಹುಣ್ಣಿಮೆ ಕರಿಯಂತೆ ಒಂದೆ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತೊರವಿ ತಾಂಡಾ 1ರ ತೋಟದ ಕೃಷಿ ಹೊಂಡದಲ್ಲಿ ತಾಯಿ ಮೂರು ಮಕ್ಕಳ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕರಿ ದಿನವೇ ಕುಟುಂಬವೊಂದು ಸ್ಮಶಾನವಾಗಿದೆ..
ಕರಿಯ ದಿನವೇ ಇದೆಂಥ ದುರಂತ..!
ತಾಯಿಯೊಬ್ಬಳು ಮೂರು ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಮೂಲಕ ಒಂದೆ ಕುಟುಂಬದ ಸಾಲ್ವರು ಸಾವನ್ನಪ್ಪಿದ್ದಾರೆ. ಕಾರ ಹುಣ್ಣಿಮೆಯ ಕರಿಯ ದಿನವೇ ಈ ದಾರುಣ ಘಟನೆ ನಡೆದಿರೋದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. 27 ವರ್ಷದ ಅನಿತಾ ಪಿಂಟು ಜಾಧವ್ ತನ್ನ ಮೂರು ಮಕ್ಕಳ ಸಮೇತ ಹೊಂಡಕ್ಕೆ ಹಾರಿದ್ದಾಳೆ. ಪರಿಣಾಮ 6 ರ್ಷದ ಪ್ರವೀಣ, 4 ವರ್ಷದ ಸುದೀಪ್, ೩ ವರ್ಷದ ಮಮದಿಕಾ ಕೃಷಿ ಹೊಂಡದಲ್ಲೆ ಶವವಾಗಿದ್ದಾರೆ.
Victoria Doctor Suicide: ಅಪಾರ್ಟ್‌ಮೆಂಟ್‌ನಿಂದ ಜಿಗಿದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ
ಮೊದಲು ಹೊಂಡಕ್ಕೆ ಮಕ್ಕಳನ್ನ ಎಸೆದ ತಾಯಿ..!
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ತರಳಿದ ತಾಯಿ ಅನಿತಾ ಜಾಧವ್ ಮೂರು ಮಕ್ಕಳನ್ನ ಕೃಷಿ ಹೊಂಡಕ್ಕೆ ಎಸೆದಿದ್ದಾಳೆ. ಮೂರು ಮಕ್ಕಳು ಕಾಪಾಡುವಂತೆ ಅಂಗಲಾಚುತ್ತ ಒದ್ದಾಡುತ್ತಿರುವಾಗ ತಾನು ಕೂಡ ಅದೇ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೌಟುಂಬಿಕ ಕಲಹ ಕಾರಣ..!
ತಾಯಿಯೊಬ್ಬಳು ಹೀಗೆ ಮೂರು ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಕೌಟುಂಬಿಕ ಕಲಹ ಕಾರಣ ಎನ್ನಲಾಗ್ತಿದೆ. ಕುಟುಂಬದಲ್ಲಿ ಉಂಟಾದ ಕಲಹದಿಂದಲೇ ಅನಿತಾ ಮೂವರು ಮಕ್ಕಳ ಸಮೇತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ.
ಅತ್ತೆ-ಮಾವನ ಕಿರುಕುಳ ಕಾರಣನಾ?!
ಈ ಸಂಬಂಧ ಪಟ್ಟಂತೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪ್ರಾಥಮಿಕ ತನಿಖೆಯಂತೆ ಮನೆಯಲ್ಲಿ ಅತ್ತೆ ಮಾವನ ಕಿರುಕುಳ ಇತ್ತು ಎನ್ನಲಾಗಿದೆ. ನಿತ್ಯ ಅನಿತಾಳಿಗೆ ಅತ್ತೆ ಶಾಣಾಬಾಯಿ ಜಾಧವ್ ಹಾಗೂ ಮಾವ ಧರ್ಮು ಜಾಧವ ಕಿರುಕುಳ ನೀಡ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕು ಈ ಕಿರುಕುಳ ಯಾಕೆ? ಏನು ಅನ್ನೋದರ ಬಗ್ಗೆ ಕರಾರುವಕ್ಕಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಅತ್ತೆ ಶಾಣಾಬಾಯಿ ಹಾಗೂ ಮಾವ ಧರ್ಮು ವಿಚಾರಣೆ ನಡೆಸುತ್ತಿದ್ದಾರೆ.
ನಿತ್ಯ ಮನೆಯಲ್ಲಿ ಕಿರಿಕಿರಿ, ಹದಗೆಟ್ಟಿದ್ದ ಸಂಸಾರ..!
8 ವರ್ಷಗಳ ಹಿಂದೆ ಅನಿತಾಳನ್ನ ಜಾಧವ ಕುಟುಂಬದ ಪಿಂಟುಗೆ ನೀಡಿ ಮದುವೆ ಮಾಡಲಾಗಿತ್ತು. ಒಂದು ಹೆಣ್ಣು ಎರಡು ಗಂಡು ಮಕ್ಕಳಿದ್ದರು. ಸಂಸಾರ ಚೆನ್ನಾಗಿದೆ ಎನ್ನುವಾಗಲೇ ಮನೆಯಲ್ಲಿ ಕೆಲಸದ ವಿಚಾರದಲ್ಲಿ ಮನಸ್ತಾಪಗಳು ಉಂಟಾಗಿದ್ದವಂತೆ. ತೊರವಿ ತಾಂಡಾದಲ್ಲಿರುವ 4 ಏಕರೆ ಜಮೀನಿನಲ್ಲೆ ಗಂಡ ಪಿಂಟು ಕೆಲಸ ಮಾಡ್ತಿದ್ದು, ಪತ್ನಿ ಅನಿತಾ ಕೆಲಸದ ವಿಚಾರದಲ್ಲಿ ಮನೆಯವರ ಮಾತು ಕೇಳ್ತಿರಲಿಲ್ಲ ಎನ್ನಲಾಗಿದೆ. ಇದೆ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ-ಕದನಗಳು ಆಗ್ತಿದ್ದವು ಎನ್ನುವ ಮಾಹಿತಿ ಇವೆ. ಸಾಂಸಾರಿಕ ಗಲಾಟೆ ಈ ಸಾವಿಗೆ ಕಾರಣ ಎನ್ನಲಾಗ್ತಿದೆ..