* ಮೈಸೂರು ಜಿಲ್ಲೆಯ ತಾಲೂಕಿನ ನಂಜನಗೂಡು ದಾಸನೂರು ಗ್ರಾಮದಲ್ಲಿ ನಡೆದ ಘಟನೆ
* ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ
* ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನಂಜನಗೂಡು(ಜೂ.02): ಮಾನಸಿಕ ಖಿನ್ನತೆಗೆ ಒಳಗಾಗಿ ತಾಯಿಯೊಬ್ಬಳು ತನ್ನ 8 ತಿಂಗಳ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ತಾಲೂಕಿನ ದಾಸನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿಯವರ ಪತ್ನಿ ಸಿಂಧು (24) ಮಗು ಮುದ್ದುಮಾದಯ್ಯನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. 9 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ತೊರೆವಳ್ಳಿ ಗ್ರಾಮದ ಸಿಂಧುವನ್ನು ದಾಸನೂರು ಗ್ರಾಮದ ಮಹದೇವಸ್ವಾಮಿ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸಿಂಧುವಿಗೆ 4 ಬಾರಿ ಗರ್ಭಪಾತವಾಗಿದ್ದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಚಿಕ್ಕೋಡಿ: ಎಂಟು ವರ್ಷದ ಮಗಳ ಜತೆ ತಾಯಿ ಆತ್ಮಹತ್ಯೆ
ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.