Koppal: ಮಹಿಳಾ ಸಿಬ್ಬಂದಿ ರಜೆ ಕೇಳಿದ್ರೆ ಲಾಡ್ಜ್‌ನ ಮಂಚಕ್ಕೆ ಕರಿತಾನೆ ಮೇಲಾಧಿಕಾರಿ!

By Govindaraj S  |  First Published Jun 1, 2022, 7:31 PM IST

ರಜೆ ಎನ್ನುವುದು ಸರಕಾರಿ ನೌಕರರ ಸಾಂವಿಧಾನಿಕ ಹಕ್ಕು. ಆದರೆ ಇಲ್ಲೊಂದು ಊರಲ್ಲಿ ಮಹಿಳಾ ನೌಕರರು ರಜೆ ಬೇಕೆಂದರೆ ಲಾಡ್ಜ್‌ಗೆ ಹೋಗಿ ಬಟ್ಟೆ ಬಿಚ್ಚಬೇಕೆಂತೆ. ಅಷ್ಟಕ್ಕೂ ಏನಿದು ರಜೆಗಾಗಿ ಲೈಂಗಿಕ ಕಿರುಕುಳ ಅಂತೀರಾ?


ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಜೂ.01): ರಜೆ ಎನ್ನುವುದು ಸರಕಾರಿ ನೌಕರರ ಸಾಂವಿಧಾನಿಕ ಹಕ್ಕು. ಆದರೆ ಇಲ್ಲೊಂದು ಊರಲ್ಲಿ ಮಹಿಳಾ ನೌಕರರು ರಜೆ ಬೇಕೆಂದರೆ ಲಾಡ್ಜ್‌ಗೆ ಹೋಗಿ ಬಟ್ಟೆ ಬಿಚ್ಚಬೇಕೆಂತೆ. ಅಷ್ಟಕ್ಕೂ ಏನಿದು ರಜೆಗಾಗಿ ಲೈಂಗಿಕ ಕಿರುಕುಳ ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

Tap to resize

Latest Videos

ಲೈಂಗಿಕ ಕಿರುಕುಳ ನಡೆದದ್ದು ಎಲ್ಲಿ: ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರುವ ಕೊಪ್ಪಳ ಈ ಬಾರಿ ಲೈಂಗಿಕ‌ ಕಿರಕುಳದಿಂದ ಸುದ್ದಿಯಾಗಿದೆ. ಅಷ್ಟಕ್ಕೂ ಈ ಲೈಂಗಿಕ ಕಿರುಕುಳ ನಡೆದಿರುವ ಜಾಗ ಎಲ್ಲಿ ಅಂತ ಕೇಳಿದರೆ ನೀವು ಒಂದು ಕ್ಷಣ ಆಶ್ಚರ್ಯ ಆಗದೇ ಇರದು. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಎಸ್ಪಿ ಕಚೇರಿಯಲ್ಲಿಯೇ ತನ್ನದೇ ಇಲಾಖೆಯ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳವಾಗಿದೆ. 

‘ಮಧ್ಯಪ್ರದೇಶ ಮಾದರಿ’ ನೀರಾವರಿ ಯೋಜನೆ ಜಾರಿಗೆ ತಜ್ಞರ ಸಮಿತಿ

ಲೈಂಗಿಕ ಕಿರುಕುಳ ನೀಡಿದ ಅಧಿಕಾರಿ ಯಾರು: ಇನ್ನು ಪೊಲೀಸ್ ಮಹಿಳಾ‌ ಗ್ರೂಪ್ ಡಿ  ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಬೇರೆಯವರಲ್ಲ. ಬದಲಾಗಿ ತಮ್ಮದೇ ಇಲಾಖೆಯ ಅಧಿಕಾರಿ. ಇನ್ನು ಎಸ್ಪಿ ಕಚೇರಿಯ ಸಿಬ್ಬಂದಿ ರಜೆ ತೆಗೆದುಕೊಳ್ಳಬೇಕೆಂದರೆ ಅಲ್ಲಿನ ಸಹಾಯಕ ಆಡಳಿತಾಧಿಕಾರಿಯ ಅನುಮತಿ ನೀಡಬೇಕು.ಹೀಗಾಗಿ ಪತಿ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ನೌಕರಿ ಪಡೆದುಕೊಂಡ ಮಹಿಳಾ ನೌಕರರರಿಗೆ ಸಹಾಯಕ ಆಡಳಿತಾಧಿಕಾತಿ  ಮಲ್ಲಿನಾಥ ಲೈಂಗಿಕ ಕಿರಕುಳ ನೀಡುತ್ತಿದ್ದಾನೆ.

ರಜೆ ಬೇಕೆಂದರೆ ಲಾಡ್ಜ್‌ಗೆ ಬರಬೇಕಂತೆ: ಇನ್ನು ಗ್ರೂಪ್ ಡಿ ಮಹಿಳಾ‌ ನೌಕರರು ರಜೆ ಕೇಳಿದರೆ ಮಲ್ಲಿನಾಥ್, ಗಂಡನಿಲ್ಲ ರಜೆ ಏಕೆ ಬೇಕು ಎಂದು ಪ್ರಶ್ನಿಸುತ್ತಾನಂತೆ. ಎಷ್ಟೇ ಬೇಡಿಕೊಂಡರೂ ಸಹ ರಜೆ ನೀಡುವುದಿಲ್ಲ. ಬಳಿಕ ನಿಮಗೆ ರಜೆ ಬೇಕೆಂದರೆ ಲಾಡ್ಜ್‌ಗೆ ಬರಬೇಕೆಂದು  ಮಹಿಳಾ ನೌಕರರಿಗೆ ಕಿರುಕುಳ‌ ನೀಡುತ್ತಾನಂತೆ.

ಸಿಸಿ ಕ್ಯಾಮರಾದಲ್ಲಿ ಲೈಂಗಿಕ ಕಿರುಕುಳ ಸೆರೆ: ಸದ್ಯ ಮಲ್ಲಿನಾಥನ ಲೈಂಗಿಕ ಕಿರಕುಳಕ್ಕೆ ಯಾವುದೇ ಆಧಾರ ಇಲ್ಲ ಎಂದು ಭಾವಿಸಬೇಡಿ. ಸ್ವತಃ ಮಲ್ಲಿಕಾರ್ಜುನ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ‌ ನೀಡುವ ದೃಶ್ಯ, ಕಚೇರಿಯಲ್ಲಿನ  ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಕಸಗೂಡಿಸುವ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿ, ಆಕೆಯ ಮೈ ಕೈ ಮುಟ್ಟುವ ದೃಶ್ಯ ಸಹ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಮಲ್ಲಿನಾಥ್ ವಿರುದ್ಧ ದೂರು ನೀಡಿದರೂ ಪ್ರಯೋಜನವಿಲ್ಲ: ಮಲ್ಲಿನಾಥನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳಾ ನೌಕರರು ಕಳೆದ 2019 ರಲ್ಲಿಯೇ ಸಿಸಿ ಕ್ಯಾಮೆರಾ‌ ಪುಟೇಜ್ ಸಹಿತ ದೂರು ನೀಡಿದ್ರೂ ಸಹ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಲೈಂಗಿಕವಾಗಿ ಬಳಸಿಕೊಳ್ಳುವ ಕಲ್ಲ ಮಲ್ಲಿನಾಥನ ಕಾಟಕ್ಕೆ ಬೇಸತ್ತು 2019ರಲ್ಲೇ‌ ಇಬ್ಬರು ಮಹಿಳಾ ಸಿಬ್ಬಂದಿ ದೂರು ನೀಡಿದ್ದು, ಕಲ್ಲಿನಾಥಗೆ  ಶೊಕಾಸ್ ನೋಟೀಸ್ ನೀಡಿ  ಅಂದಿನ ಎಸ್ಪಿ ಕೈ ತೊಳೆದುಕೊಂಡಿದ್ದಾರೆ. ಬಳಿಕ ಎಸ್ಪಿ ಬದಲಾದ‌ ನಂತರ ಮತ್ತೇ ಬಾಲ ಬಿಚ್ಚಿರೋ ಕಾಮುಕ ಮಲ್ಲಿನಾಥ, ದೂರು ನೀಡಿ 3 ವರ್ಷ ಕಳೆದರೂ ಆರೋಪಿ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ. ಬದಲಾಗಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹಿಂದಿನ ಡಿವೈಎಸ್ಪಿ ವರದಿ ನೀಡಿದ್ದಾರೆ.

ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್

ಇನ್ನು ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ್ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡುವುದು ಸಾಕ್ಷಿ ಸಮೇತ ಇದ್ದರೂ ಸಹ ಇಲ್ಲಿಯವರೆಗೂ ಯಾವುದೇ ಕ್ರಮ ಆಗದಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಈಗಿನ ಎಸ್ಪಿ ಅರುಣಾಂಗ್ಷು ಎಚ್ಚೇತ್ತು ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುವ ಎಸ್ಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮಲ್ಲಿನಾಥ್ ವಿರುದ್ದ ಕ್ರಮಕೈಗೊಂಡು, ಮಹಿಳಾ ಸಿಬ್ಬಂದಿ ನೆಮ್ಮದಿಯಿಂದ ಇರುವಂತೆ ಮಾಡಬೇಕಿದೆ.

click me!