
ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜು.25): ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿಯೋರ್ವಳು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಜಲವಳ್ಳ ಕರ್ಕಿಯ ನಿವಾಸಿ ವನಿತಾ ಮಂಜುನಾಥ ನಾಯ್ಕ (28) ಹಾಗೂ ಆಕೆಯ 2 ವರ್ಷದ ಪುತ್ರಿ ಮನಸ್ವಿ ಮೃತಪಟ್ಟಿದ್ದು, ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧಿಸಿ ಮೃತ ಮಹಿಳೆಯ ಸಹೋದರ ಚಿಕ್ಕನಕೋಡದ ನಿವಾಸಿ ದಯಾನಂದ ನಾಯ್ಕ ಹೊನ್ನಾವರ ಠಾಣೆಗೆ ದೂರು ನೀಡಿದ್ದಾರೆ.
ತನ್ನ ತಂಗಿಯ ಗಂಡ ಮಂಜುನಾಥ ಎಂಬಾತ ತಂಗಿಯ ಶೀಲದ ಮೇಲೆ ಸಂಶಯ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದಾನೆ. ತನ್ನ ತಂಗಿಗೆ ಎರಡನೇ ಹೆಣ್ಣು ಮಗು ಮನಸ್ವಿ ಹುಟ್ಟಿದ ಮೇಲೆ ಈ ಹೆಣ್ಣು ಮಗು ತನ್ನದಲ್ಲ, ಮತ್ತೆ ಸಹಾ ಹೆಣ್ಣು ಮಗು ಹುಟ್ಟಿದ್ದೆ. ಮಗುವನ್ನು ಕರೆದುಕೊಂಡು ಹೋಗಿ ಎಲ್ಲಿಯಾದರೂ ಬಾವಿಯಲ್ಲಿ ಹಾರಿ ಸಾಯಿರಿ ಎಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ದುಷ್ಪ್ರೇರಣೆ ನೀಡುತ್ತಾ ಬಂದಿದ್ದಾನೆ. ತನ್ನ ತಂಗಿಗೆ ನಾದಿನಿಯರು ಕೂಡಾ ಕಿರುಕುಳ ನೀಡಿ, ಬೈಯುತ್ತಿದ್ದರು.
Uttara Kannada; ಆರ್.ವಿ. ದೇಶ್‌ಪಾಂಡೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ
ಎರಡನೇ ಹೆಣ್ಣು ಮಗು ಹುಟ್ಟಿದ ಬಗ್ಗೆ ಸಂಶಯ ಮಾಡಿ ಹೀಯಾಳಿಸುತ್ತಿದ್ದರು. ಇವರೆಲ್ಲರೂ ಸೇರಿ ನನ್ನ ತಂಗಿಗೆ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ್ದರಿಂದಲೇ ತನ್ನ ತಂಗಿ ವನಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಯಾನಂದ ನಾಯ್ಕ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಕುರಿತಂತೆ ಆರೋಪಿಗಳಾದ ಮೃತಳ ಪತಿ ಮಂಜುನಾಥ ಈಶ್ವರ ನಾಯ್ಕ, ಮೃತಳ ಅತ್ತೆ ಸಾವಿತ್ರಿ ಈಶ್ವರ ನಾಯ್ಕ, ನಾದಿನಿಯರಾದ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಆಗಿಲ್ಲ? ಗಂಭೀರ ಕಾರಣ ಕೊಟ್ಟ ರೂಪಾಲಿ ನಾಯ್ಕ
ಮೃತರ ಶವವನ್ನು ಬಾವಿಯಿಂದ ಮೇಲಕ್ಕೆತ್ತಿದ ಬಳಿಕ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಆಸ್ಪತ್ರೆ ಮುಂದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮೃತರ ಸಂಬಂಧಿಗಳು ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಿ ಎಂದು ಆಗ್ರಹಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ್, ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಸಿಪಿಐ ಶ್ರೀಧರ್ ಎಸ್.ಆರ್. ಅವರಿಗೆ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ