ರಾಮನಗರ: ಕೌಟುಂಬಿಕ ಕಲಹ, ತಾಯಿ, ಮಗನ ದಾರುಣ ಸಾವು

By Girish Goudar  |  First Published Jan 14, 2023, 9:53 AM IST

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ, ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಮನಗರ ನಗರದ ಕುಮಾರಸ್ವಾಮಿ ‌ಲೇಔಟ್‌ನಲ್ಲಿ ನಡೆದ ಘಟನೆ. 


ರಾಮನಗರ(ಜ.14): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ, ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಮನಗರ ನಗರದ ಕುಮಾರಸ್ವಾಮಿ ‌ಲೇಔಟ್‌ನಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ತಾಯಿ ವಿಜಯಲಕ್ಷ್ಮಿ (50), ಮಗ ಹರ್ಷ(25) ಎಂಬುವರೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 

ರಾತ್ರಿ ಊಟ ಮಾಡುವ ವಿಚಾರವಾಗಿ ತಾಯಿ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಮನನೊಂದ ತಾಯಿ ವಿಜಯಲಕ್ಷ್ಮೀ ಮನೆಯ ಬಳಿಯ ಸಂಪಿಗೆ ಬಿದ್ದಿದ್ದಳು. ಆಸ್ಪತ್ರೆಗೆ ಸೇರಿಸುವಾಗ ತಾಯಿ ವಿಜಯಲಕ್ಷ್ಮೀ ಮೃತಪಟ್ಟಿದ್ದರು.

Tap to resize

Latest Videos

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಅರೆಸ್ಟ್‌

ಈ ವಿಚಾರ ತಿಳಿದು ತೀವ್ರವಾಗಿ ಮನನೊಂದ ಹರ್ಷ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ತಿಳಿದು ಬಂದಿದೆ. ಈ ಸಂಬಂಧ ಐಜೂರು‌ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. 

click me!