ಭೀಮಾ ನದಿಗೆ ಬಟ್ಟೆ ತೊಳೆಯಲು ಹೋದ ತಾಯಿ-ಮಗು ಸಾವು!

By Ravi Janekal  |  First Published Jul 1, 2023, 8:24 AM IST

ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಾಹನ ಸವಾರರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿ ನಡೆದಿದೆ.


ವಿಜಯಪುರ (ಜು.1) : ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಾಹನ ಸವಾರರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ಬಳಿ ನಡೆದಿದೆ.

ನಾಲತವಾಡ ನಿವಾಸಿಗಳಾದ ಸಂಗಪ್ಪ ಪೂಜಾರಿ(30) ಹಾಗೂ ಚಂದ್ರಶೇಖರ ತಾಳಿಕೋಟಿ(23) ಮೃತ ದುರ್ದೈವಿಗಳು. ವೇಗವಾಗಿ ಬೈಕ್ ಓಡಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ವಾಹನ ಸವಾರರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಗಾಯಗೊಂಡಿದ್ದಾನೆ. ಗಾಯಾಳು ಕಿಶೋರ್ ತಡಸದ ಸ್ಥಳೀಯರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

Tap to resize

Latest Videos

 

ಅಕ್ಕಲಕೋಟೆ ಬಳಿ ಭೀಕರ ಅಪಘಾತ: ಪಂಢರಪುರ ಯಾತ್ರೆಗೆ ಹೊರಟಿದ್ದ 7 ಜನರ ಸಾವು!

ಭೀಮಾ ನದಿಗೆ ಬಟ್ಟೆ ತೊಳೆಯಲು ಹೋದ ತಾಯಿ-ಮಗು ಸಾವು

ಇಂಡಿ: ಭೀಮಾ ನದಿಗೆ ಬಟ್ಟೆತೊಳೆಯಲೆಂದು ಹೋಗಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟದಾರುಣ ಘಟನೆ ತಾಲೂಕಿನ ಖೇಡಗಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಖೇಡಗಿ ಗ್ರಾಮದ ತಾಯಿ ಗೀತಾ ಹೊನ್ನೂರ (38) ಮತ್ತು ಮಗಳು ಶೋಭಾತಾಯಿ(12), ಮಗ ವಾಸುದೇವ(10) ನದಿಯಲ್ಲಿ ಮುಳುಗಿ ಮೃತಪಟ್ಟವರು. ತಾಯಿ-ಮಕ್ಕಳು ಸೇರಿ ಶುಕ್ರವಾರ ಬೆಳಗ್ಗೆ ಭೀಮಾ ನದಿಗೆ ಬಟ್ಟೆತೊಳೆಯಲೆಂದು ಹೋಗಿದ್ದರು. ಈ ವೇಳೆ ನದಿ ದಂಡೆ ಮೇಲೆ ಸ್ನಾನ ಮಾಡುತ್ತಿದ್ದಾಗ ವಾಸುದೇವ ಜಾರಿ ಬಿದ್ದಿದ್ದು, ತಮ್ಮನನ್ನು ರಕ್ಷಿಸಲು ಶೋಭಾ ಇಳಿದಿದ್ದಾಳೆ. ಇಬ್ಬರೂ ಮುಳುಗುತ್ತಿರುವುದನ್ನು ನೋಡಿ ತಾಯಿ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾಳೆ. ಆದರೆ, ಸಾಧ್ಯವಾಗದೆ ತಾಯಿ ಮತ್ತು ಮಕ್ಕಳು ಮೂವರೂ ನೀರು ಪಾಲಾಗಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಹೊಸಪೇಟೆ ಬಳಿ ಭೀಕರ ರಸ್ತೆ ಅಪಘಾತ, ಸಾವಿನ ಸಂಖ್ಯೆ 7ಕ್ಕೆ ಏರಿಕೆ!

click me!