ಬೆಂಗಳೂರು: ಆಂಧ್ರದಿಂದ ರೈಲಿನಲ್ಲಿ 20 ಕೇಜಿ ಗಾಂಜಾ ತಂದು ಸಿಕ್ಕಬಿದ್ದ ಪೆಡ್ಲರ್‌

By Kannadaprabha News  |  First Published Jul 1, 2023, 6:32 AM IST

ವಿಶಾಖಪಟ್ಟಣದ ಅರುಕ ವ್ಯಾಲಿ ತಾಲೂಕಿನ ವೆಂಕಟಾಲ ಸೀತಾರಾಮ್‌(55) ಬಂಧಿತ. ಆರೋಪಿಯಿಂದ .10 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ರೈಲಿನಲ್ಲಿ ಆಗಾಗ ಅಕ್ರಮವಾಗಿ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 


ಬೆಂಗಳೂರು(ಜು.01):  ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನೆರೆ ರಾಜ್ಯದ ಡ್ರಗ್ಸ್‌ ಪೆಡ್ಲರೊಬ್ಬನನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣದ ಅರುಕ ವ್ಯಾಲಿ ತಾಲೂಕಿನ ವೆಂಕಟಾಲ ಸೀತಾರಾಮ್‌(55) ಬಂಧಿತ. ಆರೋಪಿಯಿಂದ .10 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ರೈಲಿನಲ್ಲಿ ಆಗಾಗ ಅಕ್ರಮವಾಗಿ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಗಿರಿನಗರದಲ್ಲಿ ಬಚ್ಚಿಟ್ಟಿದ್ದ ₹50 ಲಕ್ಷ ಮೌಲ್ಯದ 95 ಕೆ.ಜಿ. ಗಾಂಜಾ ಜಪ್ತಿ !

ಆರೋಪಿಯು ಆಂಧ್ರಪ್ರದೇಶದಿಂದ ರೈಲಿನಲ್ಲಿ ಲಗೇಜಿನ ಒಳಗೆ ಗಾಂಜಾ ಬಚ್ಚಿಟ್ಟುಕೊಂಡು ನಗರಕ್ಕೆ ಬಂದು ಪರಿಚಿತ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜೂ.24ರಂದು ಕಾಟನ್‌ ಪೇಟೆ ಠಾಣೆ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹಿಂಬದಿ ದ್ವಾರದ ರಸ್ತೆಯಲ್ಲಿ ನಿಗಾವಹಿಸಿದ್ದರು. ಅದರಂತೆ ಆರೋಪಿಯು ರೈಲು ಇಳಿದು ಮಾಲು ಸಹಿತ ರೈಲು ನಿಲ್ದಾಣದ ಹಿಂಬದಿ ದ್ವಾರದ ರಸ್ತೆಯ ಬಳಿ ನಿಂತಿರುವಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಕ್ರಮವಾಗಿ ಗಾಂಜಾ ಮಾರಾಟ ದಂಧೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!