ಹೆಣ್ಣು ಮಗುವಿನ ಆರೋಗ್ಯ ಕ್ಷೀಣಗೊಂಡ ಬಳಿಕ ಅಲ್ಲಿ ದಾಖಲಿಸಲಾಗಿತ್ತು, ನಂತರ ಅಹಮದಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಎಂದೂ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ತಾಯಿಯಾಗಲು (Mother) ಬಹುತೇಕ ಮಹಿಳೆಯರು (Women) ಹಂಬಲಿಸುತ್ತಾರೆ. ಇನ್ನು, ಗರ್ಬಿಣಿಯಾದ (Pregnant) ಬಳಿಕ 9 ತಿಂಗಳ ಕಾಲ ಮಗುವನ್ನು (Baby) ತನ್ನ ಹೊಟ್ಟೆಯೊಳಗೆ (Womb) ಇಟ್ಟುಕೊಂಡು ಆ ಕಂದಮ್ಮ ಭೂಮಿಗೆ ಬರಲು ಕಾಯುತ್ತಿರುತ್ತಾರೆ. ಮಗು ಹುಟ್ಟಿದ ಬಳಿಕವಂತೂ ಸಂತಸಕ್ಕೆ ಪಾರವೇ ಇಲ್ಲ. ತನ್ನ ಮಗು ಒಂದು ಹನಿ ಕಣ್ಣೀರಿಟ್ಟರೂ ತಾಯಿ ಅದಕ್ಕಿಂತ ಹೆಚ್ಚು ದು:ಖ ಪಡ್ತಾರೆ. ಆದರೆ, ಗುಜರಾತ್‌ನಲ್ಲಿ (Gujarat) ನಡೆದಿರುವ ಘಟನೆ ಆಘಾತಕಾರಿ ಹಾಗೂ ಆಶ್ಚರ್ಯಕರವಾಗಿದೆ. ಗುಜರಾತ್‌ನ ಅಹಮದಾಬಾದ್‌ನ (Ahmedabad) ಅಸರ್ವದಲ್ಲಿ 23 ವರ್ಷದ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ. ಇದಕ್ಕೆ ಕಾರಣ ಏನು ಗೊತ್ತಾ..? ಈಕೆ ತನ್ನ ಹೆತ್ತ ಕಂದಮ್ಮನನ್ನೇ ಮೂರನೇ ಮಹಡಿಯಿಂದ (Third Floor) ಎಸೆದು ಕೊಂದಿದ್ದಾರೆಂದು. ಗುಜರಾತ್‌ನ ಅಹಮದಾಬಾದ್‌ನ ಸರ್ಕಾರಿ ಆಸ್ಪತ್ರೆ ಕಟ್ಟಡದ 3ನೇ ಮಹಡಿಯಿಂದ ಮಗುವನ್ನು ಎಸೆದು ಕೊಲೆ ಮಾಡಿದ್ದಾರೆ (Murder) ಎಂಬ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಹಮದಾಬಾದ್‌ನ ಅಸರ್ವದಲ್ಲಿ 1200 ಬೆಡ್‌ನ ಮೆಡಿಕಲ್ ಸೌಲಭ್ಯದಲ್ಲಿ ಭಾನುವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಹಿಳೆ ಆನಂದ್ ಜಿಲ್ಲೆಯ ಗ್ರಾಮವೊಂದರ ಮೂಲದವರು ಎಂದೂ ಅವರು ಹೇಳಿದ್ದಾರೆ. ಈ ಘಟನೆ ಬಳಿಕ ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಮಗುವಿನ ತಂದೆ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಈ ಮಗುವಿಗೆ 2 ತಿಂಗಳು 25 ದಿನಗಳಾಗಿತ್ತು. ಆದರೆ, ಮಗು ಹುಟ್ಟಿದಾಗಿನಿಂದ ಅದರ ಆರೋಗ್ಯ ಸರಿಯಾಗಿ ಇರುತ್ತಿರಲಿಲ್ಲ. ತನ್ನ ಮಗು ನೋವಿನಿಂದ ಬಳಲುತ್ತಿರುವುದನ್ನು ನೋಡಿದ ತಾಯಿ ನೊಂದುಕೊಂಡು ಈ ರೀತಿ ಮಾಡಿದ್ದಾರೆ ಎಂದು ಶಾಹಿಬಾಗ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: HailStorms in Spain: ಆಲಿಕಲ್ಲು ಬಿದ್ದು 20 ತಿಂಗಳ ಮಗು ಬಲಿ, 50 ಮಂದಿಗೆ ಗಾಯ: ನೆಟ್ಟಿಗರ ದಿಗ್ಭ್ರಮೆ
ಇತ್ತೀಚೆಗೆ ಮಗುವಿನ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಈ ಘಟನೆ ನಡೆದಿದೆ ಎಂದೂ ವಾರು ಹೇಳಿದರು. ಇನ್ನು, ಮಗು ಆಸ್ಪತ್ರೆಯಿಂದ ನಾಪತ್ತೆಯಾಗಿದೆ ಎಂದು ತಾಯಿ ಆರಂಭದಲ್ಲಿ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು ಎಂದೂ ಪೊಲೀಸರು ಹೇಳಿದ್ದಾರೆ.
ಆದರೆ, ಆರೋಪಿ ತಾಯಿ ತನ್ನ ಮಗುವನ್ನು ಕೈಗಳಲ್ಲಿ ಇಟ್ಟುಕೊಂಡು ಆಸ್ಪತ್ರೆಯ ಮೂರನೃ ಮಹಡಿಗೆ ಹೋಗಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಸೆರೆಯಾಗಿದೆ. ಹಾಗೂ, ಆಕೆ ವಾಪಸ್ ಬಮದಾಗ ಮಗು ಇರಲಿಲ್ಲ. ಈ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಮಗುವನ್ನು ಎಸೆದು ಕೊಲೆ ಮಾಡಿರುವ ತನ್ನ ಅಪರಾಧವನ್ನು ತಾಯಿ ಒಪ್ಪಿಕೊಂಡಿದ್ದಾರೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ನಿಗೂಢ ಕಾಯಿಲೆಗೆ ಮಗು ಬಲಿ : ಆತಂಕದಲ್ಲಿ WHO
ಮಗು ಹುಟ್ಟಿದ ತಕ್ಷಣವೇ ಅನಾರೋಗ್ಯಕ್ಕೀಡಾಗಿತ್ತು. ಹಾಗೂ ಗುಜರಾತ್‌ನ ವಡೋದರಾದ ಆಸ್ಪತ್ರೆಯಲ್ಲಿ ಅಪರೇಷನ್‌ಗೊಳಗಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆ ವೇಳೆ ವಡೋದರಾ ಆಸ್ಪತ್ರೆಯ ವೈದ್ಯರು ಮಗು ಕೊಳಕು ನೀರು ಕುಡಿದ ಕಾರಣ ಅನಾರೋಗ್ಯಕ್ಕೊಳಗಾಗಿತ್ತು ಎಂದು ಹೇಳಿರುವ ಬಗ್ಗೆ ಮೃತ ಮಗುವಿನ ತಂದೆ ಹೇಳಿದ್ದರು.
ಬಳಿಕ, ಮಗುವನ್ನು ಡಿಸೆಂಬರ್ 14 ರಂದು ನಡಿಯಾದ್‌ನಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಹೆಣ್ಣು ಮಗುವಿನ ಆರೋಗ್ಯ ಕ್ಷೀಣಗೊಂಡ ಬಳಿಕ ಅಲ್ಲಿ ದಾಖಲಿಸಲಾಗಿತ್ತು, ನಂತರ ಅಹಮದಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಎಂದೂ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ. ಅಲ್ಲದೆ, ಮಗು ನಾಪತ್ತೆಯಾಗಿದೆ ಎಂದು ತನ್ನ ಮಗು ದೂರಿದ ಬಳಿಕ ಆರೋಪಿ ಮಹಿಳೆಯ ಪತಿ ಹಾಗೂ ಕಂದಮ್ಮನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದೂ ಎಫ್ಐಆರ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಲಾರಿ ಚಾಲಕನ ಮದ್ಯದ ಅಮಲು ಚಟಕ್ಕೆ ಮಧ್ಯರಾತ್ರಿ ದುರಂತ, ಶೆಡ್‌ಗೆ ಲಾರಿ ಡಿಕ್ಕಿ ಹೊಡೆದು ಮಗು ಬಲಿ!