ತಾಳಿಕೋಟೆ ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‌ನಲ್ಲಿ ಆ.4ರಂದು 5ರ ಮಧ್ಯಾಹ್ನ 12 ಗಂಟೆಯವರೆಗೆ ಜಮೆಯಾಗಿದ್ದ 1,31,300 ಹಣವನ್ನು ಬಂಕಿನ ವ್ಯವಸ್ಥಾಪಕ ಮಹ್ಮದರಫೀಕ್ ಖಾದರಸಾ ಲಾಹೋರಿ ಎಂಬವರು ಆ.5 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕರ್ನಾಟಕ ಬ್ಯಾಂಕಿಗೆ ಹಣ ಜಮೆ ಮಾಡಲು ಬೈಕ್ ಮೇಲೆ ಹೊರಟ್ಟಿದ್ದಾಗ ಇನ್ನೊಂದು ಬೈಕ್ ಮೇಲೆ ಬಂದವು ವಿನಾಃಕಾರಣ ಜಗಳ ಮಾಡುತ್ತಾ ಇತ್ತ ಹಣ ದೋಚಿಕೊಂಡು ಪರಾರಿಯಾದ ಖದೀಮರು.
ತಾಳಿಕೋಟೆ(ಆ.10): ಪೆಟ್ರೋಲ್ ಪಂಪ್‌ನಲ್ಲಿ ಜಮೆಯಾದ ಹಣ ಬ್ಯಾಂಕಿಗೆ ಕಟ್ಟಲು ಹೊರಟಿದ್ದ ವ್ಯಕ್ತಿಯ ಮೈಮೇಲೆ ಬೈಕ್ ಹಾಯಿಸುವಂತೆ ಮಾಡಿ ಹಣವನ್ನು ಕಿತ್ತುಕೊಂಡು ಹೋಗಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‌ನಲ್ಲಿ ಆ.4ರಂದು 5ರ ಮಧ್ಯಾಹ್ನ 12 ಗಂಟೆಯವರೆಗೆ ಜಮೆಯಾಗಿದ್ದ 1,31,300 ಹಣವನ್ನು ಬಂಕಿನ ವ್ಯವಸ್ಥಾಪಕ ಮಹ್ಮದರಫೀಕ್ ಖಾದರಸಾ ಲಾಹೋರಿ ಎಂಬವರು ಆ.5 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕರ್ನಾಟಕ ಬ್ಯಾಂಕಿಗೆ ಹಣ ಜಮೆ ಮಾಡಲು ಬೈಕ್ ಮೇಲೆ ಹೊರಟ್ಟಿದ್ದಾಗ ಇನ್ನೊಂದು ಬೈಕ್ ಮೇಲೆ ಬಂದವು ವಿನಾಃಕಾರಣ ಜಗಳ ಮಾಡುತ್ತಾ ಇತ್ತ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ: ಬಂಧಿತರ ಬಳಿ ಇದ್ದ ಹಣ ದೋಚಿದ ಪೊಲೀಸರು
ಹಣ ದೋಚಿಕೊಂಡು ಹೋದ ಪ್ರಕಣರಕ್ಕೆ ಸಂಬಂಧಿಸಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾದ ವಿಭಾಗದ ಪಿಎಸ್‌ಐ ಆರ್.ಎಸ್.ಬಂಗಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಗೆ ಬಂಕ್‌ನ ವ್ಯವಸ್ಥಾಪಕ ಮಹ್ಮದರಫೀಕ್ ಲಾಹೋರಿ ದೂರು ನೀಡಿದ್ದಾರೆ.