'2000 ಮಹಿಳೆಯರ ಬಟ್ಟೆ ವಾಶ್ ಮಾಡು' ಲೈಂಗಿಕ ದೌರ್ಜನ್ಯ ಆರೋಪಿಗೆ ಷರತ್ತಿನ ಜಾಮೀನು!

By Suvarna NewsFirst Published Sep 24, 2021, 4:56 PM IST
Highlights

* ಅತ್ಯಾಚಾರದ ಆರೋಪಿಗೆ ವಿಶಿಷ್ಟ ಕಂಡಿಶನ್ ಮೇಲೆ ಜಾಮೀನು
* ಎರಡು ಸಾವಿರ ಮಹಿಳೆಯರ ಬಟ್ಟೆ ವಾಶ್ ಮಾಡಬೇಕು
*  ಸೋಪ್, ಡಿಟರ್ಜೆಂಟ್ ಆತನೇ ತಂದುಕೊಳ್ಳಬೇಕು 

ಪಾಟ್ನಾ(ಸೆ. 23)     ಬಿಹಾರದ ಮಧುಬಾನಿ ಜಿಲ್ಲಾ ನ್ಯಾಯಾಲಯ  ಒಂದು ವಿಶೇಷಷ ತೀರ್ಪು  ನೀಡಿದೆ.  ಅತ್ಯಾಚಾರದ ಆರೋಪಿಗೆ ಜಾಮೀನು ನೀಡಿದೆ ಆದರೆ  ಹಾಕಿರುವ ಕಂಡಿಶನ್ ಮಾತ್ರ ಹಿಂದೆಂದೂ ಕೇಳದಂತಹದ್ದು.

ಆರು ತಿಂಗಳ ಕಾಲ ಎರಡು ಸಾವಿರ ಮಹಿಳೆಯರ ಬಟ್ಟೆ ವಾಶ್ ಮಾಡುವುದು ಅಲ್ಲದೇ ಇಸ್ತ್ರಿ ಮಾಡಿ ಕೊಡಬೇಕು ಎಂದು ಕಂಡಿಶನ್ ಹಾಕಿ ಜಾಮೀನು ನೀಡಿದೆ. ಝಂಜರ್ಪುರ ಅಡಿಶನಲ್ ಜಡ್ಜ್ ಅವಿನಾಶ್ ಕುಮಾರ್ ಈ ಷರತ್ತು ವಿಧಿಸಿದ್ದಾರೆ. ಲಲನ್ ಕುಮಾರ್ ಎಂಬ ಆರೋಪಿ ಇನ್ನು ಮುಂದೆ ಬಟ್ಟೆ ವಾಶ್ ಮಾಡುವ ಕೆಲಸ ಮಾಡಬೇಕಾಗುತ್ತದೆ.

ಡಿಫೆನ್ಸ್ ವಕೀಲ  ಪರಶುರಾಮ್ ಮಿಶ್ರಾ  ನ್ಯಾಯಾಲಯದ ಆದೇಶದ ನಂತರ ವಿವರಣೆ ನೀಡಿದರು. . ಏಪ್ರಿಲ್ 17 ರ ರಾತ್ರಿ ಲಾಲನ್ ತನ್ನ ಹಳ್ಳಿಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂಬ ಆರೋಪ ಇದೆ.  ಸಂತ್ರಸ್ತೆಯು ಒಂದು ದಿನದ ನಂತರ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಆತನನ್ನು ಏಪ್ರಿಲ್ 19 ರಂದು ಬಂಧಿಸಲಾಯಿತು. ಅಂದಿನಿಂದ, ಆತನು ಅಲ್ಲಿಯೇ ಇದ್ದನು ಜೈಲಿನಲ್ಲಿಯೇ ಇದ್ದಾನೆ.

ನಾವು ಎಡಿಜೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಜೈಲಿನಲ್ಲಿ ಅವರ ಉತ್ತಮ ನಡವಳಿಕೆ ಮತ್ತು ನ್ಯಾಯಾಲಯದಲ್ಲಿ ಕ್ಷಮೆಯಾಚನೆಯ ದೃಷ್ಟಿಯಿಂದ, ನನ್ನ ಕಕ್ಷಿದಾರರಿಗೆ 2,000 ಮಹಿಳೆಯರ ಬಟ್ಟೆ ಒಗೆಯುವ ಷರತ್ತಿನ ಮೇಲೆ ಜಾಮೀನು ನೀಡಿದ್ದಾರೆ ಎಂದು ತಿಳಿಸಿದರು.

ಪತ್ನಿ ಮತ್ತು ನಾದಿನಿ ಕೊಲೆ ಮಾಡಿದ್ದ ವೀಣಾವಾದಕ

ನ್ಯಾಯಾಲಯವು ಜಾಮೀನಿನ ಪ್ರತಿಯನ್ನು ಹಳ್ಳಿಯ ಮುಖ್ಯಸ್ಥ ನಾಸೀಮಾ ಖಾತೂನ್ ಅವರಿಗೂ ಕಳುಹಿಸಿಕೊಟ್ಟಿದೆ. ಈತನ ಮೇಲೆ ನಿಗಾ ಇಡಲು ತಿಳಿಸಿದೆ. ಬಟ್ಟೆ ವಾಶ್ ಮಾಡಲು ಲಲನ್ ಕುಮಾರ್ ನೇ  ಡಿಟರ್ಜೆಂಟ್ ಪೌಡರ್, ಸೋಪ್ ಖರೀದಿ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯ ಈ ರೀತಿಯ ತೀರ್ಪು ನೀಡಿ ಮಹಿಳೆಯರ  ಗೌರವ ಹೆಚ್ಚು ಮಾಡಿದೆ. ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಆರೋಪಿಗಳ ದೈನಂದಿನ ಕೆಲಸವನ್ನು ನಾನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತೇನೆ. ನಮ್ಮ ಗ್ರಾಮದಲ್ಲಿ 425 ಮಹಿಳೆಯರಿದ್ದಾರೆ ಮತ್ತು 2,000 ಸಂಖ್ಯೆಯನ್ನು ಸಾಧಿಸುವವರೆಗೆ ಪ್ರತಿಯೊಬ್ಬ ಮಹಿಳೆಯರು ಬಟ್ಟೆ ನೀಡುತ್ತಾರೆ  ಎಂದು ಗ್ರಾಮದ ಮುಖ್ಯಸ್ಥ ಹೇಳುತ್ತಾರೆ.

click me!