ಸಾಹಿಲ್​ನ ಬಲೆಗೆ ಬಿದ್ದ 12 ಬಾಲೆಯರು ಕೊನೆಗೆ ಕಂಡದ್ದು ಪೋ* ವೆಬ್​ಸೈಟ್​ನಲ್ಲಿ! ಪೊಲೀಸರು ಗಪ್​ಚುಪ್?

Published : May 05, 2025, 05:33 PM ISTUpdated : May 05, 2025, 06:25 PM IST
ಸಾಹಿಲ್​ನ ಬಲೆಗೆ ಬಿದ್ದ 12 ಬಾಲೆಯರು ಕೊನೆಗೆ ಕಂಡದ್ದು  ಪೋ* ವೆಬ್​ಸೈಟ್​ನಲ್ಲಿ! ಪೊಲೀಸರು ಗಪ್​ಚುಪ್?

ಸಾರಾಂಶ

ಹದಿಹರೆಯದ ಹುಡುಗಿಯರನ್ನು ಆಮಿಷವೊಡ್ಡಿ, ದುಬಾರಿ ಉಡುಗೊರೆಗಳನ್ನು ನೀಡಿ, ಲೈಂಗಿಕವಾಗಿ ಬಳಸಿಕೊಂಡು, ವಿಡಿಯೋಗಳನ್ನು ಅಂತರಾಷ್ಟ್ರೀಯ ಅಶ್ಲೀಲ ತಾಣಗಳಲ್ಲಿ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಸಾಹಿಲ್ ಎಂಬಾತನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತೆ ಗುಲ್ಶನ್ ಖಾತೂನ್ ಸಹಾಯದಿಂದ ಹಲವು ಹಿಂದೂ ಯುವತಿಯರನ್ನು ಬಲಿಪಶು ಮಾಡಿದ್ದ. ಪೊಲೀಸರ ನಿರ್ಲಕ್ಷ್ಯದಿಂದ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ಮುಂದುವರೆದಿದೆ.

ಹುಚ್ಚು ಖೋಡಿ ಮನಸು... 16ರ ವಯಸು... ಎನ್ನುವುದು ನಿಜವೆ! ಈ ವಯಸ್ಸಿನ ಆಸುಪಾಸು ತಾವು ಏನು ಮಾಡುತ್ತಿದ್ದೇವೆ ಎನ್ನುವ ಅರಿವೇ ಇರುವುದಿಲ್ಲ. ಕಾಮಾಸಕ್ತಿ ಹೆಚ್ಚುವ ವಯಸ್ಸು ಇದು. ಯಾವುದೋ ಒಬ್ಬ ಸುಂದರ ಯುವಕ, ದುಬಾರಿ ಬೈಕ್​ನಲ್ಲೋ, ಕಾರಿನಲ್ಲೋ ಬಂದು, ಕೂದಲನ್ನು ಸಿನಿಮಾ ​ ಹೀರೋ ರೀತಿಯಲ್ಲಿ ಡಿಸೈನ್​ ಮಾಡಿಕೊಂಡು ಬಂದು ನಿಂತರೆ ಸಾಕು, ಕೆಲವು ಹುಡುಗಿಯರಿಗೆ ಹುಚ್ಚು ಹೆಚ್ಚಾಗಿ ಬಿಡುತ್ತದೆ. ಅವರು ಯಾರು, ಏನು, ಎತ್ತ ಎಂದು ನೋಡದೇ ಅವರ ಬಲೆಗೆ ಬಿದ್ದು ಬಿಡುತ್ತಾರೆ. ಇಂಥ ದುಬಾರಿ ವಾಹನ ಇರುವವ ಖಂಡಿತವಾಗಿಯೂ ಶ್ರೀಮಂತನೇ ಇರಬೇಕು ಎನ್ನುವ ಕಲ್ಪನೆಯೂ ಇದಕ್ಕೆ ಕಾರಣವಾಗಿ ಬಿಡುತ್ತದೆ. ಅದಕ್ಕೆ ತಕ್ಕಂತೆ ಆ ಹುಡುಗರು ಕೂಡ ಆರಂಭದಲ್ಲಿ ದುಬಾರಿ ಗಿಫ್ಟ್​ ಕೊಟ್ಟು ಇವರನ್ನು ಮರುಳು ಮಾಡಿಬಿಡುತ್ತಾರೆ. ಕೊನೆಗೆ ಆಗುವುದೆಲ್ಲವೂ ದುರಂತವೇ...

ಇದು ಇಂದು ನಿನ್ನೆಯ ಕಥೆ, ಹಲವು ದಶಕಗಳಿಂದಲೂ ಹೀಗೆ ನಡೆದುಕೊಂಡೇ ಬಂದಿದೆ. ಹುಡುಗಿಯರನ್ನು ಸುಲಭದಲ್ಲಿ ಬುಟ್ಟಿಗೆ ಹಾಕಿಕೊಳ್ಳುವ ಇಂಥ ಹುಡುಗರು, ಕೊನೆಗೆ ಹೋಟೆಲ್​, ಪಾರ್ಟಿ ಎಂದೆಲ್ಲಾ ಕರೆದುಕೊಂಡು ಹೋಗಿ ಅವರನ್ನು ಬಳಸಿಕೊಂಡು, ಅದರ ವಿಡಿಯೋ ಮಾಡಿ, ಬ್ಲ್ಯಾಕ್​ಮೇಲ್​ ಮಾಡುವುದು ಒಂದೆಡೆಯಾದರೆ, ಅದನ್ನು ಪೋ* ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿ ಹಣ ಗಳಿಸುವುದು ಇನ್ನೊಂದೆಡೆ. ಈಗ ಆ ಹುಡುಗಿಯರಿಗೆ ಇರುವುದು ಸಾವೊಂದೇ ದಾರಿ ಎನ್ನುವ ಸ್ಥಿತಿ. ಇಲ್ಲೊಂದು ಕುತೂಹಲದ ಸಂಗತಿಯೂ ಇದೆ. ಅದೇನೆಂದರೆ, ಇಂಥ ಆಮಿಷ, ಆಸೆಗಳಿಗೆ ಒಳಗಾಗಿ ಎಲ್ಲವನ್ನೂ ಕಳೆದುಕೊಳ್ಳುವ ಹುಡುಗಿಯರ ಪೈಕಿ ಹಿಂದೂ ಹುಡುಗಿಯರ ಸಂಖ್ಯೆಯೇ ಅತ್ಯಧಿಕ ಎನ್ನುವುದು. ಕೊನೆಗೆ ಅಂಥವನ ಜೊತೆ ಅನಿವಾರ್ಯವಾಗಿ ಮದುವೆಯಾಗಿ ಮತಾಂತರ ಆಗಿರುವ ಉದಾಹರಣೆಗಳೂ ಸಾಕಷ್ಟಿವೆ.  ಇಲ್ಲವೇ ಕೊನೆಯವರೆಗೂ ಹಿಂಸೆ ಅನುಭವಿಸಿ ನರಳಿ ನರಳಿ ಸಾಯುವುದೇ ಅವರಿಗೆ ಇರುವ ಮಾರ್ಗ! 

ಶಂಕರ್​ನಾಗ್​ ನಿಗೂಢ ಸಾವಿನ ರಹಸ್ಯ ತೆರೆದಿಟ್ಟ ಈ ವಿಡಿಯೋ: ಅಂದು ಆಗಿದ್ದೇನು?

ಇದೀಗ ಅಂಥದ್ದೇ ಒಂದು ಘಟನೆಯಲ್ಲಿ ಬಿಹಾರದ ವೈಶಾಲಿಯಲ್ಲಿ ಮೊಹಮ್ಮದ್ ಸಾಹಿಲ್ ಎಂಬ ವ್ಯಕ್ತಿ ಡಜನ್​ಗಟ್ಟಲೆ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿ ಅವರ ವಿಡಿಯೋ ಮಾಡಿಕೊಂಡು ಅಂತರರಾಷ್ಟ್ರೀಯ ಅಶ್ಲೀಲ ತಾಣಗಳಲ್ಲಿಯೂ ಮಾರಾಟ ಮಾಡುತ್ತಿದ್ದ. ಈತನಿಗೆ ನೆರವಾಗುತ್ತಿದ್ದುದು ಈತನ ಸ್ನೇಹಿತೆ ಗುಲ್ಶನ್ ಖಾತೂನ್. ಇವಳು ಕೂಡ ವೀಕ್​ ಮೈಂಡ್​ ಇರೋ, ಸುಲಭದಲ್ಲಿ ಆಮಿಷಕ್ಕೆ ಒಳಗಾಗುವ ಹಿಂದೂ ಹುಡುಗಿಯರನ್ನು ಟಾರ್ಗೆಟ್​ ಮಾಡಿ, ಮೊಹಮ್ಮದ್ ಸಾಹಿಲ್​ನ ಪರಿಚಯ ಮಾಡಿಸಿ ಕೊನೆಗೆ ವಿಡಿಯೋ ಮಾಡುವ ಮಟ್ಟಿಗೆ ಕರೆದೊಯ್ಯುತ್ತಿದ್ದಳು! ಕೊನೆಗೂ ಈಗ ಈ ಪಾಪಿ ಸಿಕ್ಕಿಬಿದ್ದಿದ್ದಾನೆ!

 ಬಿಹಾರ ಪೊಲೀಸರ ಪ್ರಕಾರ, ಮೊಹಮ್ಮದ್ ಸಾಹಿಲ್ ಇಂಥ ಯುವತಿಯರನ್ನು ಟಾರ್ಗೆಟ್​  ಮಾಡಿಕೊಂಡು, ಬಲೆಗೆ ಬಿಳಿಸಿಕೊಂಡು   ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ಹಣ ಸಂಪಾದಿಸಿದ್ದ. ಅವನು ಯಾವ ಅಶ್ಲೀಲ ಸೈಟ್‌ಗಳಲ್ಲಿ ಅದನ್ನು ಮಾರಾಟ ಮಾಡಿದ್ದಾನೆ ಮತ್ತು ಎಷ್ಟು ಹಣವನ್ನು ಶುಲ್ಕ ವಿಧಿಸಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಸದ್ಯ ಪ್ರಯತ್ನಿಸುತ್ತಿದ್ದಾರೆ. ಈ ವೆಬ್​ಸೈಟ್​ಗಳು ಯಾವ ದೇಶಗಳಿಂದ ನಡೆಸಲಾಗುತ್ತಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ವಿಚಿತ್ರ ಎಂದರೆ, ಇವನ ಬಲೆಗೆ ಬಿದ್ದವರಿಲ್ಲಿ ಅಪ್ರಾಪ್ತೆಯರೂ ಇದ್ದಾರೆ!  ಯಾರೋ ಒಬ್ಬರು ಧೈರ್ಯ ಮಾಡಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಾಗ ವಿಷಯ ಬಹಿರಂಗಗೊಂಡಿದೆ. ಈ ಬಗ್ಗೆ ಪೊಲೀಸರ ಮೇಲೆಯೂ ಸಂದೇಹ ಬರುವಂಥ ಘಟನೆ ನಡೆದಿದೆ. ಅದೇನೆಂದರೆ, ಸಂತ್ರಸ್ತೆ ಯುವತಿಯ ಪಾಲಕರು ಪೊಲೀಸರಲ್ಲಿ ಈ ಬಗ್ಗೆ ದೂರು ನೀಡಿದರೂ, ಇದುವರೆಗೆ ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿಲ್ಲ ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಇದರಿಂದ ಬೇಸತ್ತ  ಕುಟುಂಬ ಮಾಧ್ಯಮಗಳಿಗೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ! 

ಸ್ಥಳೀಯ ಡಿಎಸ್ಪಿ ಅಬು ಜಾಫರ್ ಆಲಂ ಅವರ ಪ್ರಕಾರ, ವಿಡಿಯೋವನ್ನು ವೈರಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ದೂರು ನೀಡಿರುವ ಸಂತ್ರಸ್ತೆ   ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದಳು, ಅಲ್ಲಿ ಅವಳು ಗುಲ್ಶನ್ ಖಾತೂನ್ ಜೊತೆ ಸ್ನೇಹ ಬೆಳೆಸಿದಳು. ಗುಲ್ಶನ್ ಖಾತೂನ್ ಅವರನ್ನು ಭೇಟಿಯಾಗಲು ಮೊಹಮ್ಮದ್ ಸಾಹಿಲ್ ಆಗಾಗ ಬರುತ್ತಿದ್ದರು. ಈ ಸಮಯದಲ್ಲಿ, ಗುಲ್ಶನ್ ಸ್ವತಃ ಸಾಹಿಲ್ ನನ್ನು ಆ ಹುಡುಗಿಗೆ ಪರಿಚಯಿಸಿದನು. ಕ್ರಮೇಣ ಅವಳು ಸಾಹಿಲ್ ನ ಬಲೆಗೆ ಬಿದ್ದಳು. ಅವಳು ಸಾಹಿಲ್ ಜೊತೆ ಹಲವು ಛಾಯಾಚಿತ್ರಗಳನ್ನು ತೆಗೆದುಕೊಂಡಳು ಮತ್ತು ಸೆಲ್ಫಿಗಳನ್ನು ಸಹ ತೆಗೆದುಕೊಂಡಳು. ಇದಾದ ನಂತರ, ಸಾಹಿಲ್ ಅವಳನ್ನು ಹೋಟೆಲ್‌ಗೆ ಕರೆದೊಯ್ದನು ಮತ್ತು ಅವರಿಬ್ಬರ ನಡುವೆ 'ಸಂಬಂಧ' ಬೆಳೆಯಿತು. ಈ ಸಮಯದಲ್ಲಿ ಸಾಹಿಲ್ ವೀಡಿಯೊಗಳನ್ನು ಮಾಡಿದ. ಆ ವಿಡಿಯೋ ತೋರಿಸಿ ಹುಡುಗಿಯನ್ನು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ. 

ಮದ್ವೆ ಹೆಸ್ರಲ್ಲಿ 12 ಮಂದಿಗೆ ಟೋಪಿ ಹಾಕಿದ 21ರ ಖತರ್ನಾಕ್​ ಲೇಡಿ ಭಯಾನಕ ಸ್ಟೋರಿ ಕೇಳಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ