ಮೀನು ಹೆಸರಲ್ಲಿ ಅಕ್ರಮ ಸಾಗಾಟ; ಧಾರವಾಡ ಸಮೀಪ ಬರೋಬ್ಬರಿ 1 ಟನ್ ಗೋಮಾಂಸ ವಶ! ಬಜರಂಗದಳ ಪತ್ತೆ ಹಚ್ಚಿದ್ದು ಹೇಗೆ?

Published : May 05, 2025, 05:55 AM IST
ಮೀನು ಹೆಸರಲ್ಲಿ ಅಕ್ರಮ ಸಾಗಾಟ; ಧಾರವಾಡ ಸಮೀಪ ಬರೋಬ್ಬರಿ 1 ಟನ್ ಗೋಮಾಂಸ ವಶ! ಬಜರಂಗದಳ ಪತ್ತೆ ಹಚ್ಚಿದ್ದು ಹೇಗೆ?

ಸಾರಾಂಶ

ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1 ಟನ್‌ ಗೋಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಧಾರವಾಡ (ಮೇ.5): ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1 ಟನ್‌ ಗೋಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಶನಿವಾರ ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೂಲಕ ಗೂಡ್ಸ್‌ ವಾಹನದಲ್ಲಿ ಈ ಗೋಮಾಂಸ ಸಾಗಿಸಲಾಗುತ್ತಿತ್ತು. ಬೆಳಗಾವಿಯಿಂದ ಮಂಗಳೂರಿಗೆ ಇದನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು, ನರೇಂದ್ರ ಬೈಪಾಸ್‌ನಿಂದ ವಾಹನದ ಬೆನ್ನು ಹತ್ತಿದರು. ಆದರೆ, ವಾಹನದ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿ, ಮನಸೂರ ರಸ್ತೆವರೆಗೂ ಆಗಮಿಸಿ, ಕೊನೆಗೆ ಭಯದಿಂದ ವಾಹನವನ್ನು ರಸ್ತೆ ಪಕ್ಕದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಇಡೀ ವಾಹನದಲ್ಲಿ ಅಕ್ರಮ ಗೋಮಾಂಸ ತುಂಬಿಸಲಾಗಿತ್ತು. ತಪಾಸಣೆ ಸಮಯದಲ್ಲಿ ಗೊತ್ತಾಗದಿರಲಿ ಎಂಬ ಕಾರಣಕ್ಕೆ ಮುಂದಿನ ಒಂದೆರಡು ಸಾಲಿನಲ್ಲಿ ಮೀನುಗಳನ್ನು ಇಡಲಾಗಿತ್ತು. ತಕ್ಷಣವೇ ಈ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ವಾಹನ ಹಾಗೂ ಒಂದು ಟನ್‌ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ಆಟೋ, ಕಾರು ಆಯ್ತು ಇದೀಗ KSRTC ಬಸ್ಸಿನಲ್ಲೇ ಗೋಮಾಂಸ ಸಾಗಣೆ!

ಹೇಗೆ ಗೊತ್ತಾಯ್ತು?

  • ಶನಿವಾರ ತಡರಾತ್ರಿ ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಣೆ
  • ಬಜರಂಗದಳ ಕಾರ್ಯಕರ್ತರಿಗೆ ಖಚಿತ ಮಾಹಿತಿ. ವಾಹನದ ಬೆನ್ನುಹತ್ತಿದ ಕಾರ್ಯಕರ್ತರು
  • ಹುಬ್ಬಳ್ಳಿ- ಧಾರವಾಡ ಬೈಪಾಸ್‌ ರಸ್ತೆಯಲ್ಲಿ ಚೇಸ್‌. ವಾಹನ ಬಿಟ್ಟು ಪರಾರಿಯಾದ ಚಾಲಕ
  • ತಪಾಸಣೆ ವೇಳೆ ಬಚಾವಾಗಲು ಮೊದಲ 2 ಸಾಲಿನಲ್ಲಿ ಮೀನು ತುಂಬಿದ್ದ ಸಾಗಣೆದಾರರು
  • ಸ್ಥಳಕ್ಕೆ ಆಗಮಿಸಿ ಒಂದು ಒಂದು ಟನ್‌ ಗೋಮಾಂಸವನ್ನು ಜಪ್ತಿ ಮಾಡಿದ ಪೊಲೀಸರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!