ಕೆಲಸವಿಲ್ಲದ ಕಾರಣ ಬಿಲ್ಡಿಂಗ್‌ನಿಂದ ಹಾರಿದ ಮಾಡೆಲ್

By Suvarna News  |  First Published Jun 30, 2021, 12:27 AM IST

* ಕೊರೋನಾ ಲಾಕ್  ಪರಿಣಾಮ ಕೆಲಸವಿಲ್ಲದೆ ಕಂಗಾಲಾಗಿದ್ದ ರುಫದರ್ಶಿ
* ಮನನೊಂದು ಆತ್ಮಹತ್ಯೆಗೆ ಶರಣು
* ಸಹೋದರಿಯ ಮನೆಯಲ್ಲಿ ವಾಸವಿದ್ದಳು
* ಮುಂಬೈನಲ್ಲಿ ವೃತ್ತಿಜೀವನ ಕಂಡುಕೊಳ್ಳುವ ಆಸೆಯಲ್ಲಿದ್ದಳು


ನವದೆಹಲಿ(ಜೂ.  29)   ಲಾಕ್‍ಡೌನ್ ನಿಂದಾಗಿ ಮನೆಯಲ್ಲಿಯೇ ಇದ್ದು ಕೆಲಸವಿಲ್ಲದೆ ಪೊರದಾಡುತ್ತಿದ್ದ  ರೂಪದರ್ಶಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಿಯಾ ( ಭಾವನಾ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್‍ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು, ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ವೃತ್ತಿ ಜೀವನ ಚೇತರಿಕೆ ಕಾಣುತ್ತಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರು.

Tap to resize

Latest Videos

undefined

ಬೆಂಗಳೂರಿನಲ್ಲೊಂದು ಸಿಕ್ಸ್ ಪ್ಯಾಕ್ ವಂಚನೆ

ಎರಡನೇ ಸಾರಿ ಲಾಕ್‍ಡೌನ್ ಘೋಷಣೆಯಾದಾಗ ಪ್ರಿಯಾ ಗ್ರೇಟರ್ ನೋಯ್ಡಾದಲ್ಲಿರುವ ಸೋದರಿ ಬಳಿ ಬಂದು, ಅಲ್ಲಿಯೇ ಉಳಿದುಕೊಂಡಿದ್ದರು. ತನ್ನ ನೋವನ್ನು ಅನೇಕ ಸಾರಿ ಹೇಳಿಕೊಂಡಿದ್ದರು.

ಸೋಮವಾರ ರಾತ್ರಿ ಬಾಲ್ಕನಿಗೆ ಬಂದ ಪ್ರಿಯಾ 14ನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಪ್ರಿಯಾಳನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಯಾವುದೆ ಡೆತ್ ನೋಟ್ ಸಿಕ್ಕಿಲ್ಲ.

click me!