ಅತಿಯಾಗಿ ಮೊಬೈಲ್ ಬಳಸುತ್ತಿದ್ದದಕ್ಕೆ ಪಾಸ್‌ವರ್ಡ್ ಹಾಕಿದ ತಮ್ಮ, ಮನನೊಂದ ಅಕ್ಕ ನೇಣಿಗೆ ಶರಣು!

By Gowthami K  |  First Published Nov 12, 2022, 8:03 PM IST

ಅಕ್ಕನಿಗೆ  ಅತಿಯಾದ ಮೊಬೈಲ್ ಮೋಹ, ತಮ್ಮ ಮೊಬೈಲ್  ಬಳಸದಂತೆ ಪಾಸ್ ವರ್ಡ್ ಹಾಕಿದ ಇದರಿಂದ ಮನನೊಂದ  ಅಕ್ಕ ನೇಣಿಗೆ ಶರಣಾಗಿದ್ದಾಳೆ. ದೊಡ್ಡಬಳ್ಳಾಪುರ  ನಗರದ  ಗಾಣಿಗರಪೇಟೆಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ  19 ವರ್ಷದ ರುಚಿತಾ  ನೇಣಿಗೆ ಶರಣಾಗಿದ್ದಾಳೆ.


ದೊಡ್ಡಬಳ್ಳಾಪುರ (ನ.12): ಅಕ್ಕನಿಗೆ  ಅತಿಯಾದ ಮೊಬೈಲ್ ಮೋಹ, ತಮ್ಮ ಮೊಬೈಲ್  ಬಳಸದಂತೆ ಪಾಸ್ ವರ್ಡ್ ಹಾಕಿದ ಇದರಿಂದ ಮನನೊಂದ  ಅಕ್ಕ ನೇಣಿಗೆ ಶರಣಾಗಿದ್ದಾಳೆ. ದೊಡ್ಡಬಳ್ಳಾಪುರ  ನಗರದ  ಗಾಣಿಗರಪೇಟೆಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ  19 ವರ್ಷದ ರುಚಿತಾ  ನೇಣಿಗೆ ಶರಣಾಗಿದ್ದಾಳೆ, ಮೃತ ಯುವತಿ ಜಾಲಪ್ಪ ಕಾಲೇಜ್ ನಲ್ಲಿ ಪಿಯುಸಿ ವ್ಯಾಸಂಗ  ಮಾಡುತ್ತಿದ್ದಳು, ಮನೆಯಲ್ಲಿ ಅತಿ ಹೆಚ್ಚು  ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು, ಮೊಬೈಲ್  ಚಟದಿಂದ ದೂರ ಮಾಡುವ ಕಾರಣಕ್ಕೆ  ಆಕೆಯ ಸಹೋದರ ಮೊಬೈಲ್ ಗೆ ಪಾಸ್ ವರ್ಡ್ ಹಾಕಿದ್ದಾನೆ, ಇದೇ ವಿಚಾರಕ್ಕೆ  ಅಕ್ಕ ತಮ್ಮ ನ ನಡುವೆ ಜಗಳ ಹಾಗಿದೆ, ಇದರಿಂದ ಬೇಸತ್ತ  ಅಕ್ಕ ಮನೆಯ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ.  ದೊಡ್ಡಬಳ್ಳಾಪುರ  ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. ತಮ್ಮ ಮಗಳು‌ ಸಾವನ್ನಪ್ಪುತ್ತಿದ್ದಂತೆ ಕೆಲವು ಸ್ನೇಹಿತರು ಮಗಳ ಕಣ್ಣುಗಳನ್ನು ದಾನ ಮಾಡುವಂತೆ ಸೂಚನೆ ನೀಡಿದ್ದು, ಇದರಂತೆ ಆರ್.ರುಚಿತ ಅವರ ಕಣ್ಣುಗಳನ್ನು ಅವರ  ಕುಟುಂಬದವರು  ಡಾ.ರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆ ಮೆರೆಯುವಂತೆ  ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಜಮಖಂಡಿ : ನಗರದ ಕಡಪಟ್ಟಿಬಳಿ ಬಸವೇಶ್ವರನಗರದಲ್ಲಿ ವಿದ್ಯಾರ್ಥಿಯೊಬ್ಬನು ರೂಮಿನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದ ಪ್ರಣಯ ಮಲ್ಲನ್ನವರ (18) ವಿದ್ಯಾರ್ಥಿ ಸ್ಥಳೀಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ಸಿ ವಿಜ್ಞಾನ ವಿಭಾಗದ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬರುತ್ತದೆ.

Tap to resize

Latest Videos

ಕಾಲೇಜಿನಯ ಪಕ್ಕದಲ್ಲಿನ ಮೂರು ಅಂತಸ್ತಿನ ಕಟ್ಟಡದ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ವಿದ್ಯಾರ್ಥಿಯು ಎನ್‌ಸಿಸಿ ಯಲ್ಲಿ ಭಾಗಿವಹಿಸುತ್ತಿದ್ದು,ತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಪ್ರಣಯ ಮಲ್ಲನ್ನವರ ಸ್ನೇಹಿತರು ಹಾಗೂ ಕುಟುಂಬ ಸ್ಥರ ಅಕ್ರಂದನ ಮುಗಿಲುಮುಟ್ಟುವಂತಾಗಿತು.ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Shivamogga Murder: ಮೊಬೈಲ್‌ ಚಾರ್ಜಿಂಗ್‌ ವಿಚಾರಕ್ಕೆ ಗಲಾಟೆ: ಓರ್ವ ಸಾವು

ಧರ್ಮಸ್ಥಳದಲ್ಲಿ ನೆಲಮಂಗಲ ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ನೆಲಮಂಗಲದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ನೆಲಮಂಗಲ ನಿವಾಸಿ ಉಮೇಶ (55) ಎಂದು ಗುರುತಿಸಲಾಗಿದೆ.

BELAGAVI ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು, ಮಗಳಿಂದ ಲಾಕಪ್ ಡೆತ್ ಆರೋಪ, ಪ್ರಕರಣ ಸಿಐಡಿಗೆ ವರ್ಗ

ಶುಕ್ರವಾರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪೊಲೀಸ್‌ ಠಾಣೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದಲ್ಲಿ ಪತ್ತೆಯಾದ ಚೀಟಿಯಲ್ಲಿ ಬರೆದಿದ್ದ ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ಇವರ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

click me!