
ಬೆಂಗಳೂರು (ಮಾ.02): ಅಕ್ರಮ ರಿವಾಲ್ವರ್ ಹೊಂದಿದ್ದ ಆರೋಪ ಪ್ರಕರಣದಡಿಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸೋಮಶೇಖರ್ ರೆಡ್ಡಿ ಅವರು ದೋಷಿಯಾಗಿದ್ದಾರೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ.
ಶಾಸಕ ಸೋಮಶೇಖರರೆಡ್ಡಿ ಅವರು ಅನಧಿಕೃತವಾಗಿ ರಿವಾಲ್ವರ್ ಹೊಂದಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಕುರಿತು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸೋಮಶೇಖರ್ ರೆಡ್ಡಿ ಅವರನ್ನು ದೋಷಿ ಎಂದು ತೀರ್ಮಾನಿಸಿ ಆದೇಶ ನೀಡಲಾಗಿತ್ತು. ಈ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿದ್ದ ಸೋಮಶೇಖರ್ ರೆಡ್ಡಿ ಜನಪ್ತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಕೂಡ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿ ಕೋರ್ಟ್‌ನ ನ್ಯಾಯಮೂರ್ತಿ ಜಯಂತ್ ಕುಮಾರ್ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪು ಎತ್ತಿಹಿಡಿದಿದ್ದಾರೆ.
ತಮ್ಮನಿಗಾಗಿ ಜೈಲು ಸೇರಿದ್ದರೂ ನನ್ನ ವಿರುದ್ಧ ಪತ್ನಿ ಕಣಕ್ಕಿಳಿಸಿದ: ಸೋಮಶೇಖರ ರೆಡ್ಡಿ
ಅಕ್ರಮ ರಿವಾಲ್ವರ್ ಹೊಂದಿದ್ದಕ್ಕೆ ಶಿಕ್ಷೆ ಪ್ರಕಟ: 2022ರ ಅ.10ರಂದು ಅಕ್ರಮ ರಿವಾಲ್ವರ್ ಹೊಂದಿದ್ದ ಆರೋಪದಲ್ಲಿ ಶಾಸಕ ಸೋಮಶೇಖರ ರೆಡ್ಡಿಗೆ ಶಿಕ್ಷೆಯಾಗಿತ್ತು. ಪ್ರೋಬೇಷನ್ ಆಫ್ ಅಫೆಂಡರ್ ಆ್ಯಕ್ಟ್ ಅಡಿ ಷರತ್ತು ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಉತ್ತಮ ನಡೆತ ಆಧಾರದಲ್ಲಿ ಷರತ್ತು ವಿಧಿಸಿ ಬಿಡುಗಡೆ ಮಾಡಲಾಗಿತ್ತು. 50,000 ರೂ. ಮೊತ್ತಕ್ಕೆ ಬಾಂಡ್ ಸಲ್ಲಿಸಬೇಕು. ಯಾವುದೇ ಅಪರಾಧ ಚಟುವಟಿಕೆ ನಡೆಸಬಾರದು. ಸುತ್ತಮುತ್ತ ಶಾಂತಿ, ಉತ್ತಮ ನಡವಳಿಕೆ ಕಾಪಾಡಿಕೊಳ್ಳಬೇಕು. ಕೋರ್ಟ್ ಅನುಮತಿ ಇಲ್ಲದೆ ವಿದೇಶ ಪ್ರವಾಸ ಮಾಡುವಂತಿಲ್ಲ. 1 ವರ್ಷದವರೆಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿರಬೇಕು ಎಂದು ಅನೇಕ ಷರತ್ತುಗಳನ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿತ್ತು.
ಅವಧಿ ಮುಗಿದಿದ್ದರೂ ರಿವಾಲ್ವರ್ ಹೊಂದಿದ್ದ ಶಾಸಕ: ಈಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ಕೂಡ ಮ್ಯಾಜೀಸ್ಟ್ರೇಟ್ ಕೋರ್ಟ್ ಆದೇಶ ಎತ್ತಿಹಿಡಿಯಲಾಗಿದ್ದು, 2009ರಲ್ಲಿ ಪರವಾನಗಿ ಅವಧಿ ಮುಗಿದರೂ ರಿವಾಲ್ವರ್ ಇಟ್ಟುಕೊಂಡಿದ್ದ ರೆಡ್ಡಿ ಸೋಮಶೇಖರ್ ರೆಡ್ಡಿ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆಯಲ್ಲಿ ಕೇಸ್ ದಾಖಲಾಗಿತ್ತು. ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್ ಆಧರಿಸಿ ಸೋಮಶೇಖರ್ ರೆಡ್ಡಿಗೆ ಶಿಕ್ಷೆ ಪ್ರಕಟವಾಗಿತ್ತು.
ಬಳ್ಳಾರಿ ಅಧಿದೇವತೆ ಕನಕದುರ್ಗಮ್ಮ ಸಿಡಿ ಬಂಡೆ ಉತ್ಸವ; ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ