Missing Boy Found Dead: 2 ವರ್ಷದ ಬಾಲಕನ ಶವ ಪತ್ತೆ; ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕಂಬನಿ

By BK Ashwin  |  First Published Sep 13, 2022, 10:48 AM IST

ಅಮೆರಿಕದ ಆಕ್ಫುಸ್ಕೀ ಕೌಂಟಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದ 2 ವರ್ಷದ ಬಾಲಕ ಮೃತಪಟ್ಟಿದ್ದು, ಆತನ ಶವ ಪತ್ತೆಯಾಗಿದೆ. ಬಾಲಕನಿಗಾಗಿ 20 ಕ್ಕೂ ಹೆಚ್ಚು ತನಿಖಾ ಸಂಸ್ಥೆಗಳು ಹುಡುಕಾಟ ನಡೆಸಿದ್ದವು. 


ಅಮೆರಿಕದ ಆಕ್ಫುಸ್ಕೀ ಕೌಂಟಿಯಿಂದ (Okfuskee County) ನಾಪತ್ತೆಯಾಗಿದ್ದ 2 ವರ್ಷದ ಬಾಲಕ ಮೃತಪಟ್ಟಿದ್ದು, ಆತನ ಶವ ಪತ್ತೆಯಾಗಿದೆ ಎಂದು ಸೋಮವಾರ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಓಕೆಮಾ (Okemah) ಬಳಿ ಬಾಲಕ ನಾಪತ್ತೆಯಾಗಿದ್ದ, ಕಡೆಯ ಬಾರಿ ಕಪ್ಪು ಬಣ್ಣದ ಪೈಜಾಮಾ ಧರಿಸಿದ್ದ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನು, ಆತ ಸೋಮವಾರ ತಡರಾತ್ರಿ 1: 30 ರಿಂದ ಬೆಳಗ್ಗೆ 6 :30 ರವರೆಗೆ ಬಾಲಕ ಅರೆಸ್‌ ಮ್ಯೂಸ್ ತನ್ನ ಮನೆಯಿಂದಲೇ ಕಾಣೆಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ತನ್ನ ಪೋಷಕರ ಜತೆ ಆತ ರಾತ್ರಿ 1: 30 ರ ವೇಳೆಗೆ ಮಲಗಿದ್ದ, ನಂತರ ಬಾಲಕನ ತಂದೆ 6:30 ರ ವೇಳೆಗೆ ಎಚ್ಚರವಾದಾಗ ಆತ ಮನೆಯಲ್ಲಿ ಇರಲಿಲ್ಲ ಎಂಬುದನ್ನು ತಂದೆ ಕಂಡುಕೊಂಡು ಬಳಿಕ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮನೆಯಿಂದ ಹೊರಕ್ಕೆ ಹೋಗಲು 3 ಲಾಕಿಂಗ್‌ ಕಾರ್ಯವಿಧಾನಗಳಿದ್ದರೂ, ಆತ ಹೊರಕ್ಕೆ ಹೋಗಿದ್ದಾನೆ ಎಂದೂ ತಂದೆ ಹೇಳಿದ್ದಾರೆ. 
 
ಇನ್ನು, ಬಾಲಕನನ್ನು ಹುಡುಕಲು ಡ್ರೋನ್‌ (Drone), ಶ್ವಾನ ದಳ (Dog Squad), ಏರ್‌ಬೋಟ್‌ಗಳಿಂದ (Air Boats) ಹಿಡಿದು ನಾನಾ ವಿಧಾನಗಳಲ್ಲಿ ಹುಡುಕಿದರೂ ಆತ ಹಲವು ಗಂಟೆಗಳ ಕಾಲ ಪತ್ತೆಯಾಗಿರಲಿಲ್ಲ ಎಂದು ಸ್ಥಳೀಯ ಮಾಧ್ಯಮ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅರೆಸ್‌ ಮ್ಯೂಸ್‌ ಮೃತಪಟ್ಟಿದ್ದು ದುರ್ದೈವದ ಸಂಗತಿಯಾಗಿದ್ರೂ, ಆತನಿಗಾಗಿ ಹುಡುಕಾಟ ನಡೆಸಿದ ಸಂಗತಿ ಮಾತ್ರ ಸಾಮಾನ್ಯದ್ದಲ್ಲ ಎನ್ನಲಾಗಿದೆ. ಎಕೆಂದರೆ ಹೆದ್ದಾರಿ 56 ರಲ್ಲಿ (Highway 56) ಸುಮಾರು 20 ತನಿಖಾ ಸಂಸ್ಥೆಗಳು ಆತನಿಗಾಗಿ ಹುಡುಕಾಟ ನಡೆಸಿದ್ದರು ಎಂದೂ ಅವರು ಹೇಳಿದ್ದಾರೆ. 

ಇದನ್ನು ಓದಿ: ರಾಮನಗರ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು MBBS ವಿದ್ಯಾರ್ಥಿಗಳು ನಾಪತ್ತೆ
 
ಅಶಾಂತಿ ಅಲರ್ಟ್‌ 

 ಇನ್ನು, ಬಾಲಕ ಅರೆಸ್‌ ಪತ್ತೆಗಾಗಿ ಓಕ್ಲಹೋಮಾ ಹೈವೇ ಪ್ಯಾಟ್ರಲ್‌ ಪೊಲೀಸರು ಆರಂಭದಲ್ಲಿ ‘ಅಶಾಂತಿ ಅಲರ್ಟ್‌’ (‘Ashanti Alert’) ಅನ್ನು ಸೋಮವಾರ ನೀಡಿದ್ದರು. ಆದರೆ, ಅದು ದೋಷವಾಗಿದೆ ಎಂದು ಡಿಪಿಎಸ್‌ ಹೇಳಿದೆ ನಂತರ, ಮಧ್ಯಾಹ್ನ 3 ಗಂಟೆಯ ಬಳಿಕ ನಾಪತ್ತೆಯಾದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ 918-732-7800ಗೆ ಲೈಟ್‌ಹಾರ್ಸ್‌ ಪೊಲೀಸರನ್ನು ಕರೆ ಮಾಡಿ ಎಂದೂ ಹೇಳಲಾಗಿತ್ತು. 

Tap to resize

Latest Videos

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬಾಲಕನ ಶವ ಆಕ್ಫುಸ್ಕೀ ಕೌಂಟಿಯಲ್ಲೇ ಸೆಮಿನೋಲ್‌ ಕೌಂಟಿ ಲೈನ್‌ (Seminole County Line) ಬಳಿ ಪತ್ತೆಯಾಗಿದೆ. ಆದರೆ, ಆತ ತನ್ನ ಮನೆಯಿಂದ ಹೇಗೆ ಹೊರಗೆ ಹೋದ ಎನ್ನುವುದೇ ಇನ್ನೂ ನಿಗೂಢವಾಗಿದೆ. ಬೇರೆ ಯಾರಾದರೂ ಆತನನ್ನು ಹೊರಗೆ ಕರೆದುಕೊಂಡು ಹೋಗಿದ್ದರಾ ಅಥವಾ ಬೇರೆ ಯಾರದ್ದಾದರೂ ಕೈವಾಡ ಇದೆಯಾ ಎಂಬ ಬಗ್ಗೆ ತನಿಖೆ ನಡೆಸುವುದಾಗಿಯೂ ತನಿಖಾ ಸಂಸ್ಥೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಮಂಗನ ಕೈಲಿ ಮಾಣಿಕ್ಯ: ಅಪ್ಪ ಬೈದರೆಂದು ಮನೆಬಿಟ್ಟು ಹೋದ ಬಿಂದಾಸ್ ಕಾವ್ಯ

ಬಾಲಕ ಅರೆಸ್‌ ಮ್ಯೂಸ್‌ ಮೃತಪಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ. ಹಲವರು ಸುದ್ದಿ ವಾಹಿನಿಗಳ ಲಿಂಕ್‌ ಶೇರ್‌ ಮಾಡಿಕೊಂಡು #RIP ಎಂದು ಮೆಸೇಜ್‌ ಹಾಕಿದ್ದರೆ, ಇನ್ನು ಕೆಲವರು ಬಾಲಕನ ಫೋಟೋ ಪೋಸ್ಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 

Missing 2 year old Ares Muse has been found deceased. So heartbreaking. Please keep the community in your thoughts and prayers. Rest In Peace sweet boy. pic.twitter.com/Rm5s50yUsW

— Rose (@901Lulu)
click me!