ಬೆಂಗಳೂರು: ಡ್ರಗ್ಸ್‌ ಹೆಸರಿನಲ್ಲಿ ವಕೀಲೆಯನ್ನು ಡಿಜಿಟಲ್‌ ಆರೆಸ್ಟ್‌ ಮಾಡಿ, ನಗ್ನಗೊಳಿಸಿ ಹಣ ಸುಲಿಗೆ..!

By Kannadaprabha News  |  First Published Apr 12, 2024, 6:44 AM IST

29 ವರ್ಷದ ವಕೀಲೆ ಮೋಸ ಹೋಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 


ಬೆಂಗಳೂರು(ಏ.12):  ಡ್ರಗ್ಸ್ ಪ್ರಕರಣದಲ್ಲಿ ಬಂಧಿಸುವುದಾಗಿ ಮಹಿಳಾ ವಕೀಲರೊಬ್ಬರಿಗೆ ಕಸ್ಟಮ್ಸ್ ಹಾಗೂ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಬಳಿಕ ಅವರ ನಗ್ನ ವಿಡಿಯೋ ಚಿತ್ರೀಕರಿಸಿಕೊಂಡು ಸೈಬರ್ ವಂಚಕರು ಹಣ ಸುಲಿಗೆ ಮಾಡಿರುವ ಕೃತ್ಯ ನಡೆದಿದೆ.

29 ವರ್ಷದ ವಕೀಲೆ ಮೋಸ ಹೋಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಫೆಡೆಕ್ಸ್‌ ಇಂಟರ್ ನ್ಯಾಷನಲ್ ಕೊರಿಯರ್ ಕಂಪನಿ ಸಿಬ್ಬಂದಿ ಹೆಸರಿನಲ್ಲಿ ಸಂತ್ರಸ್ತೆಯನ್ನು ಸಂಪರ್ಕಿಸಿದ ಆರೋಪಿಗಳು, ಬಳಿಕ ನಿಮ್ಮ ಹೆಸರಿನಲ್ಲಿ ಡ್ರಗ್ಸ್ ವಿದೇಶದಿಂದ ಡ್ರಗ್ಸ್ ಪಾರ್ಸಲ್‌ ಬಂದಿದೆ ಎಂದಿದ್ದಾರೆ. ಬಳಿಕ ಸಿಬಿಐ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಿಚಾರಣೆ ಮಾಡುವ ನಾಟಕವಾಡಿ ಸಂತ್ರಸ್ತೆಯನ್ನು ಬೆದರಿಸಿ ₹14 ಲಕ್ಷ ವಸೂಲಿ ಮಾಡಿದ್ದಾರೆ.

Tap to resize

Latest Videos

ಬೆಂಗಳೂರು: ಮಾನವ ಹಕ್ಕುಗಳ ಸಮಿತಿ ಹೆಸರಲ್ಲಿ ಕಾರ್ಖಾನೆ ಮಾಲೀಕರ ಬೆದರಿಸಿ ಸುಲಿಗೆ

ಹೇಗೆ ವಂಚನೆ?:

ಸಂತ್ರಸ್ತೆ ವಕೀಲರಿಗೆ ಏ.3ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಫೆಡ್‌ ಎಕ್ಸ್‌ ಕೊರಿಯರ್ ಕಂಪನಿ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಥಾಯ್ಲೆಂಡ್‌ಗೆ ಕಳುಸಿದ ಪಾರ್ಸಲ್ ಮರಳಿ ಬಂದಿದೆ. ಇದರಲ್ಲಿ ಪಾಸ್‌ಪೋರ್ಟ್‌, ಮೂರು ಕ್ರೆಡಿಟ್‌ ಕಾರ್ಡ್‌ಗಳು ಹಾಗೂ ನಿಷೇಧಿತ ಎಂಡಿಎಂಎ 150 ಡ್ರಗ್ಸ್ ಕ್ರಿಸ್ಟೆಲ್ ಪತ್ತೆಯಾಗಿದೆ ಎಂದಿದ್ದಾನೆ.

ಆಗ ತನಗೂ ಆ ಪಾರ್ಸಲ್‌ಗೂ ಸಂಬಂಧಿವಿಲ್ಲ ಎಂದು ವಕೀಲರು ಹೇಳಿದ್ದಾರೆ. ಆದರೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿ ಸೈಬರ್ ಅಪರಾಧ ತಂಡಕ್ಕೆ ಕರೆ ವರ್ಗಾಯಿಸುವುದಾಗಿ ಹೇಳಿ ಮತ್ತೊಬ್ಬ ವಂಚಕ ತಂಡಕ್ಕೆ ಕರೆ ಸಂಪರ್ಕಿಸಿದ್ದಾನೆ. ಅಲ್ಲಿಂದ ಮಹಿಳೆಗೆ ನಾನಾ ರೀತಿ ಬೆದರಿಸಿ ಹಣ ವಸೂಲಿ ಶುರುವಾಗಿದೆ. ಮೊದಲು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು, ನಂತರ ಸಿಬಿಐ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಆಕೆಗೆ ಬೆದರಿಸಿದ್ದಾರೆ. ಅಲ್ಲದೆ ರಾತ್ರಿಯಿಡಿ ನಿದ್ರೆ ಮಾಡಲು ಸಹ ಬಿಡದೆ ಆಕೆಯನ್ನು ರೂಮ್‌ನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದರು. ಬಳಿಕ ಡ್ರಗ್ಸ್ ತಪಾಸಣೆ ಎಂದು ಹೇಳಿ ವಿಡಿಯೋ ಕಾಲ್‌ನಲ್ಲಿ ನಗ್ನಗೊಳಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಈ ವಿಡಿಯೋ ಮುಂದಿಟ್ಟು ಬೆದರಿಸಿದ ಆರೋಪಿಗಳು, ಹಣ ಕೊಡದೆ ಹೋದರೆ ಡಾರ್ಕ್ ವೆಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ವಿಡಿಯೋ ಅಪ್‌ ಲೋಡ್ ಮಾಡುವುದಾಗಿ ಧಮ್ಕಿ ಹಾಕಿದ್ದರು. ಈ ಬೆದರಿಕೆ ಹೆದರಿದ ಆಕೆಯಿಂದ ಹಂತ ಹಂತವಾಗಿ ₹14 ಲಕ್ಷ ವಸೂಲಿ ಮಾಡಿದ್ದರು. ಕೊನೆಗೆ ಈ ಹಿಂಸೆ ಸಹಿಸಲಾರದೆ ಸೈಬರ್ ಕ್ರೈಂ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

click me!