ನಿಧಿಗಾದಿ ಮಧ್ಯೆರಾತ್ರಿ ದೇವಸ್ಥಾನದಲ್ಲಿ ಕಿಡಿಗೇಡಿಗಳು ಬಂಡೆ ಕೊರೆದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ವಡ್ಡರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ತುಮಕೂರು (ಆ.4): ನಿಧಿಗಾದಿ ಮಧ್ಯೆರಾತ್ರಿ ದೇವಸ್ಥಾನದಲ್ಲಿ ಕಿಡಿಗೇಡಿಗಳು ಬಂಡೆ ಕೊರೆದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ವಡ್ಡರಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬನವಾಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ನಿಧಿ ಇದೆಯೆಂದು ಮಧ್ಯರಾತ್ರಿ ನುಗ್ಗಿರುವ ಕಿಡಿಗೇಡಿಗಳು. ದೇವಸ್ಥಾನದ ಮೂರು ಕಡೆ ಬಂಡೆ ಕೊರೆದಿದ್ದಾರೆ. ಬಂಡೆ ಕೊರೆದ ಸ್ಥಳದಲ್ಲಿ ಅರಿಶಿನ ಕುಂಕುಮ, ತೆಂಗಿನಕಾಯಿ ಹಾಗೂ ವಸ್ತುವನ್ನಿಟ್ಟು ಪೂಜೆ ಮಾಡಿರುವ ಕಿಡಿಗೇಡಿಗಳು. ಬಂಡೆ ಕೊರೆದ ಬಳಿಕವೂ ನಿಧಿ ಸಿಗದ್ದಕ್ಕೆ ಅರ್ಧಕ್ಕೆ ಬಿಟ್ಟು ಪರಾರಿಯಾಗಿರುವ ಕಿಡಿಗೇಡಿಗಳು
ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಚಿತ್ರಹಿಂಸೆ ಕೊಟ್ಟ ಪ್ರಕರಣ; ರಾಮಕೃಷ್ಣಮಠದ ಗುರೂಜಿ ಬಂಧನ
ಬೆಳಗ್ಗೆ ಎಂದಿನಂತೆ ದೇವಸ್ಥಾನದ ಅರ್ಚಕ ಪೂಜೆ ಮಾಡಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದಲ್ಲಿ ಜಮಾಯಿಸಿದ ಗ್ರಾಮಸ್ಥರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಿಧಿ ಆಸೆಗೆ ದೇವಸ್ಥಾನದಲ್ಲಿ ಮೂರ್ತಿ ಒಡೆಯುವ, ಬಂಡೆ ಕೊರೆಯುವ ಕಿಡಿಗೇಡಿಗಳು ಹೆಚ್ಚಾಗಿದ್ದು ದೇವಸ್ಥಾನಕ್ಕೆ ಭದ್ರತೆ ಕೊಡುವಂತ ಗ್ರಾಮಸ್ಥರು ಮನವಿ ಮಾಡಿದ್ದಾರೆ.